Economy: ಕೋವಿಡ್‌ನಿಂದಾಗಿ ಪಾತಾಳಕ್ಕೆ ಇಳಿದ ಬಡವರ ಆದಾಯ; ಹೆಚ್ಚಳಗೊಂಡ ಶ್ರೀಮಂತರ Income

ಆರ್ಥಿಕತೆಯ ಪಿರಮಿಡ್‍ನ ಕೆಳಭಾಗದಲ್ಲಿರುವ ಶೇ. 20ರಷ್ಟು ಕಡು ಬಡವರು 2005-2016ರವರೆಗೆ ತಮ್ಮ ಆದಾಯದಲ್ಲಿ ಶೇ. 183ರಷ್ಟು ಬೆಳವಣಿಗೆ ಸಾಧಿಸಿದ್ದರು.

ಭಾರತದಲ್ಲಿ ಆರ್ಥಿಕ ಉದಾರೀಕರಣ (Economic liberalization in India) ಜಾರಿಯಾಗಿ, ತದನಂತರ 1995ರಿಂದ ಏರುಗತಿಯಲ್ಲೇ ಇದ್ದ ದೇಶದ ಜನಸಂಖ್ಯೆಯ (Population) ಶೇ. 20ರಷ್ಟಿರುವ ಕಡು ಬಡವರ ಆದಾಯ, 2020-21ನೇ ಸಾಲಿನ ಸಾಂಕ್ರಾಮಿಕ ವರ್ಷದಲ್ಲಿ (Pandemic year) ಶೇ. 53ರಷ್ಟು ಇಳಿಕೆಯಾಗಿರುವುದು ಕಂಡು ಬಂದಿದೆ. ಈ ಇಳಿಕೆ 2015-16ನೇ ಸಾಲಿಗೆ ಹೋಲಿಸಿದಾಗ ಕಂಡು ಬಂದಿದೆ. ಇದೇ ಐದು ವರ್ಷಗಳ ಅವಧಿಯಲ್ಲಿ ಶೇ. 20ರಷ್ಟು ಶ್ರೀಮಂತರ ಕೌಟುಂಬಿಕ ಆದಾಯ ಶೇ. 39ರಷ್ಟು ಹೆಚ್ಚಳಗೊಂಡಿದ್ದು, ಕೋವಿಡ್ ಆರ್ಥಿಕ (Economic Impact) ಪರಿಣಾಮವು ತಳ ಸಮುದಾಯಗಳು ಹಾಗೂ ಮೇಲ್ವರ್ಗದವರ ಮೇಲೆ ತೀವ್ರ ವೈರುಧ್ಯಮಯವಾಗಿರುವುದು ಇದರಿಂದ ನಿಚ್ಚಳಗೊಂಡಿದೆ.

ಸಮೀಕ್ಷೆ ಪ್ರಕಾರ
2021ರಲ್ಲಿ ICE360 ನಡೆಸಿರುವ ಇತ್ತೀಚಿನ ಸಮೀಕ್ಷೆಯಲ್ಲಿ ಈ ಬಗೆಯ ಕಠಿಣ K ರೂಪದ ಆರ್ಥಿಕ ಚೇತರಿಕೆ ಕಂಡು ಬಂದಿದ್ದು, ಈ ಸಮೀಕ್ಷೆಯನ್ನು ಮುಂಬೈ ಮೂಲದ ಚಿಂತಕ ಚಾವಡಿ ಪೀಪಲ್ಸ್ ರಿಸರ್ಚ್ ಆನ್ ಇಂಡಿಯಾ ಕನ್ಸೂಮರ್ ಎಕಾನಮಿ (PRICE) ನಡೆಸಿದೆ. ಏಪ್ರಿಲ್ ಮತ್ತು ಅಕ್ಟೋಬರ್ 2021ರ ನಡುವೆ ನಡೆದಿರುವ ಈ ಸಮೀಕ್ಷೆಯಲ್ಲಿ ಮೊದಲ ಸುತ್ತಿನಲ್ಲಿ 2,00,000 ಕುಟುಂಬಗಳನ್ನು ಒಳಗೊಂಡಿದ್ದರೆ, ಎರಡನೇ ಸುತ್ತಿನಲ್ಲಿ 42,000 ಕುಟುಂಬಗಳನ್ನು ಒಳಗೊಂಡಿದೆ. ಈ ಸಮೀಕ್ಷೆಯನ್ನು 120ಕ್ಕೂ ಹೆಚ್ಚು ಪಟ್ಟಣಗಳು ಹಾಗೂ 800 ಗ್ರಾಮಗಳಲ್ಲಿ ನಡೆಸಲಾಗಿದೆ.

