ಭಟ್ಕಳ ಪುರಸಭಾ ವಾಹನಕ್ಕೆ ಪುರಸಭಾ ಅಧ್ಯಕ್ಷರು ಕರ್ನಾಟಕ ಸರಕಾರ ನಾಮಪಲಕ : ನಾಮಪಲಕವನ್ನು ಕಿತ್ತು ಹಾಕಿದ ಆರ್‌.ಟಿ. ಓ

ಭಟ್ಕಳ: ತಾಲೂಕಿನ ಪುರಸಭಾ ವಾಹನ ಕೆ ಎ ಸಿರಿಸ್‌ ನಂಬರ್‌ ಪ್ಲೆಟ್‌ ಹೊಂದಿರುವ ಇನೋವಾ ಕಾರಿಗೆ ಅಧ್ಯಕ್ಷರು ಪುರಸಭೆ ಭಟ್ಕಳ ಕರ್ನಾಟಕ ಸರಕಾರ ಎಂದು ಹಾಕಿರುವ ನಾಮಪಲಕವನ್ನು ನಿಯಮ ಬಾಹಿರವಾಗಿದೆ ಎಂದು ಆರ್‌ ಟಿ ಓ ಅಧಿಕಾರಿ ಕಾರಿಗೆ ಅಳವಡಿಸಿರುವ ನಾಮ ಪಲಕವನ್ನೆ ಕಿತ್ತುಹಾಕಿದ್ದಲ್ಲೆ ದಂಡ ವಿದಿಸಿರುವ ಘಟನೆ ಬೆಳಕಿಗೆ ಬಂದಿದೆ

ಸರಕಾರಿ ವಾಹನಗಳ ಖರಿದಿಗೆ ಸರಕಾರದಿಂದಲೆ ಹಣ ಬಿಡುಗಡೆಯಾಗಿರುತ್ತದೆ ಇಂತಹ ವಾಹನಗಳ ನಂಬರ್‌ ಪ್ಲೆಟ್ಗಳು ಜಿ ಸಿರಿಸಿನಲ್ಲಿ ಪ್ರಾರಂಬವಾಗುತ್ತದೆ ಈ ವಾಹನಗಳನ್ನು ಸರಕಾರಿ ಅಧಿಕಾರಿಗಳ ಒಡಾಟಕ್ಕೆ ನಿಡಲಾಗಿರುತ್ತದೆ ಆದರೆ ಭಟ್ಕಳ ತಾಲೂಕಿನ ಪುರಸಭೆಯವತಿಯಿಂದ ೨೦೨೧ ರ ಸಾಲಿನಲ್ಇಲಿ ಖರಿದಿಸಿದ್ದ ಇನೋವಾ ಕಾರಿಗೆ ಮಾತ್ರ ಜಿ ಸಿರಿಸ್‌ ಅಲ್ಲದ ಖಾಸಗಿ ವಾಹನಗಳಿಗಿರು ಕೆ.ಎ ಎನ್ನುವ ಸಿರಿಸ್‌ ಹೊಂದಿರುವ ವಾಹನವನ್ನು ಬಳಸಲಾಗುತ್ತಿದೆ ಮೆಲಾಗಿ ಈ ವಾಹನಕ್ಕೆ ಆಧ್ಯಕ್ಷರು ಪುರಸಭೆ ಭಟ್ಕಳ ಎನ್ನುವ ನಾಮಪಲಕವನ್ನು ಅಳವಡಿಸಲಾಸಗಿತ್ತು ಸರಕಾರಿ ಅನುದಾನದಿಂದ ಖರಿದಿಸಿದ ಸರಕಾರಿ ವಾಹನಕ್ಕೆ ಖಾಸಗಿ ವಾಹನದ ಸಿರಿಸ್‌ ನಂ ಕೆ ಎ ಯಾಕಿದೆ ಇದು ಖಾಸಗಿ ವಾಹನವೆ ಅಲ್ಲದೆ ಈ ಸರಕಾರಿ ವಾಹನಕ್ಕೆ ಯಾಕಾಗಿ ಅಧ್ಯಕ್ಷರ ನಾಮಪಲಕವನ್ನು ಅಳವಡಿಸಲಾಗಿದೆ ಇದು ಅಧ್ಯಕ್ಷರಿಗೆ ಕೊಟ್ಟಿರುವ ವಾಹನವೆ ಎಂಬ ಆಕ್ರೋಶಗಳು ಸಾರ್ವಜನಿಕ ವಲಯದಲ್ಲಿ ಎದ್ದಿರುತ್ತದೆ ಈ ಬಗ್ಗೆ ಪುರಸಭಾ ಸದಸ್ಯರಾದ ಪಾಸ್ಕಲ್‌ ಗೋಮ್ಸ ಆರ್‌ ಟಿ ಓ ಅಧಿಕಾರಿಗಳಿಗೆ ದೂರು ಅರ್ಜಿಯನ್ನು ಸಲ್ಲಿಸಿದ್ದರು ಈ ದೂರಿನ ಹಿನ್ನೆಲೆಯಲ್ಲಿ ಬುದುವಾರ ಬೆಳ್ಳಬೆಳಿಗ್ಗೆ ಪುರಸಭಾ ಕಛೇರಿಗೆ ಆಗಮಿಸಿದ್ದ ಎ ಆರ್‌ ಟಿ ಓ ಎಲ್‌ ಪಿ ನಾಯ್ಕ ಸಿಬ್ಬಂದಿಗಳು ನಿಯಮ ಬಾಹಿರವಾಗಿ ಅಳವಡಿಸಿದ್ದ ಅಧ್ಯಕ್ಷರು ಪುರಸಭೆ ಭಟ್ಕಳ ಕರ್ನಾಟಕ ಸರಕಾರ ಎಂಬ ಬೊರ್ಡನ್ನು ಕಿತ್ತು ಹಾಕಿದ್ದಲ್ಲದೆ 500 ರೂ ದಂಡವನ್ನು ವಿದಿಸಿದ್ದಾರೆ

ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಅವರನ್ನು ಕೇಳಿದಾಗ ಆರ್‌ ಟಿ ಓ ಅಧಿಕಾರಿ ನೋಟಿಸನ್ನು ನೀಡಿ ಘಂಟೆ ಕಾಯಬೇಕಿತ್ತು ಅಲ್ಲದೆ ಅವರು ಕರ್ನಾಟಕ ಸರಕಾರ ಎಂದಿರುವ ಬೊರ್ಡನ್ನು ತೆಗೆದು ಹಾಕಿದ್ದಾರೆ ಇದು ತಪ್ಪು ಎಂದು ಹೇಳಿದರು ನಿಮ್ಮ ವಾಹನಕ್ಕೆ ಜಿ ಸಿರಿಸ್‌ ಇಲ್ಲಾ ಖಾಸಗಿ ವಾಹನದ ಸಿರಿಸ್‌ ಇದೆಯಲ್ಲಾ ಕರ್ನಾಟಕ ಸರಕಾರ ಎಂದು ಹೇಗೆ ಹಾಕಿಕೊಳ್ಳುತ್ತಿರಿ ಎಂದು ಪ್ರಶ್ನಿಸಿದರೆ ನಮ್ಮಲ್ಲಿ ಈಗ ಇರುವ ಬೋಡಿ ಅಟೊನೊಮಿ ಬೋಡಿಯಾಗಿರುತ್ತದೆ ಆದ್ದರಿಂದ ಕೆ ಎ ಸಿರಿಸಿನಲ್ಲಿ ನಂಬರ್‌ ಪ್ಲೆಟ್‌ ಇದೆ ಈ ನಂಬರ್‌ ಪ್ಲೆಟ್‌ ತೆಗೆದ ಬಗ್ಗೆ ನಾವು ಕಾನೂನು ಮೋರೆ ಹೋಗುತ್ತೆವೆ ಎನ್ನುತ್ತಿದ್ದಾರೆ

ಈ ಬಗ್ಗೆ ಎ ಆರ್‌ ಟಿ ಓ ಎಲ್‌ ಪಿ ನಾಯ್ಕ ಮಾಧ್ಯಕ್ಕೆ ಪ್ರತಿಕ್ರಿಯಿಸಿ ಯಾವುದೆ ಖಾಸಗಿ ವಾಹನಗನಗಳಿಗೆ ಕರ್ನಾಟಕ ಸರಕಾರ ಎಂಬ ಬೀರ್ಡಗಳನ್ನು ಅಳವಡಿಸುವಂತಿಲ್ಲಾ ಈ ವಾಹನ ಖಾಸಗಿ ವಾಹನದ ಸಿರಿಯಲ್‌ ನಂ ಹೊಂದಿರುತ್ತದೆ ಎಂದು ಖಡಕ್ಕಾಗಿ ಉತ್ತರಿಸುತ್ತಿದ್ದಾರೆ

