ಭಟ್ಕಳ ಪುರಸಭೆಯ ಹೆಸರನ್ನು ಹಾಳುಗೆಡುವಲು ಪ್ರಯತ್ನಿಸಲಾಗುತ್ತಿದೆ ಇದಕ್ಕೆಲ್ಲಾ ನಾವು ಕೇರೆ ಮಾಡಲಾರೆವು: ಪುರಸಭಾ ಅಧ್ಯಕ್ಷ ಪರವೇಜ್‌ ಖಾಶಿಮ್‌ ಹೇಳಿಕೆ

ಭಟ್ಕಳ: ಕಳೆದ ಕೆಲವು ದಿನಗಳಿಂದ ನಮ್ಮ ಪುರಸಭೆಯ ಹೆಸರನ್ನು ಹಾಳು ಗೆಡುವಲು ಕೆಲವೊಂದು ವ್ಯಕ್ತಿಗಳು ಶಡ್ಯಂತ್ರಗಳನ್ನು ನಡೆಸಲಾಗುತ್ತಿದೆ ನಾವು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಾರೆವು ಎಂದು ಪುರಸಭಾ ಅಧ್ಯಕ್ಷ ಪುರಸಭಾ ಅಧ್ಯಕ್ಷ ಪರವೇಜ್‌ ಕಾಶಿಮ್‌ ಹೇಳಿದರು

ಭಟ್ಕಳದ ಪುರಸಭೇಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿ ಮಾತನಾಡಿದ ಅವರು ಪುರಸಭೆಯ ಸದಸ್ಯರು ಕಳೆದ ಬಾರಿ ನಡೆದ ಸಾಮಾನ್ಯ ಸಭೆಯಲ್ಲಿ ಮಳೆ ನೀರು ಇಂಗಿಸುವ ಕಾಮಗಾರಿ ಕಸ ವಿಲೆವಾರಿ ಘಟಕದಲ್ಲಿ ನಡೆದ ಕಾಮಗಾರಿ ಮತ್ತು ಮುಖ್ಯ ರಸ್ತೆಯಲ್ಲಿರುವ ಉದ್ಯಾನವನದ ಕಾಮಗಾರಿ ಬಗ್ಗೆ ಈ ಕಾಮಗಾರಿಗೆ ಹಣ ಪಾವತಿಯಾದ ಬಗ್ಗೆ ಗಂಬಿರ ಆರೋಪವನ್ನು ಮಾಡಿರುತ್ತಾರೆ ಈ ಬಗ್ಗೆ ನಾನು ಈ ಕಾಮಗಾರಿಗಳ ಕಡೆತಗಳು ಕಛೇರಿಯಲ್ಲಿದೆ ಯಾರು ಬೇಕಾದರು ಇದನ್ನು ಪರಿಶೀಲಿಸ ಬಹುದು ಇದರಲ್ಲಿ ಅವ್ಯವಹಾರ ಕಂಡುಬಂದಲ್ಲಿ ವಿಷೇಶ ಸಭೇ ಕರೆದು ಇದಕ್ಕೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೆನೆ ಆದರೆ ಈ ಸಭೇ ನಡೆದು ಒಂದು ತಿಂಗಳಾದರು ಖಡತ ಪರಿಶಿಲಿಸಲು ಯಾವ ಸದಸ್ಯರು ಮುಂದೆ ಬಂದಿಲ್ಲಾ ನಾನು ಸದಸ್ಯರ ಎಲ್ಲಾ ಪ್ರಶ್ನೇಗಳಿಗೆ ಉತ್ತರ ನೀಡಿದ್ದರು ವಿನಾಕಾರಣ ಕೆಳಿದ ಪ್ರಶ್ನೆಗಳನ್ನು ಪುನಃ ಪುನಃ ಕೇಳಿ ಮಾನಸಿಕ ಹಿಂಸೆಯನ್ನು ನಿಡುತ್ತಿದ್ದಾರೆ

ನಾನು ಪುರಭೆಯ ಅಧಿಕಾರ ವಹಿಸಿಕೊಂಡ ನಂತರ ಹಲವಾರು ಅಭಿವೃದ್ದಿಯ ಕೆಲಸಕಾರ್ಯಗಳನ್ನು ನಡೆಸಿದ್ದೆನೆ ಇನ್ನೋವಾ ಜೆಸಿಬಿ ವಾಟರ್‌ ಟ್ಯಾಂಕ ಹೀಗೆ ಅನೆ ಅಭಿವದ್ದಿ ಕಾರ್ಯಗಳನ್ನು ನಡೆಸಿದ್ದೆನೆ

ಈ ಹಿಂದೆ ಅಂದರೆ 2017 ರಿಂದ ಯಾವುದೆ ತರದ ವಿಧ್ಯುತ್‌ ಉಪಕರಣಗಳನ್ನು ಕರೀದಿ ಮಾಡಲಿಲ್ಲಾ ಆದರೆ ನನ್ನ ಅವದಿಯಲ್ಲಿ ಕಡಿಮೇ ದರದಲ್ಲಿ ಕರಿದಿಸಲಾಗಿದೆ ಆದರೆ ಸದಸ್ಯರೋರ್ವರು ತಮಗೆ ಬೇಕಾದವರಿಗೆ ಟೆಂಡರ್‌ ನೀಡ ಬೇಕು ಎನ್ನುತ್ತಾರೆ ಇದು ಹೇಗಾಗುತ್ತದೆ ಇದಲ್ಲದೆ ಪುರಸಭೆಯ ವತಿಯಿಂದ ಕರಿದಿಸಲಾಗಿದ್ದ ಇನೋವಾ ಕಾರಿನ ಬಗ್ಗೆಯು ಅಪಪ್ರಚಾರ ನಡೆಸಲಾಗಿದೆ ಹಾಗು ನಾಮ ಪಲಕವನ್ನು ತೇಗೆಯಿಸಿ ಪುರಸಭೆಗೆ ಮುಜಗರ ಆಗುವಂತೆ ಮಾಡಲಾಗಿದೆ ನಮ್ಮ ಪುರಸಭೆಯಲ್ಲಿ ನನಗೆ ಹೆಚ್ಚಿನ ಸದಸ್ಯರ ಬೆಂಬಲವಿದೆ ನಾನು ಇದಕ್ಕೆಲಾ ಸೊಪ್ಪು ಹಾಕುವುದಿಲ್ಲಾ ಎಂಬ ಕಡಕ್‌ ಆಗಿ ಹೇಳಿದರು

WhatsApp
Facebook
Telegram
error: Content is protected !!
Scroll to Top