ಸಾಂಕ್ರಾಮಿಕವು 2020-21ನೇ ಸಾಲಿನ ಕನಿಷ್ಠ ಪಕ್ಷ 2 ತ್ರೈಮಾಸಿಕಗಳಲ್ಲಿ ಆರ್ಥಿಕತೆಯನ್ನು ಸ್ಥಗಿತ ಸ್ಥಿತಿಗೆ ತಂದಿತ್ತು. ಇದರಿಂದ ಭಾರತದ 2021ನೇ ಸಾಲಿನ ಜಿಡಿಪಿ ಬೆಳವಣಿಗೆ ಶೇ. 7.3ರಷ್ಟು ಸಂಕುಚಿತಗೊಂಡಿತ್ತು. ಸಮೀಕ್ಷೆಯ ಪ್ರಕಾರ, ಸಾಂಕ್ರಾಮಿಕವು ನಗರ ಪ್ರದೇಶಗಳ ಬಡವರನ್ನು ಹೆಚ್ಚು ಬಾಧಿಸಿದ್ದು, ಅವರ ಕೌಟುಂಬಿಕ ಆದಾಯವನ್ನು ಅಕ್ಷರಶಃ ನಿರ್ಮೂಲನೆಗೊಳಿಸಿದೆ

ಕೌಟುಂಬಿಕ ಆದಾಯ
ಜನಸಂಖ್ಯೆಯನ್ನು ಆದಾಯವಾರುವಾಗಿ ಐದು ವಿಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಈ ಅವಧಿಯಲ್ಲಿ ಮೊದಲ ತಳ ವಿಭಾಗದ ಶೇ. 20ರಷ್ಟು ಕಡುಬಡವರ ಕೌಟುಂಬಿಕ ಆದಾಯವು ಶೇ. 53ರಷ್ಟು ನಾಶವಾಗಿದೆ. ಎರಡನೆ ತಳ ವಿಭಾಗದಲ್ಲಿರುವ ತಳ ಮಧ್ಯಮ ವರ್ಗದವರ ಕೌಟುಂಬಿಕ ಆದಾಯವೂ ಶೇ. 32ರಷ್ಟು ಇಳಿಕೆಯಾಗಿದೆ.

ಆರ್ಥಿಕ ಉದಾರೀಕರಣ ಜಾರಿಯಾದಾಗಿನಿಂದ ಯಾವುದೇ ಈ ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ, ಈ ಸಾಲಿನ ಐದು ವರ್ಷಗಳಲ್ಲಿ ಶೇ. 20ರಷ್ಟು ಶ್ರೀಮಂತರ ಸರಾಸರಿ ಆದಾಯ ವೃದ್ಧಿಗೊಂಡಿದ್ದು, ಒಂದು ಗುಂಪಾಗಿ ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಆದಾಯದ ಹರಿವನ್ನು ಪಡೆದುಕೊಂಡಿದೆ.

