ಭಟ್ಕಳ ಶಿರಾಲಿ ತಟ್ಟಿಹಕ್ಕಲು ಮಣ್ಣೊಂಡದ 800 ವರ್ಷಗಳ ಇತಿಹಾಸ ಹೊಂದಿರುವ ಕೇಶವ ಮೂರ್ತಿ ದೇವಸ್ಥಾನದ ಆವರಣದಲ್ಲಿ ಅಪ್ರಕಟಿತ ಶಾಸನ ಪತ್ತೆ : ಹೊನ್ನಾವರ ಮಹಾ ಪ್ರಧಾನ ಯೀಚಪ್ಪ ಒಡೆಯರ ಶಾಸನ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ಮಣ್‌ಹೊಂಡದ ತಟ್ಟಿಹಕ್ಕಲಿನಲ್ಲಿರುವ ಕೇಶವಮೂರ್ತಿ ದೇವಾಲಯ 800 ವರ್ಷಕ್ಕೂ ಅಧಿಕ ಪುರಾತನ ದೇವಸ್ಥಾನವಾಗಿದ್ದು ಈ ದೇವಸ್ಥಾನ ಆವರಣದಲ್ಲಿ ಹೊನ್ನಾವರ ಮಹಾ ಪ್ರಧಾನ ಯೀಚಪ್ಪ ಒಡೆಯರ ಶಾಸನ ಅಪ್ರಕಟಿತ ಶಾಸನವೊಂದು ಪತ್ತೆಯಾಗಿದೆ. ಈ ಪುರಾತನ ದೇವಸ್ಥಾನದ ಹಿನ್ನೆಲೆ ಏನು ಇಲ್ಲಿ ದೊರೆತಿರುವ ಶಾಸನ ಇತಿಹಾಸದ ಬಗ್ಗೆ ಏನು ಹೇಳುತ್ತದೆ

ಶಿರಾಲಿಯ ಚೆನ್ನಕೇಶವ ದೇವಲಯದಲ್ಲಿ ಎಂಟುನೂರು ವರ್ಷದ ಇತಿಹಾಸ ಇರುವ ಹಳೆಯ ಶಾಸನ ಪತ್ತೆ ಹೇಗಾಯಿತು?

ಹಲವಾರು ವರ್ಷಗಳಿಂದ ಮರೆಯಾಗಿದ್ದ ಶಾಸನ ಮತ್ತೆ ಪತ್ತೆ ಹಚ್ಚಿದ ಬಗೆ ಹೇಗೆ ಗೊತ್ತಾ? ಬನ್ನಿ ನೊಡೋಣ.