ಪ್ರಕರಣ ಬಗ್ಗೆ ಪುರಸಭಾ ಸದಸ್ಯ ಪಾಸ್ಕಲ್‌ ಗೋಮ್ಸ ಮಾತನಾಡಿ ಸರಕಾರಿ ಅನುದಾನದಿಂದ ಪುರಸಭೆ ವಾಹನ ಖರಿದಿ ಮಾಡಿದ ಹಾಗು ಅದರ ನೊಂದಣಿ ಖಾಸಗಿ ಸಿರಿಯಲ್‌ ನಂ ನೊಂದಿಗೆ ಮಾಡಲಾಗಿದೆ ಯಾವು ಸರಕಾರಿ ವಾಹನದ ಸಿರಿಯಲ್‌ ನಂ ಜಿ ಸಿರಿಯಲ್‌ ನಂ ಇಂದ ಪ್ರಾರಂಬವಾಗುತ್ತದೆ ಹಾಗಾದರೆ ನಮ್ಮ ಈ ಪುರಸಭಾ ವಾಹನಕ್ಕೆ ಮಾತ್ರ ಖಾಸಗಿ ಸಿರಿಯಲ್‌ ನಂ ಯಾಕಿದೆ ಮೇಲಾಗಿ ಈ ವಾಹನಕ್ಕೆ ಪುರಸಭಾ ಅಧ್ಯಕ್ಷರ ಹೆಸರಿನ ನಾಮಪಲಕವನ್ನು ಹಾಕಲಾಗಿದೆ ಈ ಬಗ್ಗೆ ನಾನು ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಎಲ್ಲಾ ನಾಮ ಪಲಕವನ್ನು ಕಿತ್ತು ಹಾಕಿದ್ದಾರೆ ಇಲ್ಲೆ ಇದು ನಿಯಮ ಬಾಹಿರ ಎಂದು ರುಜುವಾತಾಗುತ್ತದೆ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಾನು ಇನ್ನು ಬಯಲಿಗೆಳೆಯುತ್ತೆನೆ ಎಂದು ಹೇಳಿದರು

ಒಟ್ಟಾರೆ ಭಟ್ಕಳ ತಾಲೂಕಿನ ಪುರಸಭಾ ವಾಹನ ಬಹಳಷ್ಟು ಸದ್ದು ಮಾಡುತ್ತಿದೆ ಇದು ಖಾಸಗಿ ವಾಹನವೋ ಅಥವಾ ಸರಕಾರಿ ವಾಹನವೋ ಸರಕಾರಿ ವಾಹನವಾದರೆ ಇಷ್ಟೆಲ್ಲಾ ಐಶಾರಾಮಿ ವಾಹನದ ಅಗತ್ಯ ಇತ್ತೆ ಈ ವಾಹನ ಖಾಸಗಿ ನೋಂದಣಿಯಲ್ಲಿರುವುದರಿಂದ ಇದನ್ನು ಸರಕಾರೆತರ ಚಟುವಟಿಕೆಗೆ ಬಳಸದೆ ಖಾಸಗಿಯಾಗಿಯೂ ಬಳಸುವ ಸಾಧ್ಯತೆ ಇರುತ್ತದೆ ಒಂದು ವೇಳೆ ಈ ವಾಹನ ಅನದಿಕ್ರತ ಚಟುವಟಿಕೆಗಳಿಗೆ ಬಳಕೆಯಾದರೆ ಯಾರು ಹೋಣೆ ಸದ್ಯ ಈಗ ಪುರಸಬೆಯಲ್ಲಿ ಇಂತಹ ಘಟನೆ ನಡೆದಿರುತ್ತದೆ ಇದೆ ರೀತಿ ಇತರೆ ಇಲಾಖೆಯಲ್ಲಿಯು ನಡೆದರೆ ಹೋಣೆಯಾರು ಇಲ್ಲಿ ಪುರಸಭೆಯ ನಿಲುವು ಸರಿಯೆ ಅಥವಾ ಆರ್‌ ಟಿ ಓ ಇಲಾಖೆ ಮಾಡಿದ್ದು ಸರಿಯೆ ಎಂಬ ಬಗ್ಗೆ ಸಂಬದಿಸಿದಂತೆ ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಸ್ಟಷ್ಟ ಮಡಿಸ ಬೇಕು ಎನ್ನುವುದು ಸಾರ್ವಜನಿಕರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top