ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ನಗರ ಘಟಕ ದಿಂದ ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ

ಭಟ್ಕಳ: ಪಟ್ಟಣ ಪಂಚಾಯತ್ ಜಾಲಿ ವ್ಯಾಪ್ತಿಯ 20 ವಾಡ೯ಗಳಲ್ಲಿ ಚರಂಡಿ ಸ್ವಚ್ಚ ಮತ್ತು ಸೊಳ್ಳೆಗಳ ಔಷಧಿ ಸಂಪಡಿಸುವಿಕೆ ಕುರಿತು. ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು

ಮನವಿಯಲ್ಲಿ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 20 ವಾರ್ಡಗಳಲ್ಲಿ ಚರಂಡಿಗಳು ಸ್ವಚ್ಛವಾಗದೆ ಇರುವದರಿಂದ ಮತ್ತು ನಗರದ ಸುತ್ತಮುತ್ತ ಸ್ವತ್ಛತೆ ಇರುವದರಿಂದ ಜಾಲಿ ಪಟ್ಟಣದಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದು ಇದರಿಂದ ಜನರಿಗೆ ಕಾಲರಾ, ಮಲೇರಿಯಾ ಮತ್ತು ಮತ್ತು ಇನ್ನಿತರ ಮಹಾ ಮಾರಿ ರೋಗಗಳು ಅಂಟಿಕೊಳ್ಳುವ ದರಿಂದ ಜನರು ಆತಂಕದಲ್ಲಿದ್ದಾರೆ ಈಗಾಗಲೇ ರಾಜ್ಯದಲ್ಲಿ ಕರೋನಾ ಎಂಬ ಮಹಾಮಾರಿಯಿಂದ ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಕೂಡಲೇ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಪಟ್ಟಣದಲ್ಲಿ ಎಲ್ಲ ಕಡೆ ಸ್ವಚ್ಚತೆ ಮಾಡಿಸಿ ಸೊಳ್ಳೆಗಳ ನಾಶಕ್ಕಾಗಿ ಔಷಧಿ ಸಿಂಪಡಿಸುವಿಕೆ ಯನ್ನು ಮಾಡಬೇಕಾಗಿದೆ.ಇಲ್ಲದಿದ್ದರೆ ಜನರ ಆರೋಗ್ಯ ಸ್ಥಿತಿಯು ಚಿಂತಾಜನಕವಾಗುವ ಸ್ಥಿತಿಯಲ್ಲಿದೆ ಕೂಡಲೇ ಮುಖ್ಯ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ 15 ದಿನಗಳ ಒಳಗೆ ಪಟ್ಟಣ ಪಂಚಾಯತ ಮುಂದೆ ಉಗ್ರ ಹೋರಾಟ ಮಾಡಿ ಕಚೇರಿಯನ್ನು ಬೀಗ ಹಾಕುವಲ್ಲಿ ಜನರು ಮುಂದಾಗ ಬೇಕಾಗುತ್ತಾರೆ .ಆದ್ದರಿಂದ ತಾವುಗಳು ಆದಷ್ಟು ಬೇಗ ಇದರ ಬಗ್ಗೆ ಕ್ರಮ ಕೈಗೊಂಡು ಜನರ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಮನವಿ ಸಲ್ಲಿಸಿದರು

ಈ ಸಂದರ್ಬದಲ್ಲಿ ನಗರ ಘಟಕ ಪ್ರಧಾನ ಕಾರ್ಯದರ್ಶಿ ಜಹೂರ್ ಲಾತ್ ಪಕ್ಷದ ಮುಖಂಡರು,ಶೌಕತ್ ಖತೀಬ್,ರಿಯಾಸತ್ ಭಾಯ್, ಸಲಿಕ್ ಶೇಖ್,ರಾಸಿಖ್ ಮೊಹ್ತೇಶಾಮ್ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top