OME » NEWS» NATIONAL-INTERNATIONAL
ರಾಷ್ಟ್ರಧ್ವಜಕ್ಕೆ ಅಪಮಾನ; Amazon ವಿರುದ್ಧ ಪ್ರಕರಣ ದಾಖಲು
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಸಂಬಂಧ ದೂರು ದಾಖಲಿಸುವಂತೆ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರ ಪೊಲೀಸರಿಗೆ ಸೂಚನೆ ನೀಡಿದ್ದರು

ಭೋಪಾಲ್ (ಜ. 26): ಭಾರತದ ರಾಷ್ಟ್ರಧ್ವಜಕ್ಕೆ (Indian Flag) ಅವಮಾನ ಮಾಡುವಂತಹ ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇ ಕಾಮರ್ಸ್​ ದೈತ್ಯ ಅಮೆಜಾನ್ (Amazon) ವಿರುದ್ಧ ಮಧ್ಯ ಪ್ರದೇಶ ಪೊಲೀಸರು (MadhyaPradesh Police) ಪ್ರಕರಣ ದಾಖಲಿಸಿದ್ದಾರೆ. ತ್ರಿವರ್ಣ ಧ್ವಜ ಮುದ್ರಿಕೆ ಹೊಂದಿರುವ ಶೂ, ಕೀ ಚೈನ್​, ಟೀ ಶರ್ಟ್​ ಮತ್ತು ಮಾಸ್ಕ್​ ಸೇರಿದಂತೆ ಅನೇಕ ವಸ್ತುಗಳನ್ನು ಅಮೆಜಾನ್​ ಮೂಲಕ ಗಣರಾಜ್ಯೋತ್ಸವ ಹಿನ್ನಲೆ ಮಾರಾಟ ಮಾಡಲಾಗುತ್ತಿತ್ತು. ಭಾರತದ ರಾಷ್ಟ್ರಧ್ವಜಕ್ಕೆ ಈ ಮೂಲಕ ಅಮೆಜಾನ್​ ಅಪಮಾನ ಮಾಡಿದೆ. ಈ ಹಿನ್ನಲೆ ಕೆನಾಡ ಇ ಕಾಮರ್ಸ್​ ದೈತ್ಯನನ್ನ ಬಾಯ್​ಕಟ್​ ಮಾಡುವಂತೆ ಟ್ವೀಟರ್​ನಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಸಂಬಂಧ ದೂರು ದಾಖಲಿಸುವಂತೆ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರಂತೆ ಮಧ್ಯ ಪ್ರದೇಶ ಪೊಲೀಸರು ಅಮೆಜಾನ ಕಂಪನಿ ಮತ್ತು ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.

ತ್ರಿವರ್ಣ ಧ್ವಜಕ್ಕೆ ಅಪಮಾನ
ಗಣರಾಜ್ಯೋತ್ಸವಕ್ಕೆ ಇನ್ನೇನು ದಿನಗಣನೆ ಇರುವ ಹಿನ್ನಲೆ ಅಮೆಜಾನ್ನಲ್ಲಿ ಅನೇಕ ವಸ್ತುಗಳ ಮಾರಾಟಕ್ಕೆ ಮುಂದಾಗಲಾಗಿದೆ. ಈ ವೇಳೆ ಚಾಕೋಲೆಟ್ ಪೇಪರ್, ಫೇಸ್ ಮಾಸ್ಕ್, ಮಗ್, ಕಕೀ ಚೈನ್ ಮಕ್ಕಳ ಬಟ್ಟೆ ಹಾಗೂ ಶೂಗಳ ಮೇಲೆ ಭಾರತೀಯ ರಾಷ್ಟ್ರ ಧ್ವಜಗಳನ್ನು ಪ್ರಿಂಟ್ ಮಾಡಲಾಗಿದೆ. ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಯತ್ನ ನಡೆಸಲಾಗಿದೆ.

2002ರ ಫ್ಲಾಗ್​ ಕೋಡ್ ಅಡಿ ಈ ರೀತಿ ರಾಷ್ಟ್ರಧ್ವಜವನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳಲುವಂತಿಲ್ಲ. ಈ ಹಿನ್ನಲೆ ತ್ರಿವರ್ಣಧ್ವಜ ಹೊಂದಿರುವ ಈ ವಸ್ತುಗಳ ಮಾರಾಟಕ್ಕೆ ಮುಂದಾಗಿರುವ ಅಮೆಜಾನ್​ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನಲೆ ಹಲವಾರು ಬಳಕೆದಾರರು ಅಮೆಜಾನ್ ವಿರುದ್ಧ ಸಾಮಾಜಿಕ ಮಾಧ್ಯಮದ ಮೂಲಕ ಕೋಪ ಹೊರ ಹಾಕಿದ್ದರು.


ಈ ಸಂಬಂಧ ಮಾತನಾಡಿರುವ ಮಧ್ಯ ಪ್ರದೇಶ ಸರ್ಕಾರ, ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಮಾರಾಟ ಮಾಡುವ ಉತ್ಪನ್ನಗಳ ಮೇಲೆ ನಮ್ಮ ರಾಷ್ಟ್ರಧ್ವಜವನ್ನು ಬಳಸಲಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದನ್ನು ಸಹ (ರಾಷ್ಟ್ರಧ್ವಜ) ಶೂಗಳ ಮೇಲೆ ಬಳಸಿರುವುದು ಸಹಿಸಲಾಗದು. ಈ ಹಿನ್ನಲೆ ಕ್ರಮಕ್ಕೆ ಮುಂದಾಗಲಾಗುವುದು. ಧ್ವಜ ಸಂಹಿತೆ ಅಡಿಯಲ್ಲಿ ಅಮೆಜಾನ್‌ನ ಅಧಿಕಾರಿಗಳು ಮತ್ತು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಾನು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದರು

ಅಮೆಜಾನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಗೃಹ ಸಚಿವರು ಪೊಲೀಸರಿಗೆ ನಿರ್ದೇಶನ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇದೇ ರೀತಿ ಪ್ರಕರಣ ನಡೆದಿತ್ತು.

ಇದೇ ಮೊದಲಲ್ಲ ಅಮೆಜಾನ್ ವಿರುದ್ಧ ದೂರು
ಕಳೆದ ವರ್ಷ ಇ-ಕಾಮರ್ಸ್ ಸೈಟ್ ಮೂಲಕ ವಿಷಕಾರಿ ಸಲ್ಫಾಸ್ ಮಾತ್ರೆಗಳನ್ನು ಪಡೆದು ಯುವಕನ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಅಮೆಜಾನ್‌ನ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು

ಇ-ಕಾಮರ್ಸ್ ಪೋರ್ಟಲ್ ಗಾಂಜಾ ಸರಬರಾಜು ಮಾಡುತ್ತಿದ್ದ ಗ್ಯಾಂಗ್ ಅನ್ನು ಭೇದಿಸಿದ ನಂತರ ಭಿಂದ್ ಜಿಲ್ಲೆಯ ಪೊಲೀಸರು ಅಮೆಜಾನ್ ಇಂಡಿಯಾದ ಹೆಸರಿಸದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ

ಇನ್ನು ಈ ಸಂಬಂಧ ತಿಳಿಸಿರುವ ಅಮೆಜಾನ್ ಮಾರಾಟಗಾರರ ವಿರುದ್ದ ಅಗತ್ಯ ಕ್ರಮ ತೆಗೆದು ಕೊಳ್ಳಲು ಬದ್ಧವಾಗಿದೆ ಎಂದು ತಿಳಿಸಿದೆ

WhatsApp
Facebook
Telegram
error: Content is protected !!
Scroll to Top