ಭಟ್ಕಳ ತಾಲೂಕಿನಲ್ಲಿ ಪಿ ಎಮ್‌ ಕಿಸಾನ್‌ ಯೋಜನೆಯಲ್ಲಿ ಬುಗಿಲೆದ್ದ ಗೊಂದಲ್ಲ: ಗೊಂದಲ ಬಗ್ಗೆ ಪರಿಹಾರ ಬಿಚ್ಚಿಟ್ಟ ಕ್ರಷೀ ಇಲಾಖಾ ಸಹಾಯಕ ನಿರ್ದೇಶಕಿ ರಶ್ಮೀ ಶಾಪುರ್‌ ಮಠ : ಎಲ್ಲಾ ರೈತ ಬಾಂದವರು ಮಾರ್ಚ ತಿಂಗಳೊಳಗಾಗಿ ಈ ಕೆ ವೈಸಿ ಕಡ್ಡಾಯವಾಗಿ ಮಾಡಿಕೊಳ್ಳ ಬೇಕು ಕ್ರಷೀ ಅಧಿಕಾರಿ ಎ ಬಿ ಹಿಟ್ನಾಳ್‌

ಭಟ್ಕಳ :ತಾಲೂಕಿನಲ್ಲಿ ರೈತರು ಸಲ್ಲಿಸಿದ್ದ ಸರಿ ಸುಮಾರು 16000 ದಷ್ಟು ಪಿ ಎಮ್‌ ಕಿಸಾನ್‌ ಅರ್ಜಿಗಳು ತಿರಸ್ಕ್ರತಗೊಂಡಿದ್ದು ತಾಲೂಕಿನಾಧ್ಯಂತ ರೈತ ವಲಯದಲ್ಲಿ ಗೊಂದಲಗಳು ಸ್ರಷ್ಟಿಯಾಗಿತ್ತು ಈ ಬಗ್ಗೆ ನಮ್ಮ ಕರಾವಳಿ ಸಮಾಚಾರಕ್ಕೆ ಕ್ರಷೀ ಇಲಾಖಾ ಸಹಾಯಕ ನಿರ್ದೇಶಕಿ ರಶ್ಮಿ ಶಾಪುರ್‌ ಮಠ ಸ್ಪಷ್ಟಿಕರಣವನ್ನು ನೀಡಿದ್ದಾರೆ ಹಾಗಾದರೆ ರಶ್ಮಿ ಶಾಪುರ್‌ ಮಠ ಏನು ಹೇಳಿದ್ದಾರೆ ಬನ್ನಿ ನೋಡೋಣ

ರಾಜ್ಯದಾಧ್ಯಂತ ಪ್ರಧಾನಿ ನರೆಂದ್ರ ಮೋದಿ ಕರೋನಾ ಸಂದರ್ಬದಲ್ಲಿ ಸಮಾಜ ಮುಖಿಯಂತಹ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು ಅದರಲ್ಲಿ ಪಿ ಎಮ್‌ ಕಿಸಾನ್‌ ಯೋಜನೆಯು ಒಂದಾಗಿತ್ತು ಅರ್ಜಿಗಳನ್ನು ಪಂಚಾಯತ್‌ ಇಂದ ಹಿಡಿದು ಸಿ ಎಸ್‌ ಸಿ ಸೆಂಟರ್‌ಗಳಲ್ಲಿಯು ಹಾಕ ಬಹುದಿತ್ತು ರೈ ಬಾಂದವರು ಈ ಯೋಜನೆಯ ಲಾಭ ಪಡೆಯಲು ಸಮರೋಪಾದಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು ಹಾಗು ತಮ್ಮಗೆ ಬರ ಬೇಕಾಗಿದ್ದ ಅನುದಾನಕ್ಕೂ ಕಾಯುತ್ತಿದ್ದರು ಈ ಯೋಜನೆಯಲ್ಲಿ ಕೆಲವರಿ ಹಣವು ಕೂಡಾ ದೊರೆತಿತ್ತು ಆದರೆ ಹೆಚ್ಚಿನ ಪ್ರಮಾಣದ ರೈತರಿಗೆ ಇನ್ನು ಕೂಡ ಹಣ ದೊರೆತಿರುವುದಿಲ್ಲಾ ಒಂದು ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಸರಿ ಸುಮಾರು 16೦೦೦ ದಷ್ಟು ಅರ್ಜಿಗಳು ತಿರಸ್ಕ್ರತವಾಗಿರುತ್ತದೆ ಎಂದು ತಿಳಿದು ಬಂದಿದೆ ಕಾರಣ ಈ ಬಗ್ಗೆ ಭಟ್ಕಳ ತಾಲೂಕಿನಾಧ್ಯಂತ ಆಕ್ರೋಶಗಳು ಕೇಳಿಬರುತ್ತಿದೆ ಜನರು ಕ್ರಷೀ ಇಲಾಖೆಯನ್ನೆ ಗುರಿಯಾಗಿಸಿಕೊಂಡು ಹೀಡಿ ಶಾಪವನ್ನು ಹಾಕುತ್ತಿದ್ದಾರೆ ಅಲ್ಲದೆ ಇಲಾಖೆಗೆ ನೇರವಾಗಿ ಹೋಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ಬಹಳಷ್ಟು ನಡೆದಿದೆ ಈ ಬಗ್ಗೆ ನಮ್ಮ ಕರಾವಳಿ ಸಮಾಚಾರ ಸಮಸ್ಯೆಯ ಬೆನ್ನತ್ತಿ ಹೋಗಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಶ್ಮೀ ಶಾಪುರ್‌ ಮಠ ಅವರನ್ನು ಮಾತನಾಡಿಸಿದಾಗ ಈ ಸಮಸ್ಯೆ ರಾಜ್ಯದಾಧ್ಯಂತ ತಲೆದೂರಿದೆ ಕಾರಣ ಮೋದಲನೆಯದಾಗಿ ಆದಾರ್‌ ಕಾರ್ಡ ಮತ್ತು ಆರ್ಟಿಸಿಗಳಲ್ಲಿರುವ ವಿಬಿನ್ನ ಹೆಸರಿನ ಗೋಂದಲ , ಮತ್ತು ಒಂದೆ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಅರ್ಜಿ ಸಲ್ಲಿಸುವುದು ಹಾಗು ಇನ್ಕಮ್‌ ಟ್ಯಾಕ್ಸ ಬರಣ ಮಾಡುವವರು ಇಲ್ಲಿ ಅರ್ಜಿ ಸಲ್ಲಿಸಿದ್ದು ಹೀಗೆ ಅನೇಕ ತೊಂದರೆಗಳಿಂದ ಈ ಅರ್ಜಿಗಳು ತಿರಸ್ಕ್ರತವಾಗಿರುತ್ತದೆ ಈಗಾಗಲೆ ಅನೇಕ ಸಮಸ್ಯೆಗಳನ್ನು ನಾವು ಪರಿಹರಿಸಿದ್ದೆವೆ ಇನ್ನು ಒಂದು ಸಾವಿರದಷ್ಟು ಅರ್ಜಿಗಳು ಬಾಕಿ ಇರುತ್ತದೆ ಈ ಗೊಂದಲ ತಾಲೂಕಿನಲ್ಲಿ ಸಧ್ಯವೆ ಪರಿಹಾರವಾಗಲಿದೆ ಎಂದು ಹೇಳಿದರು.

