ಭಟ್ಕಳ ತಾಲೂಕ ಪುರಾಣ ಪ್ರಸಿದ್ದ ಶ್ರೀ ದಂಡಿನದುರ್ಗಾ ದೇವಸ್ಥಾನಕ್ಕೆ ಕಲ್ಲೆಸೆತ : ಶಾಂತಿ ಕದಡುವ ಪ್ರಯತ್ನವೆ ಅಥವಾ ರಾಜಕಿಯ ಗಿಮಿಕ್ಕೆ

ಪಟ್ಟಣದ ಶ್ರೀ ದಂಡಿನದುರ್ಗಾ ದೇವಸ್ಥಾನಕ್ಕೆ ಕಳೆದ ಕೆಲವು ದಿನಗಳಿಂದ ಕಲ್ಲನ್ನು ಎಸೆಯಲಾಗುತ್ತಿದ್ದು ಮಂಗಳವಾರ ಇದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರ ಗಮನಕ್ಕೆ ಬಂದಿದ್ದು ನಗರ ಠಾಣೆಗೆ ಈ ಕುರಿತು ದೂರು ದಾಖಲಾಗಿದೆ.

ಪಟ್ಟಣದ ಕೋಟೇಶ್ವರ ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಜ೨೨ರಿಂದ ಜ೨೪ರವರೆಗೆ ವರ್ಧಂತಿ ಉತ್ಸವ ನಡೆಯುತಿತ್ತು. ಜ.೨೨ರಂದು ದೇವಸ್ಥಾನದ ಪ್ರಾಂಗಣದಲ್ಲಿ ಶಾಮಿಯಾನ ಹಾಕಲಾಗಿತ್ತು. ೨೨ರಂದು ದೇವಸ್ಥಾನಕ್ಕೆ ದುಷ್ಕರ್ಮಿಗಳು ಕಲ್ಲು ಎಸೆಯಲು ಆರಂಭಿಸಿದ್ದರು. ಮೊದಲ ದಿನ ಆಡಳಿತ ಮಂಡಳಿಯ ಸದಸ್ಯರು ಅದನ್ನು ಗಂಭಿರವಾಗಿ ಪರಿಗಣಿಸಿಲ್ಲ. ನಂತರ ೨೩ರಂದು ಪೂಜಾ ಸಮಯದಲ್ಲಿ ಮತ್ತೆ ಕಲ್ಲು ತೂರಾಟ ಆರಂಭವಾಗಿದೆ. ಪೂಜಾ ಕಂಕೈರ್ಯದಲ್ಲಿ ತೊಡಕು ಬರಬಾರದು ಎನ್ನುವ ಹಿನ್ನಲೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು ಅದನ್ನು ಅಲ್ಲಿಗೆ ಬಿಟ್ಟಿದ್ದರು. ೨೪ ಮತ್ತು ೨೫ರಂದು ಅದೆ ಘಟನೆ ಪುನರಾವರ್ತನೆ ಆಗಿದೆ. ೨೫ರಂದು ದುಷ್ಕರ್ಮಿಗಳು ಎಸೆದ ಕಲ್ಲು ಆಡಳಿತ ಮಂಡಳಿ ಅಧ್ಯಕ್ಷ ಮೋಹನ ಶಿರಾಲಿಕರ ಕಾಲಿಗೆ ತಗುಲಿದೆ. ದೇವಸ್ಥಾನದ ಸುತ್ತಲೂ ಇನ್ನೊಂದು ಕೋಮಿನವರ ಮನೆಗಳೆ ಹೆಚ್ಚಿದ್ದು ಆತಂಕ ಹೆಚ್ಚುವಂತೆ ಮಾಡಿದೆ. ಈ ಹಿಂದೆ ಈ ದೇವಸ್ಥಾನದಲ್ಲಿ ಕಳ್ಳತನಗಳು ನಡೆದಿದ್ದು ಈವರೆಗೂ ಕಳ್ಳರ ಪತ್ತೆಯೆ ಇಲ್ಲವಾಗಿದೆ ಈಗ ಕಲ್ಲು ತೂರಾಟ ನಡೆಸಲಾಗಿದೆ ಈ ಕಲ್ಲು ತುರಾಟದ ಹಿಂದೆ ಧರ್ಮಾಧರ ಕೈವಾಡ ಇದೆಯೋ ಅಥವಾ ಇದೊಂದು ರಾಜಕಿಯ ಹುನ್ನಾರವೋ ಎಂಬುವುದು ಇನ್ನು ಮುಂದೆಯಷ್ಟೆ ತಿಳಿದು ಬರಬೇಕಿದೆ

ಈ ಘಟನೆಯ ಕುರಿತು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಒರ್ವ ಪೊಲೀಸರನ್ನು ಸ್ಥಳಕ್ಕೆ ನೀಯೋಜನೆಗೊಳಿಸಲಾಗಿದೆ .

WhatsApp
Facebook
Telegram
error: Content is protected !!
Scroll to Top