‘ ವೋಟ್ ಬ್ಯಾಂಕ್ ರಾಜಕೀಯ’ಕ್ಕೆ ಪ್ರಮುಖ ಅಸ್ತ್ರವಾಗುತ್ತಾ ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದ.!?

ಕಳೆದೊಂದುವಾರ ದಿಂದ ಕರ್ನಾಟಕದಲ್ಲಿ ಪರಿಸ್ಥಿತಿ ಬದಲಾಗಿದೆ . ಗೇಟಿನಲ್ಲಿ ವಾಚ್ ಮ್ಯಾನ್ ಬದಲು ಪ್ರಾಂಶುಪಾಲರೇ ನಿಲ್ಲಬೇಕು , ವಿದ್ಯಾರ್ಥಿ ನಮ್ಮ ಕಾಲೇಜಿನವನೋ ಅಲ್ಲವೋ ಎನ್ನುವ ಗೊಂದಲ ಸೃಷ್ಠಿಯಾಗಿದೆ. ಮೊದಲು ಕೇಸರಿ ಶಾಲೋ , ಅಲ್ಲವೇ ಹಿಜಾಬ್ ಅಥವಾ ಬುರ್ಖಾವೋ ಎಂದು ನೋಡಿ , ಅವರಿಂದ ಅದನ್ನು ತಗೆಸಿ , ತಗೆಯದಿದ್ದರೆ ಗೇಟ್‌ಗೆ ಬೀಗ ಹಾಕಿ ಹೊರಗೆ ನಿಲ್ಲಿಸಬೇಕು .

ಆರಂಭದಲ್ಲಿ ಕೇವಲ ಉಡುಪಿಯ ಸರಕಾರಿ ಕಾಲೇಜಿನಲ್ಲಿ ಮಾತ್ರ  ಆರೇಳು ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದ್ದ ಈ ವಿಷಯ , ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ . ವಿವಾದ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ‘ ವೈರಸ್ ‘ ರೀತಿ ಹಬ್ಬುತ್ತಿದ್ದಂತೆ , ಕಾಲೇಜುಗಳಲ್ಲಿ ಪಾಠ – ಪ್ರವಚನಕ್ಕಿಂತ ಹಿಜಾಬ್ ಹಾಗೂ ಕೇಸರಿ ಶಾಲು ತಗೆಸಿ ತರಗತಿಯೊಳಗೆ ವಿದ್ಯಾರ್ಥಿಯನ್ನು ಕೂರಿಸುವುದೇ ಉಪನ್ಯಾಸಕ ಏಕಮಾತ್ರ ಕೆಲಸವಾಗಿದೆ . ಸದ್ಯಕ್ಕೆ 20 ಕ್ಕೂ ಜಿಲ್ಲೆಗಳಲ್ಲಿರುವ ಕೆಲ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿ ಗಲಾಟೆಯಾಗುತ್ತಿದೆ . ಆದರೆ ಹಬ್ಬುತ್ತಿರುವ ವೇಗ ನೋಡಿದರೆ , ‘ಶಾಂತವಾಗಿರುವ ಕಾಲೇಜುಗಳಿಗೂ ಈ ಧರ್ಮದ ಗಲಾಟೆ ‘ ಹುಟ್ಟುವುದರಲ್ಲಿ ಅನುಮಾನವಿಲ್ಲ.ಕಳೆದ ಎರಡು ವರ್ಷದಿಂದ ಕರೋನಾ ಕಾರಣದಿಂದ ಕಾಲೇಜುಗಳು ಸರಿಯಾಗಿ ನಡೆದಿಲ್ಲ , ಮಕ್ಕಳಿಗೆ ಸಿಲೆಬಸ್ ಅರ್ಥವಾಗಿಲ್ಲ ಎನ್ನುವ  ಅನೇಕ ವಿದ್ಯಾರ್ಥಿಗಳು ಈಗ ನಮ್ಮ ಧರ್ಮ ಸಂಕೇತದಂತಿರುವ ಹಿಜಾಬ್ ಹಾಗೂ ಶಾಲು ಹಾಕಿಕೊಂಡೇ ತರಗತಿಗೆ ಬರಲು ಅವಕಾಶವಿಲ್ಲದಂತಾಗಿದೆ.

