Karnataka Weather Today: ಇಂದು ಹಲವೆಡೆ ಹಗುರ ಮಳೆ ಸಾಧ್ಯತೆ, ಕರ್ನಾಟಕದ ಹವಾಮಾನ ವರದಿ ಹೀಗಿದೆ

ತಮಿಳುನಾಡಿನ ಕರಾವಳಿ ಪ್ರದೇಶ, ರಾಯಲ್ಸೀಮಾ ಹಾಗೂ ಕೇರಳ ಮತ್ತು ಲಕ್ಷದ್ವೀಪದ ಹಲವೆಡೆ ಹಗುರ ಮಳೆಯಾಗಲಿದೆ. ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಶೀತಗಾಳಿ ಮುಂದುವರೆಯಲಿದೆ

Karnataka Weather Forecast Jan 29th 2022: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಇದೆ.  ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಇಂದು ಗರಿಷ್ಠ 28 ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕರಾವಳಿ ಭಾಗದಲ್ಲಿ(Coastal Area) ಒಣ ಹವೆ ಇರಲಿದೆ. ಚಳಿ ಹೆಚ್ಚಾಗಿರುವ ಹಿನ್ನೆಲೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಬಿಸಿಲು ನಾಡು ಜಿಲ್ಲೆಗಳಲ್ಲಿ ಚಳಿಯ (Winter) ಪ್ರಮಾಣ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇನ್ನು ಬದಲಾಗುತ್ತಿರುವ ಹವಾಮಾನದಿಂದಾಗಿ ಶೀತ ಸಂಬಂಧಿತ ರೋಗಗಳಿಂದ (Cold Fever) ಜನರು ಬಳಲತೊಡಗಿದ್ದಾರೆ. ಉತ್ತರ ಕರ್ನಾಟಕದ (North Karnataka) ಬೀದರ್, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ದಟ್ಟವಾದ ಮಂಜಿನ ಜೊತೆ ಇಬ್ಬನಿ ಬೀಳುತ್ತಿದೆ. ಕರ್ನಾಟಕದಲ್ಲಿ ವರುಣ ತನ್ನ ಆರ್ಭಟ ನಿಲ್ಲಿಸಿದ್ದರೂ, ಭಾರತದ ಹಲವೆಡೆ ಇನ್ನೂ ಸಹ ಮಳೆಯಾಗುತ್ತಿದೆ. ಹಿಮಪಾತ, ದಟ್ಟ ಮಂಜಿನ ಜೊತೆಗೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಮುಂದಿನ 24 ಗಂಟೆ ಎಲ್ಲೆಲ್ಲಿ ಮಳೆ?

ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಹಗುರ ಮಳೆಯ ಜೊತೆಗೆ ಹಿಮಪಾತವಾಗಲಿದೆ. ನಾಳೆಯೂ ಸಹ ಇದೇ ವಾತಾವರಣ ಮುಂದುವರೆಯಲಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಅರುಣಾಚಲ ಪ್ರದೇಶದಲ್ಲಿ ಹಿಮಪಾತವಾಗಲಿದೆ ಎಂದು ಭಾರತೀಯ ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ಅಂಡಮಾನ್ ನಿಕೋಬಾರ್​ನಲ್ಲಿಯೂ ಸಹ ಸಾಧಾರಣ ಮಳೆಯಾಗಲಿದೆ.

ಕರ್ನಾಟಕದ ದಕ್ಷಿಣ ಒಳನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗ, ತಮಿಳುನಾಡಿನ ಹಲವೆಡೆ ಹಾಗೂ ಕೇರಳದಲ್ಲಿ ಇಂದು ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಲಕ್ಷದ್ವೀಪದಲ್ಲೂ ಸಹ ಹಗುರ ಮಳೆಯಾಗಲಿದೆ ಎಂದು IMD ಹೇಳಿದೆ.

ಜೊತೆಗೆ ತಮಿಳುನಾಡಿನ ಕರಾವಳಿ ಪ್ರದೇಶ, ರಾಯಲ್​ಸೀಮಾ ಹಾಗೂ ಕೇರಳ ಮತ್ತು ಲಕ್ಷದ್ವೀಪದ ಹಲವೆಡೆ ಹಗುರ ಮಳೆಯಾಗಲಿದೆ. ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಶೀತಗಾಳಿ ಮುಂದುವರೆಯಲಿದೆ.

ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಮುಂದಿನ 24 ಗಂಟೆಗಳಿಂದ 48 ಗಂಟೆವರೆಗೆ ಶೀತಗಾಳಿ ಬೀಸಲಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಹಗುರ ಮಳೆಯ ಜೊತೆಗೆ ಹಿಮಪಾತ ಆಗುವ ಸಾಧ್ಯತೆ ಇದೆ IMD ಮುನ್ಸೂಚನೆ ನೀಡಿದೆ. ಇನ್ನು, ಆಂಧ್ರಪ್ರದೇಶದ ಕರಾವಳಿ, ರಾಯಲ್ಸೀಮಾ, ತಮಿಳುನಾಡು, ಕೇರಳ ಹಾಗೂ ಅಂಡಮಾನ್ & ನಿಕೋಬಾರ್ನಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಕಳೆದ 24 ಗಂಟೆಯ ಹವಾಮಾನ ವರದಿ:

ಕಳೆದ 24 ಗಂಟೆಯಲ್ಲಿ ಅರುಣಾಚಲ ಪ್ರದೇಶ ಮತ್ತು ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಸಾಧಾರಣ ಮಳೆಯಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ, ತಮಿಳುನಾಡಿನ ಕರಾವಳೀ, ರಾಯಲ್ಸೀಮಾ ಮತ್ತು ಕೇರಳ & ಲಕ್ಷದ್ವೀಪದಲ್ಲಿ ಹಗುರ ಮಳೆಯಾಗಿದೆ. ಉತ್ತರ ಪ್ರದೇಶದ ಹಲವೆಡೆ ಹಿಮಪಾತವಾಗಿದೆ. ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಶೀತಗಾಳಿ ಬೀಸಿದೆ.

ಮಧ್ಯಪ್ರದೇಶದಲ್ಲಿ ಇಂದು ಮತ್ತು ನಾಳೆ ತೀವ್ರ ಶೀತಗಾಳಿ ಬೀಸಲಿದೆ. ಪಂಜಾಬ್, ಹರಿಯಾಣ, ಚಂಡೀಗರ್, ರಾಜಸ್ಥಾನದಲ್ಲಿ ಇಂದು-ನಾಳೆ ದಿನ ಶೀತಗಾಳಿ ಬೀಸಿದರೆ, ಉತ್ತರ ಪ್ರದೇಶದಲ್ಲಿ ಜನವರಿ 30ರವರೆಗೆ ಶೀತಗಾಳಿ ಮುಂದುವರೆಯಲಿದೆ. ಮಹಾರಾಷ್ಟ್ರ, ಮಾರತ್​ವಾಡ, ಗುಜರಾತ್​​ನಲ್ಲಿ ಮುಂದಿನ 2 ದಿನ ಶೀತಗಾಳಿ ಬೀಸಲಿದೆ. ಒಡಿಶಾದಲ್ಲಿ ಜನವರಿ 29 &30ರಂದು ಶೀತಗಾಳಿ ಹೆಚ್ಚಾಗಲಿದೆ.

WhatsApp
Facebook
Telegram
error: Content is protected !!
Scroll to Top