ಇದಕ್ಕೆ ಸಂಪೂರ್ಣ ತದ್ವಿರುದ್ಧ ಬೆಳವಣಿಗೆ ಶೇ. 20ರಷ್ಟು ಕಡುಬಡವ ವರ್ಗದ ಮೇಲೆ ಆಗಿದೆ. 1995ರಿಂದೀಚೆಗೆ ಅವರು ತಮ್ಮ ಆದಾಯದಲ್ಲಿ ಈವರೆಗೆ ಕುಸಿತವನ್ನೇ ಕಂಡಿರಲಿಲ್ಲ. ಆದರೆ, ಕೋವಿಡ್ ಸಾಂಕ್ರಾಮಿಕದ ಮರ್ಮಾಘಾತದಿಂದಾಗಿ 2016ರಲ್ಲಿ ಅವರು ಗಳಿಸಿದ್ದ ಆದಾಯದ ಶೇ. 50ರಷ್ಟನ್ನು ಮಾತ್ರ ಈ ಅವಧಿಯಲ್ಲಿ ಗಳಿಸಲು ಸಾಧ್ಯವಾಗಿದೆ.

ಕಡುಬಡವರ ಪಾಲಿಗೆ ಮಾರಕ
ಆರ್ಥಿಕತೆಯ ಪಿರಮಿಡ್‍ನ ಕೆಳಭಾಗದಲ್ಲಿರುವ ಶೇ. 20ರಷ್ಟು ಕಡು ಬಡವರು 2005-2016ರವರೆಗೆ ತಮ್ಮ ಆದಾಯದಲ್ಲಿ ಶೇ. 183ರಷ್ಟು ಬೆಳವಣಿಗೆ ಸಾಧಿಸಿದ್ದರು. ಈ ಬೆಳವಣಿಗೆಯ ವಾರ್ಷಿಕ ದರ ಶೇ. 9.9ರಷ್ಟಾಗಿತ್ತು. ಇದೇ ಅವಧಿಯಲ್ಲಿ ಶೇ. 20ರಷ್ಟು ಶ್ರೀಮಂತರ ಆದಾಯ ಕೇವಲ ಶೇ. 34ರಷ್ಟು ಮಾತ್ರ ಬೆಳವಣಿಗೆಯಾಗಿತ್ತು. ಈ ಹೋಲಿಕೆಯೇ ಸಾಂಕ್ರಾಮಿಕ ಕಾಲಘಟ್ಟವು ಕಡುಬಡವರ ಪಾಲಿಗೆ ಎಷ್ಟು ಮಾರಕವಾಗಿ ಪರಿಣಮಿಸಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ.

ಬಜೆಟ್ ತಯಾರಿ ಕುರಿತು ಹೇಳುವುದಾದರೆ, ಸರ್ಕಾರದ ಗುರಿಯು ಕಡಿತಗೊಂಡಿದೆ. ಹಣಕಾಸು ಸಚಿವೆ 2022-23ನೇ ಸಾಲಿನ ಬಜೆಟ್ ಪ್ರಸ್ತಾವನೆಯಲ್ಲಿ ದೇಶದ ಆರ್ಥಿಕ ಪುನಶ್ಚೇತನಕ್ಕೆ ಮಾರ್ಗನಕ್ಷೆ ರೂಪಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿರುವ ಪ್ರೈಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಶುಕ್ಲಾ, “ನಮಗೆ ಎರಡೂ ತುದಿಯ ಜನರನ್ನು ಉದ್ದೇಶಿಸಿ ರೂಪುಗೊಂಡಿರುವ K ರೂಪದ ನೀತಿಯ ಅಗತ್ಯವಿದ್ದು, ಈ ಎರಡು ತುದಿಯಲ್ಲಿರುವ ಜನರ ನಡುವೆ ಹೇಗೆ ಸೇತುವೆಯನ್ನು ನಿರ್ಮಿಸಬಹುದು ಎಂಬ ಒಳನೋಟ ಹೊಂದಿರಬೇಕಿದೆ” ಎಂದು ಹೇಳಿದ್ದಾರೆ.

WhatsApp
Facebook
Telegram
error: Content is protected !!
Scroll to Top