ಮುಸ್ಲಿಂರು ಹಿಜಾಬ್‌ ಧರಿಸಿದರೆ ಹಿಂದೂಗಳು ಕೇಶರಿ ಶಾಲು ಧರಿಸುತ್ತಾರೆ ಹಾಗಾದ್ದರೆ  ಶಾಲಾ ಸಮವತ್ಸರ ಧರಿಸುವವರು ಯಾರು.?

ಈಗಲೂ ಬಹುತೇಕ ಕಾಲೇಜು ವಿದ್ಯಾರ್ಥಿನಿಯರು ಗೇಟಿನ ತನಕ ಹಿಜಾಬ್‌ ಧರಿಸಿ ಬಳಿಕ ಅದನ್ನು ತೆಗೆದಿಟ್ಟೆ ತರಗತಿಗೆ ಹಾಜರಾಗುತ್ತಿದ್ದರು .ಈ ನಿಯಮವನ್ನು ಮುಸ್ಲಿಂ ವಿದ್ಯಾರ್ಥಿನಿಯರು ಪಾಲಿಸುತ್ತಿದ್ದರು . ಈ ಮೂಲಕ ತಮ್ಮ ಧರ್ಮವನ್ನು ಪಾಲಿಸುವ ಜತೆಜತೆಗೆ ಕಾಲೇಜಿನಲ್ಲಿರುವ ‘ Dress code ‘ ಅನ್ನು  ಪಾಲಿಸಿಕೊಂಡೇ ಬರುತ್ತಿದ್ದಾರೆ . ಇದಕ್ಕೆ ಯಾರದ್ದು ಅಭ್ಯಂತರವಿಲ್ಲ . ಆದರೆ ತರಗತಿಯಲ್ಲಿಯೂ ನಾವು ಹಿಜಾಬ್ ಧರಿಸಿಯೇ ಕೂರುತ್ತೇವೆ ಎನ್ನುವ ಮೊಂಡು ವಾದ ಇದೀಗ ವಿವಾದಕ್ಕೆ ಕಾರಣವಾಗಿದೆ .

ಉಡುಪಿಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್  ಹಾಕಿಕೊಂಡು ಬರುತ್ತಿದ್ದಂತೆ , ಅತ್ತ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ‘ ಜೈ ಶ್ರೀರಾಂ ‘ ಘೋಷಣೆಯೊಂದಿಗೆ ಕಾಲೇಜು ಪ್ರವೇಶಕ್ಕೆ ಮುಂದಾದರು . ಈ ಬೆಳವಣಿಗೆ ಬೆನ್ನಲ್ಲೇ , ನಾವು ಯಾರಿಗಿಂತ ಕಮ್ಮಿ ಇಲ್ಲಾ ಎನ್ನುವಂತೆ , ನಮ್ಮದು ಒಂದು ಇರಲಿ ಎನ್ನುವ ರೀತಿಯಲ್ಲಿ ಕೇಸರಿ ಶಾಲು- ಹಿಜಾಬ್ ವಿವಾದ ಹರಡುತ್ತ ಹೋಗಿದೆ . ಕಾಲೇಜುಗಳೆಂಬ ವಿದ್ಯಾಮಂದಿರದಲ್ಲಿ ಈ ರೀತಿಯ ವಿವಾದಕ್ಕೆ ಅವಕಾಶ ನೀಡಬಾರದು . ಅಲ್ಲಿರುವ ವಿದ್ಯಾರ್ಥಿಗಳಿಗೆ ʼವಿದ್ಯಾʼ ಮುಖ್ಯವಾಗಬೇಕೇ ಹೊರತು ಧರ್ಮವಲ್ಲಾ.

