ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರಣ ಹಿಂತೆಗೆದುಕೊಂಡ ಕೇಂದ್ರ ಸರಕಾರದ ರಾಜ್ಯೋತ್ಸವ ಸಮಿತಿ ನಡೆಗೆ ಖಂಡನೆ: ರಾಷ್ಟ್ರಪತಿಗಳಿಗೆ ಮನವಿ

ಭಟ್ಕಳ: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರಣವನ್ನು ಕೇಂದ್ರ ಸರಕಾರದ ರಾಜ್ಯೋತ್ಸವ ಸಮಿತಿ ಹಿಂತೆಗೆದುಕೊಂಡಿರುವುದನ್ನು ಖಂಡಿಸಿ
ಭಟ್ಕಳ ನಾಮಧಾರಿ ಅಭಿವೃದ್ದಿ ಸಂಘ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನ ಸಂಘ ಭಟ್ಕಳ ಇವರ ವತಿಯಿಂದ ಭಟ್ಕಳ
ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟಪತಿಗಳಿ ಮನವಿ ಸಲ್ಲಿಸಿದರು

ಇಲ್ಲಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕೆ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ ಬ್ರಹ್ಮಶ್ರೀ ನಾರಯಣ ಗುರುಗಳ ಚಿತ್ರವಿದ್ದ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕಾರ ಮಾಡಿದ್ದು ಖಂಡಿನೀಯ. ಇದರಿಂದ ಹಿಂದುಳಿದ ಸಮಾಜದವರಾದ ನಮಗೆಲ್ಲ ಬೇರಸ ತರಿಸಿದೆ. ನಾರಾಯಣ ಗುರುಗಳು ಹಿಂದೂ ಧರ್ಮದವನ್ನು ಮೇಲಕ್ಕೆತ್ತುವಲ್ಲಿ ಗುರುಗಳು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸ್ಥಭ್ದ ಚಿತ್ರಣವನ್ನು ಪುನಃ ಗಣನೆಗೆ ಪ್ರದರ್ಶಿಸಬೇಕು ಎಂದರು. ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಮನವಿಯನ್ನು ಓದಿದರು. ಮನವಿಯಲ್ಲಿ ಗಣರಾಜ್ಯೋತ್ಸವ ಸಮಿತಿ ನಾರಾಯಣ ಗುರುಗಳ ಸ್ತಬ್ದ ಚಿತ್ರಣವನ್ನು ತಿರಸ್ಕರಿಸಿದ ಬಗ್ಗೆ ನಮಗೆ ತಿಳಿದು ಬಂದಿದ್ದು, ಇದರಿಂದ ನಮಗೆ ಅತೀವ ನೋವುಂಟಾಗಿದೆ. ಎಲ್ಲಾ ಜಾತಿ ಜನಾಂಗದ ಉಧ್ದಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಒಂದೇ ಜಾತಿ ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ನಾರಾಯಣ ಗುರುಗಳು ಅಶಾಂತಿಯನ್ನು ಎಬ್ಬಿಸದೇ ವೇದ ಉಪನಿಷತ್ತುಗಳ ಶಾಂತಿ ಮಂತ್ರದ ಸಿದ್ದಾಂತದAತೆ ಸಮಾಜವನ್ನು ಪರಿವರ್ತಿಸಿದ ಏಕೈಕ ಮಹಾನ್ ದಾರ್ಶನಿಕರಾಗಿದ್ದಾರೆ. ಇಂಥಹ ಗುರುಗಳಿಗೆ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ ಪೂಜೆ ನಡೆಯುತ್ತಿದೆ. ಹಿಂದುಳಿದ ವರ್ಗದ ಮಹಾನ್ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಕೇರಳ ಸರಕಾರ ಕಳಿಸಿದ್ದು ಇದನ್ನು ಕೇಂದ್ರ ಸರಕಾರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಸರಿಯಲ್ಲ. ಆದ್ದರಿಂದ ಈ ವಿಷಯದಲ್ಲಿ ಕೇಂದ್ರ ಸರಕಾರವು ಕೂಡಲೇ ಎಚ್ಚೆತ್ತುಕೊಂಡು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವ ಪರೇಡಿನಲ್ಲಿ ಪ್ರದರ್ಶಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಮಾಸ್ತಿ ನಾಯ್ಕ, ಸದಸ್ಯರಾದ ಶಿವರಾಮ ನಾಯ್ಕ, ಗಿರೀಶ ನಾಯ್ಕ, ಶ್ರೀಧರ ನಾಯ್ಕ ಮುಠ್ಠಳ್ಳಿ, ಚಂದ್ರ ನಾಯ್ಕ, ಸುರೇಶ ನಾಯ್ಕ, ನಾಗೇಂದ್ರ ನಾಯ್ಕ, ವೆಂಕಟ್ರಮಣ ನಾಯ್ಕ, ಶ್ರೀರಾಮ ಕ್ಷೇತ್ರ ಸಮಿತಿಯ ಪ್ರಮುಖರಾದ ಕೆ.ಆರ್. ನಾಯ್ಕ, ವೆಂಕಟೇಶ ನಾಯ್ಕ ತಲಗೋಡು, ವಿನಾಯಕ ನಾಯ್ಕ, ಬಿ.ಎಸ್.ಎನ್.ಡಿ.ಪಿ. ಸುಧಾಕರ ನಾಯ್ಕ, ವೆಂಕಟೇಶ ನಾಯ್ಕ, ಕೃಷ್ಣ ನಾಯ್ಕ ಬಲ್ಸೆ ಮತ್ತಿತರರು ಇದ್ದರು.

WhatsApp
Facebook
Telegram
error: Content is protected !!
Scroll to Top