ಕೇಶವ ಮೂರ್ತಿ ದೇವಸ್ಥಾನ ಒಂದು ವಿಷ್ಟುವಿನ ದೇವಸ್ಥಾನವಾಗಿದ್ದು ಸುಮಾರು 800 ವರ್ಷಗಳಿಗೂ ಅಧಿಕ ಪೂರಾತನ ದೇವಸ್ಥಾನವಾಗಿದೆ . ಈ ದೇವಸ್ಥಾನದ ಹಿನ್ನೆಲೆ ಹೇಳಬೇಕು ಎಂದರೆ ವಿಜಯನಗರದ ದೊರೆ ಮೊದಲನೆಯ ದೇವರಾಯರು ಆಳ್ವಿಕೆ ಮಾಡುತ್ತಿರುವಾಗ ಹೊನ್ನಾವರದ ರಾಜಧಾನಿಯಲ್ಲಿದ್ದುಕೊಂಡು ಹಯಿವೆ ತುಳು
ಕೊಂಕಣ ಪ್ರದೇಶಗಳನ್ನು ಆಳ್ವಿಕೆ ಮಾಡುತ್ತಿದ್ದ ಮಹಾಪ್ರದಾನ ಯೀಚಪ್ಪ ಒಡೆಯರು ಕ್ರಿ ಶ ೧೩೩೩ನೆಯ ವಿಕೃತ ಸಂವತ್ಸರದ ಕಾರ್ತ್ತಿಕ ಶುದ್ಧ ೧ ಶುಕ್ರವಾರದಂದು ಮಂಡ್ಮಣದ ಕೇಶವನಾಥ ದೇವರಿಗೆ ಎಂಟು ಎಕ್ಕರೆ ಜಾಗವನ್ನು ದತ್ತಿಯ ರೂಪದಲ್ಲಿ ಕೊಟ್ಟಿರುತ್ತಾನೆ ಯಾಗಿರುತ್ತದೆ ಉಲ್ಲೆಖಗಳು ಶಾಸನದಲ್ಲಿ ತಿಳಿದು ಬಂದಿದೆ ಈ ಎಂಟು ಎಕ್ಕರೆ ಜಾಗ ಈಗ ಸರಕಾರದ ಭೂ ಸುದಾರಣಾ ಕಾಯ್ದೆಯ ಕಾರಣ ಊಳುವ ರೈತನ ಪಾಲಾಗಿದೆ ಎಂಬ ಸಂಗತಿ ತಿಳಿದು ಬಂದಿದೆ ದೇವಸ್ಥಾನ ಯಾವುದೆ ಅಭಿವೃದ್ದಿ ಕಾರಣದೆ ಸಂಪೂರ್ಣವಾಗಿ ಪಾಳು ಬಿದ್ದು ಹೊಗಿತ್ತು

ಹಿಂದೆ ಈ ದೇವಸ್ಥಾನದಲ್ಲಿ ಹಿಂದೆ ಈ ದೇವಸ್ಥಾನದಲ್ಲಿ ವಿಜ್ರಂಬಣೆಯಿಂದ ರಥೋತ್ಸವ ನಡೆಯುತಿತ್ತು ಎಂಬ ಮಾಹಿತಿಯು ಕೂಡಾ ಲಬ್ಯವಿದೆ ಕಾಲಕ್ರಮೇಣ ದೇವಸ್ಥಾನ ಅಭಿವೃದ್ದಿ ಕುಂಟಿತವಾಗುತ್ತಾ ಬಂದು ರಥೋತ್ಸವವು ನಿಂತುಹೊಗಿರುತ್ತದೆ ರಥೋತ್ಸವ ನಡೆಯುತ್ತಿರುವ ಬಗ್ಗೆ ಇಲ್ಲಿ ದೊರೆತಿರುವ ರಥದ ಗಾಲಿಯೆ ಸಾಕ್ಷಿಯಾಗಿರುತ್ತದೆ

ಈ ದೇವಸ್ಥಾನ ದ್ವಾರದ ನೇರಕ್ಕೆ 500 ಮಿಟರ್‌ ದೂರದಲ್ಲಿ ನಾಗನ ದೇವಸ್ಥಾನವಿದ್ದು ಈ ಕೇಶವ ನಾಥ ದೇವರ ಮೂರ್ತಿ ಹಾಗು ನಾಗ ಬನವು ಎದುರು ಬದುರಾಗಿರುವುದು ತುಂಬ ಕೈತುಕದ ಸಂಗತಿಯಾಗಿದೆ ಈಗ ಈ ದೇವಸ್ಥಾನ ಪುನಃ ಸ್ಥಳಿಯ ಗ್ರಾಮಸ್ಥರ ಶ್ರಮದಿಂದ ಪುನಃ ಪುರಾತನ ದೇವಸ್ಥಾನವಾದ ಕೇಶವ ಮೂರ್ತಿ ದೇವಸ್ತಾನ ಉರ್ಜಿತವಾಗುತ್ತಿರುವುದು ಪ್ರಶಂಸೆಯ ಸಂಗತಿಯಾಗಿದೆ .ಇಲ್ಲಿ ಸಂತಾನ ಬಾಗ್ಯ ಕಲ್ಯಾಣ ಕಾರ್ಯಗಳು ನಡೆಯುವಂತೆ ಹರಕೆಗಳನ್ನು ಮಾಡಿಕೊಂಡರೆ ಆ ಹರಕೆಗೆ ಭಗವಾನ ಮಹಾವಿಷ್ಟು ಅಸ್ತು ಎನ್ನುತ್ತಾನೆ ಎಂಬ ನಂಬಿಕೆ ಪುರಾನತ ಕಾಲದಿಂದಲೂ ಪ್ರಚಲಿತದಲ್ಲಿತ್ತು