ಇದೆ ಸಂದರ್ಬದಲಿ ಕ್ರಷೀ ಇಲಾಖೆಯ ಇನ್ನೊಬ್ಬ ಅಧಿಕಾರಿ ಎ ಬಿ ಹಿಟ್ನಾಳ್‌ ಮಾತನಾಡಿ ಈ ಅರ್ಜಿ ತಿರಸ್ಕ್ರತ ಗೊಳ್ಳಲು ಇ ಕೆವೈಸಿ ಮಾಡಿಸಿಕೊಳ್ಳದಿರುವುದು ಒಂದು ಕಾರಣವೆ ಆಗಿರುತ್ತದೆ ಕಾರಣ ಪ್ರತಿಯೊಬ್ಬರೈತಬಾಂದವರು ಇದೆ ಮಾರ್ಚ ತಿಂಗಳ ಒಳಗಾಗಿ ಇ ಕೆವೈಸಿ ಮಾಡಿಸಿಕೊಳ್ಳ ಬೇಕು ಇದನ್ನು ರೈತರೆ ನೇರವಾಗಿ ಮಾಡಿಕೊಳ್ಳ ಬಹುದು ಅಥವಾ ಸಿ ಎಸ್‌ ಸಿ ಸೆಂಟರಗಳಿಗೆ ತೆರಳಿಯು ಮಾಡಿಸಿಕೊಳ್ಳ ಬಹುದು ಎಂದು ಹೇಳಿದರು.

ಒಟ್ಟಾರೆ ಕೊರೊನಾ ಸಂದರ್ಬದಲ್ಲಿ ರೈತರು ಕೆಂದ್ರದ ಈ ಯೋಜನೆಯಯಿಂದ ತಮ್ಮ ಕಷ್ಟಕ್ಕೆ ಸ್ವಲ್ಪವಾದರು ಸಹಾಯ ವಾಗುತ್ತದೆಯೆನೋ ಎಂಬ ಆಸಎಯಲ್ಲಿದ್ದರು ಆದರೆ ಈ ಗೋಂದಲಗಳ ಕಾರಣ ರೈತನ ಈ ಆಸೆಯು ಸಂಪೂರ್ಣ ಮಣ್ಣು ಪಾಲಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಇನ್ನು ಮುಂದಾದರು ಈ ಎಲ್ಲಾ ಗೋಂದಲಗಳು ಪರಿಹಾರವಾಗಿ ರೈತನಿಗೆ ಸಿಗಬೇಕಾದ ಹಕ್ಕು ಆತನಿಗೆ ಸಿಕ್ಕಿತೆ ಎಂದು ಕಾದು ನೋಡ ಬೇಕಾಗಿದೆ

WhatsApp
Facebook
Telegram
error: Content is protected !!
Scroll to Top