ಭಟ್ಕಳ ಮಿನಿ ವಿಧಾನ ಸೌಧಕ್ಕೆ ವೀಲ್‌ ಚೇರ್:‌ ಸಾರ್ವಜನಿಕರ ಆಗ್ರಹಕ್ಕೆ ಸ್ಪಂದಿಸಿದ ತಾಲೂಕ ಆಢಳಿತ

ಭಟ್ಕಳ : ತಾಲೂಕಿನ ಮಿನಿ ವಿಧಾನ ಸೌದದಲ್ಲಿರುವ ಸಹಾಯಕ ಆಯುಕ್ತರ ಕಛೇರಿ ತಹಶಿಲ್ದಾರರ ಕಚೇರಿಯನ್ನು ತಲುಪಬೇಕೆಂದರೆ ವಯೋ ವೃದ್ದರಿಗೆ ಹಾಗು ಅಂಗವಿಕಲರಿಗೆ ತುಂಬ ಕಷ್ಟದ ಮಾತಾಗಿತ್ತು ಈ ಬಗ್ಗೆ ಹಲವಾರು ದಿನಗಳಿಂದ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು ಇದರಿಂದ ಎಚ್ಚೆತ್ತ ತಾಲೂಕ ತಹಶಿಲ್ದಾರ ರವಿಚಂದ್ರ ಎಸ್‌ ಇವರು ವೃದ್ದರಿಗೆ ಅಂಗವಿಕರಿಗೆ ಸಹಾಯವಾಗಲೆಂದು ವಿಲ್‌ ಚೇರ್‌ ವ್ಯವಸ್ಥೆಯನ್ನು ಮಾಡಿದ್ದಾರೆ

ಸಹಾಯಕ ಆಯುಕ್ತರು ನಡೆಸುವ ಕೊರ್ಟ ಆಗಲಿ ಸಬ್‌ ರಿಜಿಸ್ಟರ್ಡ ಕಛೇರಿಯಾಗಲಿ ಅಥವಾ ಮಿನಿ ವಿದಾನ ಸೌದದಲ್ಲಿರುವ ಯಾವುದೆ ಕಛೇರಿಯನ್ನು ತಲುಪಲು ವೃದ್ದರಿಗೆ ಹಾಗು ಅಂಗವಿಕಲರಿಗೆ ತುಂಬ ತೊಂದರೆಯಾಗುತ್ತಿತ್ತು ಈ ಕಾರಣ ಸಾರ್ವಜನಿಕರು ಹಲವಾರು ಭಾರಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು ಮುಖ್ಯವಾಗಿ ಇಲ್ಲಿ ಎದ್ದಿರುವ ಪ್ರಶ್ನೆ ಎಂದರೆ ಲಿಪ್ಟ ಇದ್ದರು ಕೂಡಾ ವಿಲ್‌ ಚೇರ್‌ ಬೇಕಾ ಎನ್ನುವುದು ಆದರೆ ಲಿಪ್ಟ ತಲುಪಲು ಕೂಡಾ ಈ ವಿಧಾನ ಸೌದದಲ್ಲಿ ಅಂಗವಿಕಲಿರಿಗೆ ವೀಲ್‌ ಚೇರ್‌ ಅನಿವಾರ್ಯ ಕೆಲವು ಅಂ ವಿಕಲರು ವಯೋವೃದ್ದರು ವಿದಾನ ಸೌದದ ಮೆಟ್ಟಿಲನ್ನೆ ಹತ್ತದ ಪರಿಸ್ಥಿತಿಯನ್ನು ತಲುಪಿರುತ್ತಾರೆ ಅಂತವರಿಗೆ ವೀಲ್‌ಚೇರ್‌ ಅನಿವಾರ್ಯವಾಗಿರುತ್ತದೆ ಕಾರಣ ಪರಿಸ್ಥಿತಿ ಗಂಭಿರತೆಯನ್ನು ಅರಿತ ತಾಲೂಕ ತಹಶಿಲ್ದಾರರು ಇಂತವರಿಗಾಗಿ ವಿಲ್‌ ಚೇರ್‌ ಸೇವೆನ್ನು ಒದಗಿಸಿಕೊಟ್ಟಿದ್ದಾರೆ

ಈ ಬಗ್ಗೆ ಅಂಗವಿಕಲರೊಬ್ಬರು ಮಾತನಾಡಿ ನನಗೆ ವಿದಾನ ಸೌದದ ಮೆಟ್ಟಿಲನ್ನು ಎರಲು ಸಾಧ್ಯವಿಲ್ಲ ಲಿಪ್ಟ ಮುಖಾಂತರ ಹೋಗಬೇಕು ಎಂದರೂ ಇಲ್ಲಿ ಮೆಟ್ಟಿಲನ್ನು ಹತ್ತುವುದು ಅನಿವಾರ್ಯ ಕಾರಣ ತುಂಬ ಸಮಸ್ಯೆಯನ್ನು ಏದುರಿಸ ಬೇಕಾಗಿತ್ತು ಆದರೆ ಈಗ ವಿಧಾನ ಸೌದದಲ್ಲಿ ವಿಲ್‌ ಚೇರ್‌ ವ್ಯವಸ್ಥೆ ಮಾಡಿದ್ದಾರೆ ಇದರಿಂದ ನಮ್ಮಂತವರಿಗೆ ತುಂಬ ಸಹಾಯವಾಗುತ್ತದೆ ಎಂದು ಹೇಳಿದರು

ಒಟ್ಟಾರೆ ವಿಧಾನ ಸೌದಕ್ಕೆ ವಿಲ್‌ ಚೇರ್‌ ವ್ಯವಸ್ಥೆ ಮಾಡಿಸಿರುವರಿಂದ ವಯೋ ವೃದ್ದರಿಗೆ ವಿಕಲ ಚೇತನರಿಗೆ ತುಂಬ ಸಹಾಯವನ್ನು ಒದಗಿಸಿಕೊಟ್ಟಂತಾಗಿದೆ ವಯೋ ವೃದ್ದರು ಅಂಗವಿಕಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎನ್ನುತ್ತಾರೆ ಅಧಿಕಾರಿಗಳು

WhatsApp
Facebook
Telegram
error: Content is protected !!
Scroll to Top