ದೇವಸ್ಥಾನ ಪುನಃ ಈಗ ಭಕ್ತಾಧಿಗಳ ಪ್ರವೇಶಕ್ಕೆ ತೆರೆದುಕೊಳ್ಳುತ್ತಿದ್ದು ಇಲ್ಲಿ ಹೋಮ ಹವನಾಧಿಗಳು ಗಣೇಶ ಉತ್ಸದಂತ ವಿವಿದ ಉತ್ಸವಗಳು ನಡೆಸಲು ಪ್ರಾರಂಬಿಸಲಾಗಿದೆ ಈ ದೇವಸ್ಥಾನದ ಉರ್ಜಿತಕ್ಕೆ ಭಕ್ತಾಧಿಗಳು ತನುಮನಧನದಿಂದ ಸಹಾಯ ಹಸ್ತವನ್ನು ಚಾಚ ಬೇಕು ಎನ್ನುವುದು ದೇವಸ್ಥಾನ ಕಮಿಟಿಯವ ಮಾತಾಗಿದೆ

ಈ ದೇವಸ್ಥಾನವನ್ನು ಪುರಾತನ ಕಾಲದಿಂದಲೂ ಗೋಳಿ ಕೇರಿ ಭಟ್ಟರ ಮನೆತನದವರು ಪೂಜೇ ನಡೆಸಿಕೊಂಡು ಬರುತ್ತಿದ್ದು ಈಗಲೂ ಈ ಮನೆತನದ ಅನಂತ ಭಟ್ಟ ಎನ್ನುವವವರು ಈ ದೇವಸ್ಥಾನಕ್ಕೆ ತುಂಬ ಕೊಡುಗೆಗಳನ್ನು ನೀಡಿದ್ದು ಈಗ ದೇವಸ್ಥಾನದ ಆಡಳಿತ ಕಮಿಟಿಯ ಉಪಾಧ್ಯಕ್ಷರು ಕೂಡ ಆಗಿದ್ದಾರೆ ಹಾಲಿಯಾಗಿ ಈ ದೇವಸ್ಥಾನದ ಪೂಜೆಯನ್ನು ಇಂಡಗುಂಜಿಯ ರಾಮಕ್ರಷ್ಣ ಭಟ್ಟ ಅವರು ನಡೆಸಿಕೊಡುತ್ತಿದ್ದಾರೆ