ರಾಜಕೀಯ ದಾಳಕ್ಕೆ ಬಲಿ ಪಶುಗಳಾಗತ್ತಿದ್ದಾರ ವಿದ್ಯಾರ್ಥಿ-ವಿದ್ಯಾರ್ಥಿನಿಯರು .?

2021 ಡಿಸೆಂಬರ್ ರ ‌ತನಕ ಯಾವುದೇ ವಿವಾದವೇ ಇರಲಿಲ್ಲಾ ಇದ್ದಕ್ಕಿದ್ದಂತೆ ಬರುತ್ತಿದ್ದರು . 2022  ಜನವರಿಯಲ್ಲಿ  ಹಿಜಾಬ್‌ ವಿವಾದ ಸುರುವಾಗಿ ಧರ್ಮದಲ್ಲಿರುವ ಆಚರಣೆಯನ್ನು ಪಾಲಿಸಿಯೇ ತೀರುತ್ತೇವೆ ಎನ್ನುವ ಹಠಕ್ಕೆ ವಿದ್ಯಾರ್ಥಿನಿಯರು ಬಿದಿದ್ದಾರೆ !

ಹಾಗಾದರೆ ಒಂದುವರೆ ವರ್ಷ ಹಿಜಾಬ್ ಬಗ್ಗೆ ಇಲ್ಲದ ಪ್ರೀತಿ , ಇದ್ದಕ್ಕಿದ್ದಂತೆ ಬಂದಿದೆ ಎಂದರೆ  ಅದರರ್ಥ ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದೇ ಅರ್ಥವಲ್ಲವೇ ? ಇನ್ನು ಒಂದು ಹೆಜ್ಜೆ ಮುಂದೆ ಹೋಗುವುದಾದರೆ , ಆ ವಿದ್ಯಾರ್ಥಿನಿಯರ ನಡೆಯನ್ನು ಆರಂಭದಲ್ಲಿಯೇ ಶಾಲಾ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು . ಬಳಿಕ ಶಾಸಕರ ತನಕ ಹೋಗಿ , ಕೊನೆಗೆ ಮುಖ್ಯಮಂತ್ರಿ ಕಚೇರಿಯವರೆಗೆ ವಿವಾದ ಹೋದರೂ , ತಮ್ಮ ನಿಲುವಿನ ಅಂಟಿಕೊಂಡಿದ್ದನ್ನು ನೋಡಿದರೆ , ಆ ವಿದ್ಯಾರ್ಥಿನಿಯರು ಎಷ್ಟು ‘ ಪ್ರಭಾವ ‘ ಹೊಂದಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು . ಅದಿಷ್ಟೇ ಅಲ್ಲದೇ , ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವಷ್ಟು ಸಿದ್ಧರಾಗಿದ್ದಾರೆ ಎಂದರೆ , ಆ ವಿದ್ಯಾರ್ಥಿನಿಯರಿಗೆ ಕೆಲ ಪ್ರಭಾವಿ ನಾಯಕರ ಅಥವಾ ಸಂಘಟನೆಯ ಬೆಂಬಲ ಇಲ್ಲ ಎನ್ನಲು ಸಾಧ್ಯವೇ ಈ ವಿಷಯದಲ್ಲಿ ಸರಕಾರವೂ ಮೊದಲೇಎಚ್ಚೆತ್ತುಕೊಳ್ಳಬೇಕಿತ್ತು . ವಿವಾದ ಶುರುವಾಗಿ ತಿಂಗಳು ಕಳೆದರೂ , ಉನ್ನತ ಮಟ್ಟದ ಸಮಿತಿ ಮಾಡುತ್ತೇವೆ , ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ , ಸಮವಸ್ತ್ರ ಅಥವಾ ವಸ್ತ್ರ ಸಂಹಿತೆ ಬಗ್ಗೆ ಯೋಚಿಸುತ್ತೇವೆ ಎಂದು ಹಿಜಾಬ್‌ನ ಕಿಚ್ಚು ರಾಜಕೀಯ ತಿರುವು ಪಡೆಯುವಂತೆ ಮಾಡಿದರು .

