Omicron: ರಾಜಧಾನಿಯಲ್ಲಿ ಸದ್ದಿಲ್ಲದೆ ಹಬ್ತಿದೆ ಓಮೈಕ್ರಾನ್; ಶೇ.90ರಷ್ಟು ಮಂದಿಗೆ ರೂಪಾಂತರಿ ಸೋಂಕು
ಅಂದಾಜಿಸಲಾಗಿದೆ.

ಬೆಂಗಳೂರು(ಜ.26):  ನಿತ್ಯ  20 ಸಾವಿರಕ್ಕೂ ಅಧಿಕ ಕೊರೋನಾ‌ ಪ್ರಕರಣಗಳು(Corona cases) ಬೆಳಕಿಗೆ ಬರ್ತಿದೆ. ಇದರ ಜೊತೆಗೆ 931 ಓಮೈಕ್ರಾನ್ ಸೋಂಕಿತರೂ ಇದ್ದಾರೆ.‌ ಈ ನಡುವೆ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯೊಂದು(Genomic Sequencing Report) ಎಲ್ಲರ ಅಚ್ಚರಿಗೆ ಕಾರಣವಾಗಿದೆ.‌

ಎಲ್ಲಾ ಕೊರೋನಾ ಅಲ್ಲ..‌ ಬಹುಪಾಲು ಓಮೈಕ್ರಾನ್ ಸೋಂಕು.!!

ಕಳೆದ ಐದೇ ದಿನದಲ್ಲಿ ಬೆಂಗಳೂರಿನಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ಓಮೈಕ್ರಾನ್ ಸೋಂಕು ದೃಢವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಎಲ್ಲಾ ಕೊರೋನಾ ಅಲ್ಲ..‌ ಬಹುಪಾಲು ಓಮೈಕ್ರಾನ್ ಸೋಂಕು.!!

ಎರಡನೇ ಅಲೆಯಲ್ಲಿ ದಾಖಲಾದ ಬಹುತೇಕ ಕೇಸ್ ಗಳು ಡೆಲ್ಟಾ ಮತ್ತು ಅದರ ಉಪ ತಳಿಗಳು. ಇದೇ ಮಾದರಿಯಲ್ಲಿ ಈಗಿನ ಮೂರನೇ ಅಲೆಯಲ್ಲಿ ದಾಖಲಾಗುತ್ತಿರುವ ಕೊರೋನಾ ಸೋಂಕು ಬಹುಪಾಲು ಓಮೈಕ್ರಾನ್ ಆಗಿರುವ ಸಾಧ್ಯತೆ ಇದೆ ಎಂದು ತಜ್ಞರು ಆರಂಭದಲ್ಲೇ ಅಭಿಪ್ರಾಯ ಪಟ್ಟಿದ್ದರು. ಅದರಂತಯೇ ಸದ್ಯ ದೃಢವಾಗುತ್ತಿರುವ ಸೋಂಕಿನ ಸಿಂಪಾಲು ಓಮೈಕ್ರಾನ್ ಆಗಿದೆ ಎಂದು ತಿಳಿದು ಬಂದಿದೆ.

ಸರ್ಕಾರದ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ಇಡೀ ರಾಜ್ಯದಲ್ಲಿ ಸದ್ಯ 931 ಓಮೈಕ್ರಾನ್ ಸೋಂಕಿತರಿದ್ದಾರೆ. ಈ ಪೈಕಿ ಬಹುಪಾಲು ಸೋಂಕಿತರು ಬೆಂಗಳೂರಿನಲ್ಲೇ ಇದ್ದಾರೆ. ಆದರೆ ಅಸಲಿಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಷ್ಟು ಓಮೈಕ್ರಾನ್ ಸೋಂಕಿತರಿದ್ದಾರೆ ಎನ್ನುವುದೇ ಹೌಹಾರುವ ವಿಚಾರವಾಗಿದೆ.

ಸರ್ಕಾರದ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ಇಡೀ ರಾಜ್ಯದಲ್ಲಿ ಸದ್ಯ 931 ಓಮೈಕ್ರಾನ್ ಸೋಂಕಿತರಿದ್ದಾರೆ. ಈ ಪೈಕಿ ಬಹುಪಾಲು ಸೋಂಕಿತರು ಬೆಂಗಳೂರಿನಲ್ಲೇ ಇದ್ದಾರೆ. ಆದರೆ ಅಸಲಿಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಷ್ಟು ಓಮೈಕ್ರಾನ್ ಸೋಂಕಿತರಿದ್ದಾರೆ ಎನ್ನುವುದೇ ಹೌಹಾರುವ ವಿಚಾರವಾಗಿದೆ.

ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯಲ್ಲಿ ಅಚ್ಚರಿಯ ಮಾಹಿತಿ ಉಲ್ಲೇಖ 

ಇತ್ತೀಚೆಗೆ ಪಾಲಿಕೆ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯನ್ನು ತರಿಸಿಕೊಂಡಿತ್ತು. ಪ್ರತಿ ದಿನ ಜಿನೋಮಿಕ್ ಸೀಕ್ವೆನ್ಸಿಂಗ್ ಸರಾಸರಿ 300 ಸ್ಯಾಂಪಲ್ಸ್ ಬಿಬಿಎಂಪಿ ಕಳುಹಿಸಿಕೊಡುತ್ತಿತ್ತು. ಈ ವರದಿಯಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಹಿಸುತ್ತಿರುವ 90% ಸ್ಯಾಂಪಲ್ ನಲ್ಲಿ ಓಮೈಕ್ರಾನ್ ದೃಢವಾಗುತ್ತಿದೆ ಎಂದು ಉಲ್ಲೇಖವಾಗಿದೆ. ಎರಡನೇ ಅಲೆಯಲ್ಲಿಯೂ ಇದೇ ಮಾದರಿಯಲ್ಲಿ ಡೆಲ್ಟಾ ಪತ್ತೆಯಾಗಿ ಎಲ್ಲಾ ಪ್ರಕರಣಗಳನ್ನು ಡೆಲ್ಟಾ ಎಂದು ಪರಿಗಣಿಸಲಾಗಿತ್ತು. ಈಗ ಜಿನೋಮಿಕ್ ಸೀಕ್ವೆನ್ಸಿಂಗ್ ನಲ್ಲಿ 90% ಓಮೈಕ್ರಾನ್ ಸೋಂಕು ದೃಢವಾಗುತ್ತಿರುವ ಹಿನ್ನೆಲೆ, ಪ್ರತಿದಿನ ಪತ್ತೆಯಾಗಿತ್ತಿರುವ ಸೋಂಕಿತರ ಪೈಕಿ 90% ರಷ್ಟು ಓಮೈಕ್ರಾನ್ ಸೋಂಕಿತರು ಆಗಿರುವ ಸಾಧ್ಯತೆ ಇದೆ.

ಐದು ದಿನದಲ್ಲಿ 1,27,008 ಸೋಂಕಿತರು ಪತ್ತೆ.!!

ಕಳೆದ ಐದು ದಿನದಲ್ಲಿ ಪತ್ತೆಯಾದ ಒಟ್ಟು ಸೋಂಕಿತರು 1,27,008. ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯ ಆಧಾರವಾಗಿಟ್ಟುಕೊಂಡು, ಹೇಳುವುದಾದರೆ ಈ ಪೈಕಿ 90% ಓಮೈಕ್ರಾನ್ ಸೋಂಕಿತರುವ ಇರುವ ಸಾಧ್ಯತೆ ಇದೆ. ಅಂದರೆ ಕಳೆದ ಐದೇ ದಿನದಲ್ಲಿ ಬೆಂಗಳೂರಿನಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ಓಮೈಕ್ರಾನ್ ಸೋಂಕು ದೃಢವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ಮೂಲಕ ತಜ್ಞರು ಭವಿಷ್ಯ ನುಡಿದಂತೆ ಮೂರನೇ ಅಲೆಯಲ್ಲಿ ಬಹುಪಾಲು ಸೋಂಕಿತರಿಗೆ ಓಮೈಕ್ರಾನ್ ಬಡಿದಿದೆ ಎನ್ನಲಾಗಿದೆ. ಆದರೆ ಇನ್ನೂ ಈ ಬಗ್ಗೆ ಅಧಿಕೃತವಾಗಿ ಸರ್ಕಾರ ಘೋಷಿಸಿಕೊಂಡಿಲ್ಲ.‌ ಅದಾಗಿಯೂ ಓಮೈಕ್ರಾನ್ ಮಾರಣಾಂತಿಕವಾಗಿಲ್ಲ ಎನ್ನುವುದೇ ಆಶಾದಾಯಕ. ಇದಕ್ಕೆ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆಯೇ ಸಾಕ್ಷಿ. ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಳವಾದರೂ, ಸಾವು ನೋವುಗಳು ಕಡಿಮೆ ಪ್ರಮಾಣದಲ್ಲಿ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

WhatsApp
Facebook
Telegram
error: Content is protected !!
Scroll to Top