ಈ ದೇವಸ್ಥಾನ ಎಷ್ಟು ಪುರಾತನ ದೇವಸ್ಥಾನ ಎಂಬುವುದಕ್ಕೆ ಸದ್ಯ ದೊರೆತಿರುವ ಶಿಲಾ ಶಾಸನವೆ ಸಾಕ್ಷಿಯಾಗಿದೆ ಈ ಶಾಸನವು ದೊರೆಗಳಾದ ಇಮ್ಮಡಿ ಹರಿಹರ ಮತ್ತು ಒಂದನೇ ದೇವರಾಯನ ಕಾಲದಲ್ಲಿ ಕೇಶವನಾಥ ದೇವರಿಗೆ ಬಿಟ್ಟ ದತ್ತಿ ವಿಷಯವನ್ನು ಪ್ರಸ್ತಾಪಿಸುತ್ತಿದೆ. ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು ೩.೫ ಅಡಿ ಎತ್ತರ ಹಾಗೂ ೨.೫ ಅಡಿ ಅಗಲವಾಗಿದೆ. ಶಾಸನದಲ್ಲಿ ಒಟ್ಟು ೩೭ ಸಾಲುಗಳಿದ್ದು ಕನ್ನಡ ಲಿಪಿ ಮತ್ತು ಭಾಷೆಯದ್ದಾಗಿದೆ. ಶಾಸನದ ಶಿರದಲ್ಲಿ ಶಿವಲಿಂಗಕ್ಕೆ ಪೂಜೆಗೈಯುತ್ತಿರುವ ಯತಿ, ಹಸು ಮತ್ತು ಹಾಲು ಕುಡಿಯುತ್ತಿರುವ ಕರು ಹಾಗೂ ನಂದಿಯ ಶಿಲ್ಪವಿದೆ. ಶಾಸನವು ಎರಡು ಕಾಲ ಘಟ್ಟದಲ್ಲಿ ದಾನ ನೀಡಿದ ವಿಷಯವನ್ನು ಉಲ್ಲೇಖಿಸುತ್ತದೆ. ವಿಜಯನಗರದ ದೊರೆ ಮೊದಲನೆಯ ದೇವರಾಯರು ಆಳ್ವಿಕೆ ಮಾಡುತ್ತಿರುವಾಗ ಹೊನ್ನಾವರದ ರಾಜಧಾನಿಯಲ್ಲಿದ್ದುಕೊಂಡು ಹಯಿವೆ ತುಳು ಕೊಂಕಣ ಪ್ರದೇಶಗಳನ್ನು ಆಳ್ವಿಕೆ ಮಾಡುತ್ತಿದ್ದ ಮಹಾಪ್ರದಾನ ಯೀಚಪ್ಪ ಒಡೆಯರು ಶಕವರ್ಷ ೧೩೩೩ನೆಯ ವಿಕೃತ ಸಂವತ್ಸರದ ಕಾರ್ತ್ತಿಕ ಶುದ್ಧ ೧ ಶುಕ್ರವಾರದಂದು ಮಂಡ್ಮಣದ ಕೇಶವನಾಥ ದೇವರಿಗೆ ಕೊಟ್ಟ ದತ್ತಿಯ ಕುರಿತು ಉಲ್ಲೇಖಿಸುತ್ತದೆ. ಇದು ಕ್ರಿ. ಶ ೧೪೧೦ ನವೆಂಬರ್ ೬ ಮಂಗಳವಾರಕ್ಕೆ ಸರಿಹೊಂದುತ್ತದೆ. ಕ್ರಿ.ಶ ವರುಷ ೧೩೧೨ ನೆಯ ಶುಕ್ಲ ಸಂವತ್ಸರದ ಪಾಲ್ಗುಣ ಶುದ್ಧ ೧೩ ಆದಿತ್ಯವಾರ (ಕ್ರಿ. ಶ ೧೩೯೦ ಮಾರ್ಚ್ ೮ ಸೋಮವಾರ) ದಂದು ವಿಜಯನಗರದ ದೊರೆ ಇಮ್ಮಡಿ ಹರಿಹರ ಆಳ್ವಿಕೆ ಮಾಡುತ್ತಿರುವಾಗ ಹೊನ್ನಾವರದ
ರಾಜಧಾನಿಯಿಂದ ಆಳ್ವಿಕೆ ಮಾಡುತ್ತಿದ್ದ ಮಹಾಪ್ರದಾನ ಮಲ್ಲಪ್ಪ ಒಡೆಯರು ಬೆಂಗರೆಯ ತಟ್ಟಿಯಹಕ್ಕಲ ಕೇಶವನಾಥ ದೇವರ ಅಮೃತಪಡಿಯ ಧರ್ಮಕ್ಕೆ ¨ ಭೂಮಿಯನ್ನು ದತ್ತಿ ಬಿಟ್ಟುಕೊಟ್ಟಿರುವುದು ತಿಳಿದುಬರುತ್ತದೆ. ಮಲ್ಲಪ್ಪ ಒಡೆಯರು ದೇವರ ಅಮೃತಪಡಯ ಧರ್ಮಕ್ಕೆ ಬಿಟ್ಟಿರುವ ದತ್ತಿಯನ್ನು ಆ ಚಂದ್ರಾರ್ಕ್ಕ ಸ್ತಾಯಿಯಾಗಿ ಪಾಲಿಸಿಕೊಂಡು ಬರಬೇಕೆಂದು ಯೀಚಪ್ಪ ಒಡೆಯರು ಶಾಸನವನ್ನು ಬರೆಯಿಸಿ ಮಂಡ್ಮಣ ಕೇಶವನಾಥ ದೇವಾಲಯದಲ್ಲಿ ಸ್ಥಾಪಿಸಿರುವ ವಿಷಯ ಶಿಲಾಶಾಸನದ ಮುಖ್ಯ ವಸ್ತುವಾಗಿದೆ.

