ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಸದನದಲ್ಲಿ ಅಗತ್ಯವಿರುವಷ್ಟು ಉತ್ತರ ಕೊಡಲಾಗಿದೆ. ಇನ್ನೂ ಹೆಚ್ಚಿನ ಉತ್ತರ ನಾವು ಕೊಡಲು ಶಕ್ತವಾಗಿದ್ದೇವೆ. ಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ. ಅದರ ಅರಿವು ನಮಗಿದೆ. ಎಲ್ಲರೂ ಆದೇಶಕ್ಕೆ ಬದ್ಧ ಆಗಿರಬೇಕು ಎಂದು ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರು: ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ (ಫೆಬ್ರವರಿ 15) ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಸರ್ಕಾರದ ಕರ್ತವ್ಯ ಮತ್ತು ಬದ್ಧತೆ. ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ, ಸಮಸ್ಯೆ ಆದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಅದನ್ನು ನಾವು ಪರಿಶೀಲನೆ ಮಾಡ್ತಿದ್ದೇವೆ ಎಂದು ಅರಗ ಜ್ಙಾನೇಂದ್ರ ತಿಳಿಸಿದ್ದಾರೆ.

ಹಿಜಾಬ್ ವಿವಾದದ ಬಗ್ಗೆ ಸದನದಲ್ಲಿ ಉತ್ತರ ಕೊಡಲಾಗುವುದು. ನಮಗೂ ಸಮವಸ್ತ್ರ ಪಾಲನೆ ವಿಚಾರದಲ್ಲಿ ಸ್ಪಷ್ಟತೆ ತರುವ ಸದುದ್ದೇಶ ಇದೆ. ಇವತ್ತು ಸದನದಲ್ಲಿ ಈ ವಿಚಾರ ಪ್ರಸ್ತಾಪ ಆಯ್ತು. ಅಗತ್ಯವಿರುವಷ್ಟು ಉತ್ತರ ಕೊಡಲಾಗಿದೆ. ಇನ್ನೂ ಹೆಚ್ಚಿನ ಉತ್ತರ ನಾವು ಕೊಡಲು ಶಕ್ತವಾಗಿದ್ದೇವೆ. ಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ. ಅದರ ಅರಿವು ನಮಗಿದೆ. ಎಲ್ಲರೂ ಆದೇಶಕ್ಕೆ ಬದ್ಧ ಆಗಿರಬೇಕು ಎಂದು ಜ್ಞಾನೇಂದ್ರ ಹೇಳಿದ್ದಾರೆ.

ಕಾಶ್ಮೀರ ವಿದ್ಯಾರ್ಥಿಗಳನ್ನ ಪ್ರತ್ಯೇಕವಾಗಿ ಕಾಣುತ್ತಿಲ್ಲ: ಕಮಲ್ ಪಂತ್ ಸ್ಪಷ್ಟನೆ

ಮುನ್ನೆಚ್ಚರಿಕಾ ಕ್ರಮವಾಗಿ ಮಾಹಿತಿ ಕೇಳಿರುವುದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಅಸಮಾಧಾನ ಹಿನ್ನೆಲೆ ಕಾಶ್ಮೀರ ವಿದ್ಯಾರ್ಥಿಗಳನ್ನ ಪ್ರತ್ಯೇಕವಾಗಿ ಕಾಣುತ್ತಿಲ್ಲ. ಭೌಗೋಳಿಕ ಹಿನ್ನೆಲೆಯನ್ನ ಲೆಕ್ಕಿಸದೆ ಪೊಲೀಸರು ವಿದ್ಯಾರ್ಥಿಗಳ ಭದ್ರತೆಗಿರಲಿದ್ದೇವೆ. ಕಾಶ್ಮೀರಿ ವಿದ್ಯಾರ್ಥಿಗಳ ಭದ್ರತೆಗೆ ನಾವು ಬದ್ಧ ಎಂದು ಟ್ವೀಟ್ ಮೂಲಕ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ.

WhatsApp
Facebook
Telegram
error: Content is protected !!
Scroll to Top