ವಿವಾದ ಶುರುವಾಗಿ ತಿಂಗಳು ಕಳೆಯುತ್ತ ಬಂದರೂ ಸರ್ಕಾರ ಏಕೆ ಮೊದಲೇ ಎಚ್ಚೆತ್ತುಕೊಂಡಿಲ್ಲ.?

ಆದರೆ ಇನ್ನೊಂದು ಬದಿಯಲ್ಲಿ ನೋಡಿದರೆ , ಈ ವಿವಾದ ಆಡಳಿತ ಹಾಗೂ ಪ್ರತಿಪಕ್ಷಗಳೆರಡಕ್ಕೂ ಜೀವಂತವಾಗಿರಬೇಕು . ಏಕೆಂದರೆ , ಈ ವಿವಾದ ‘ ವೋಟ್ ಬ್ಯಾಂಕ್ ರಾಜಕೀಯ’ಕ್ಕೆ ಸಹಾಯ ಮಾಡುವುದಷ್ಟೇ ಅಲ್ಲದೇ , ಮುಂದಿನ ಚುನಾವಣೆಯಲ್ಲಿ ಮತ ಬೇಟೆಗೆ ಪ್ರಮುಖ ಅಸ್ತವಾಗುತ್ತದೆ . ಆದ್ದರಿಂದಲೇ ಬಿಜೆಪಿ ನಾಯಕರು ಹಿಜಾಬ್ ಬೇಡ ಎಂದರೆ , ಇತ್ತ ಕಾಂಗ್ರೆಸ್ ನಾಯಕರು ಹಿಜಾಬ್ ಹಾಕಿಕೊಂಡು ತರಗತಿಯಲ್ಲಿ ಕೂರುವುದಕ್ಕೆ ಅವಕಾಶ ನೀಡಲೇಬೇಕು ಎನ್ನುವ ಆಗ್ರಹ ಮಂಡಿಸಿದರು . ಆದರೆ ಈ ರೀತಿ ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ ಸಂಘಟನೆ , ಪಕ್ಷ ಹಾಗೂ ನಾಯಕರಿಗೆ , ‘ ಕೇರಳದಲ್ಲಿರುವ ಕಮ್ಯೂನಿಸ್ಟ್ ಸರಕಾರವೂ , ಹಿಜಾಬ್ ಹಾಕಿಕೊಂಡು ತರಗತಿಯಲ್ಲಿ ಕೂರುವುದಕ್ಕೆ ನಿಷೇಧ ಹೇರಿದೆ ‘ ಎನ್ನುವುದನ್ನು ಅರಿಯಲು ಪ್ರಯತ್ನಿಸಲಿಲ್ಲ .