ಶಾಸನದಲ್ಲಿ ಉಲ್ಲೇಖಿತ ಮಂಡ್ಮಣ ಇಂದಿನ ಮಣ್‌ಹೊಂಡವಾಗಿರಬೇಕು. ಇನ್ನುಳಿದಂತೆ ಬೆಂಗ್ರೆ ಮತ್ತು ತಟ್ಟಿಹಕ್ಕಲು ಹೆಸರು ಯಥಾವತ್ತಾಗಿ ಇಂದಿಗೂ ಮುಂದುವರಿದಿದೆ ಎಂದು ಶಾಸನವನ್ನು ಓದಿ ಅಥೈಸಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಮತ್ತು ಇತಿಹಾಸ ಮತ್ತು ಪುರಾತತ್ವ ಸಂಶೋದನಾರ್ಥಿ ಶ್ರೀ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ತಿಳಿಸಿದ್ದಾರೆ. ಈ ಶಾಸನವನ್ನು ಸಂಶೋದಿಸುವಲ್ಲಿ ಕೇಶವಮೂರ್ತಿ ದೇವಾಲಯದ ಅಧ್ಯಕ್ಷರಾದ ಆನಂದ ದೇವಾಡಿಗ, ಉತ್ಸವ ಸಮಿತಿಯ ಅಧ್ಯಕ್ಷರಾದ ರವಿ ದೇವಾಡಿಗ, ಸಮಿತಿ ಸದಸ್ಯರಾದ ವೆಂಕಟ್ರಮಣ ದೇವಾಡಿಗ, ಸುಬ್ರಾಯ ದೇವಾಡಿಗ, ರಾಮಕೃಷ್ಣ ದೇವಾಡಿಗ, ಜನಾರ್ನದನ ದೇವಾಡಿಗ, ದೇವರಾಜ ದೇವಾಡಿಗ, ಮಂಜುನಾಥ ದೇವಾಡಿಗ ಮತ್ತು ಸಂಕರ್ಷಣ ಗುರುದತ್ತ ಶುಕ್ಲ ಮೊದಲಾದವರು ಸಹಕರಿಸಿದ್ದರು.

ಶಿರಾಲಿಯ ಈ ಪುರಾತನ ದೇವಸ್ಥಾನ ಕ್ರೀ ಶ 1333 ಕ್ಕಿಂತಲ್ಲೂ ಅತಿ ಪುರಾತನ ದೇವಸ್ಥಾನವಾಗಿದ್ದು ಈ ದೇವಸ್ಥಾನದ ಅಭಿವೃದ್ದಿಗೆ ತಾಲೂಕಾಡಳಿತ ಗಮನ ಹರಿಸಬೇಕು ಎಂಬುವುದು ಸಾರ್ವಜನಿಕರ ಮಾತಾಗಿದೆ .

WhatsApp
Facebook
Telegram
error: Content is protected !!
Scroll to Top