ಮುಸ್ಲಿಂ ಪುರುಷರು ಏನು ಮಾಡಿಬಿಡ್ತಾರೆಂಬ ಭಯಕ್ಕೆ ಮಹಿಳೆಯರು ಬುರ್ಖಾ ಧರಿಸುತ್ತಾರೆ, ಜಮೀರ್ ಹೇಳಿಕೆ ಸಮರ್ಥಿಸಿಕೊಂಡ RSS ಮುಖಂಡ

ಹಿಜಾಬ್ ಸಂಬಂಧ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಹಿಜಾಬ್ ವಿವಾದ ಪೂರ್ವಯೋಜಿತವಾಗಿದೆ. ಹಿಜಾಬ್ ಹಿಂದೆ ಕೆಲ ಸಂಘಟನೆಗಳ ಷಡ್ಯಂತ್ರವಿದೆ. ದೇಶವನ್ನ ವಿಭಜನೆ ಮಾಡುವ ಷಡ್ಯಂತರ ನಡೆದಿದೆ.

ಮುಸ್ಲಿಂ ಪುರುಷರು ಏನು ಮಾಡಿಬಿಡ್ತಾರೆಂಬ ಭಯಕ್ಕೆ ಮಹಿಳೆಯರು ಬುರ್ಖಾ ಧರಿಸುತ್ತಾರೆ, ಜಮೀರ್ ಹೇಳಿಕೆ ಸಮರ್ಥಿಸಿಕೊಂಡ RSS ಮುಖಂಡ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಕಿಚ್ಚು ಕಾಡ್ಗಿಚ್ಚಿನಂತೆ ವ್ಯಾಪಿಸ್ತಿದೆ. ಹೈಕೋರ್ಟ್ ಮಧ್ಯಂತರ ಆದೇಶವನ್ನ ಹೊರಡಿಸಿದ್ರೂ. ಸರ್ಕಾರ ಸಮವಸ್ತ್ರ ರೂಲ್ಸ್ ಜಾರಿಗೆ ತಂದಿದ್ರೂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲ್ಲ ಅಂತಾ ಪಟ್ಟು ಹಿಡಿದು ನಿಂತಿದ್ದಾರೆ. ಸದ್ಯ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಸದ್ಯ ಹಿಜಾಬ್ ವಿವಾದ ಪೂರ್ವಯೋಜಿತವಾಗಿದೆ ಎಂದು RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ.

ಹಿಜಾಬ್ ಸಂಬಂಧ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಹಿಜಾಬ್ ವಿವಾದ ಪೂರ್ವಯೋಜಿತವಾಗಿದೆ. ಹಿಜಾಬ್ ಹಿಂದೆ ಕೆಲ ಸಂಘಟನೆಗಳ ಷಡ್ಯಂತ್ರವಿದೆ. ದೇಶವನ್ನ ವಿಭಜನೆ ಮಾಡುವ ಷಡ್ಯಂತರ ನಡೆದಿದೆ. ಈ ಬಗ್ಗೆ NIA ತನಿಖೆಯಾಗಬೇಕು. ಜಮೀರ್ ಅಹ್ಮದ್ ಹೇಳಿದ್ದು ಅವರ ಸಮಾಜದ ಬಗ್ಗೆ. ಮುಸ್ಲಿಂ ಮಹಿಳೆಯರು ಮನೆಯಲ್ಲೂ ಬುರ್ಖಾ ಹಾಕ್ತಾರೆ. ಮುಸ್ಲಿಂ ಪುರುಷರು ಏನು ಮಾಡಿಬಿಡ್ತಾರೆಂಬ ಭಯಕ್ಕೆ. ಅರಬ್ ರಾಷ್ಟ್ರಗಳಲ್ಲಿ ಮಹಿಳೆಯರು ಬುರ್ಖಾ ಧರಿಸುತ್ತಿದ್ದರು. ಯಾಕಂದ್ರೆ ಅಲ್ಲಿ ಅವರ ಮೇಲೆ ಅತ್ಯಾಚಾರ ನಡೆಯುತ್ತೆಂದು ಬುರ್ಖಾ ಹಾಕುತ್ತಾರೆ. ಅದೇ ರೀತಿ ಇಲ್ಲಿಯೂ ಮುಸ್ಲಿಂ ಮಹಿಳೆಯರು ಮನೆಯಲ್ಲೂ ಬುರ್ಖಾ ಹಾಕ್ತಾರೆ. ಕಾರಣ ಅವರ ಸಮುದಾಯದ ಪುರುಷರಿಂದ ರಕ್ಷಣೆ ಪಡೆಯೋಕೆ. ವಿದ್ಯಾರ್ಥಿಗಳು ಹಿಂದೆ ಯಾವ ರೀತಿ ಕಾಲೇಜುಗಳಿಗೆ ಬರ್ತಾಯಿದ್ರೋ ಹಾಗೇ ಬರಲಿ. ಸರ್ಕಾರ ಕ್ರಮಗಳನ್ನ ತೆಗೆದುಕೊಳ್ಳಲು ಹಿಂಜರಿಯಬಾರದು. ಹಿಜಾಬ್ ವಿವಾದ ಸೃಷ್ಟಿಯಾದಾಗ ರಜೆ ಘೋಷಣೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಬೆಂಗಳೂರಿನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದ್ರು.

ಹಿಂದೂಗಳು ಯಾವತ್ತೂ ಆ್ಯಕ್ಷನ್‌ಗೆ ಹೋಗುವುದಿಲ್ಲ. ರಿಯಾಕ್ಷನ್ ಮಾತ್ರ ಮಾಡುತ್ತಾರೆ. ಅವರು ಹಿಜಾಬ್ ಧರಿಸಿದ್ದಕ್ಕೆ ಕೇಸರಿ ಶಾಲು ಹಾಕಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆ. ಆದರೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿದ್ದಾರೆ. ಇವರ ಹಿಂದೆ ಮುಸ್ಲಿಂ ಸಂಘಟನೆಗಳ ಕೈವಾಡವಿದೆ. ನಾಳೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ರೂ, ಇವರು ಹಿಜಾಬ್ ಧರಿಸಿಕೊಂಡು ಬರ್ತಾರೆ ಎಂದು RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುವುದು ಸರಿಯಲ್ಲ
ಇನ್ನು ಹಿಜಾಬ್ ವಿವಾದದ ಬಗ್ಗೆ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ವಿವಾದ ದುರದೃಷ್ಟಕರ ಎಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಬಿ.ವೈ.ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುವುದು ಸರಿಯಲ್ಲ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಬೆರೆಸ್ತಿದೆ ಎಂದಿದ್ದಾರೆ.

WhatsApp
Facebook
Telegram
error: Content is protected !!
Scroll to Top