ಆ ರಾಜ್ಯ ಸರಕಾರ ತಡವಾಗಿಯಾದರೂ , ಸಮವಸ್ತ್ರದ ಬಗ್ಗೆ ಸ್ಪಷ್ಟ ಆದೇಶವನ್ನು ನೀಡಿದೆ ಆದರೀಗ ಆದೇಶವನ್ನು ಕೇಳಿಸಿಕೊಳ್ಳುವ ಅಥವಾ ಆಲಿಸುವ ಮನಸ್ಥಿತಿಯಲ್ಲಿ ವಿದ್ಯಾರ್ಥಿಗಳಿಲ್ಲ ( ವಿದ್ಯಾರ್ಥಿಗಳಿಗೆ ಕುಮ್ಮಕ್ಕು ಯಾರು ಕೊಡುತ್ತಾರೆ ಎನ್ನುವುದು ಬೇರೆ ) . ಇದೀಗ ರಾಜ್ಯಾದ್ಯಂತ್ಯ ಕೇಸರಿ ಶಾಲು ಹಾಕಿಕೊಂಡು ಕಾಲೇಜು ಪ್ರವೇಶಕ್ಕೆ ಮುಂದಾಗಿದ್ದಾರೆ . ಕೆಲವೆಡೆಯಂತೂ ಕಾಲೇಜು ರಜೆಯಿದ್ದರೂ , ಶಾಲು ಸುತ್ತಿಕೊಂಡು ಓಡಾಡುವ ದೃಶ್ಯ ಸಾಮಾನ್ಯವಾಗಿದೆ . ಸರಕಾರದ ಆದೇಶವನ್ನು ಮೀರಿ , ತಮ್ಮ ಧರ್ಮದ ಗುರುತು ತೋರಿಸುವುದೇ ದೊಡ್ಡ ಸಾಧನೆ ಎನ್ನುವ ಮಟ್ಟಕ್ಕೆ ವಿದ್ಯಾರ್ಥಿಗಳು ಬಂದರೆ , ಭವಿಷ್ಯದ ಸೋ ಕಾಲ್ಡ್ ಜಾತ್ಯತೀತ ಸಮುದಾಯ ಹೇಗಿರಲಿದೆ ಎನ್ನುವುದನ್ನು ನೋಡಬಹುದು .

ಶಾಲೆ , ಕಾಲೇಜುಗಳು ವಿದ್ಯಾಮಂದಿರವಾಗಬೇಕು . ಅಲ್ಲಿ ಯಾವುದೇ ಜಾತಿ , ಧರ್ಮ , ಪಂತ ಬರಬಾರದು . ಶೈಕ್ಷಣಿಕ ಕೇಂದ್ರಗಳಲ್ಲಿ  ಜ್ಞಾನ ಹೆಚ್ಚಿಸಿಕೊಳ್ಳಲು ಇರುವುದೆ ಹೊರತು , ಹಿಜಾಬ್ ಆಗಲಿ , ಕೇಸರಿ ಶಾಲಾಗಲಿ ಪ್ರಮುಖವಲ್ಲ . ಆದರೆ ಇದನ್ನು ಅರ್ಥ ಮಾಡಿಕೊಳ್ಳದೇ , ಯಾವುದೋ ಪಕ್ಷದ , ಸಂಘಟನೆಯ ಆಟಕ್ಕೆ ವಿದ್ಯಾರ್ಥಿಗಳ ಜೀವನ ಹಾಳು ಮಾʻಡಿಕೊಳ್ಳುತ್ತಿದ್ದಾರೆ . ಸರಕಾರ ಸಮವಸ್ತ್ರದ ವಿಷಯದಲ್ಲಿ ತಡವಾಗಿಯಾದರೂ , ಸ್ಪಷ್ಟತೀರ್ಮಾನವನ್ನು ಕೈಗೊಂಡಿದೆ . ಆದೇಶ ಹೊರಡಿಸಿದ ಬಳಿಕವೂ , ಹಿಜಾಬ್ ವಿವಾದ ಜೀವಂತವಾಗಿದೆ ಎನ್ನುವುದಾದರೆ , ಅದನ್ನು ನಿಯಂತ್ರಿಸಬೇಕಿರುವುದು ಆಡಳಿತ ಯಂತ್ರದ ಕೆಲಸ . ಯಾರದ್ದೋ ಕೆಲವರ ಹಿತಾಸಕ್ತಿಗಾಗಿ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳುಮಾಡುವುದಕ್ಕೆ ಅವಕಾಶ ನೀಡಬಾರದು .

ವಿಶೇಷ ಅಂಕಣ : ಸಂದೀಪ ಶೆಟ್ಟಿ ಭಟ್ಕಳ

WhatsApp
Facebook
Telegram
error: Content is protected !!
Scroll to Top