Congress Padayatra: ಪಾದಯಾತ್ರೆ ನಿಲ್ಲಿಸುವಂತೆ ಸೋನಿಯಾ ಗಾಂಧಿ ಸೂಚನೆ: ಈಗ ಏನ್ಮಾಡ್ತಾರೆ ಡಿಕೆಶಿ, ಸಿದ್ದರಾಮಯ್ಯ?

5ನೇ ದಿನದ ಪಾದಯಾತ್ರೆ ಕೂಡ ಆರಂಭವಾಗಿದೆ. ಮತ್ತೊಂದೆಡೆ ಈ ಪಾದಯಾತ್ರೆಯಲ್ಲಿ ಭಾಗಿಯಾದವರಲ್ಲಿ ಕೋವಿಡ್​ ಸೋಂಕು(Corona Virus) ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ ಬಹುತೇಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮ್ಯಾಂಗೋ ಬೋರ್ಡ್ ಮಾಜಿ ಅಧ್ಯಕ್ಷೆ ಎಐಸಿಸಿ ಕಾರ್ಯದರ್ಶಿ ಕಮಲಾಕ್ಷಿ ರಾಜಣ್ಣ ಹಾಗೂ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸಗೆ ಸೋಂಕು ದೃಢಪಟ್ಟಿದೆ

ಕಾಂಗ್ರೆಸ್​ ಪಾದಯಾತ್ರೆ

ಕಾಂಗ್ರೆಸ್​ ಪಾದಯಾತ್ರ

ನಿನ್ನೆ  ಕಾಂಗ್ರೆಸ್(Congress)​ ಪಾದಯಾತ್ರೆ(Padayatra)ಯನ್ನು ನಿಲ್ಲಿಸಲು ಸರ್ಕಾರ ಆದೇಶ ನೀಡಿತ್ತು. ಕಾಂಗ್ರೆಸ್ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದೆ. ಕೊರೋನಾ(Corona) ಸಂದಿಗ್ಧ ಕಾಲದಲ್ಲಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಂಡಿಲ್ಲ ಅಂತ ನಿನ್ನೆ ಹೈಕೋರ್ಟ್,​ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಇಂದು ಕೂಡಾ ಪಾದಯಾತ್ರೆ ಮುಂದುವರಿಸುತ್ತೇವೆ ಅಂತ ಹೇಳಿಕೆಗಳನ್ನ ನೀಡಿದ್ದಾರೆ. ಅಲ್ಲದೇ ಕೆಪಿಸಿಸಿ ಅಧ್ಷಕ್ಷ ಡಿಕೆ ಶಿವಕುಮಾರ್ (DK Shivakumar) ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ. 5ನೇ ದಿನದ ಪಾದಯಾತ್ರೆ ಕೂಡ ಆರಂಭವಾಗಿದೆ. ಮತ್ತೊಂದೆಡೆ ಈ ಪಾದಯಾತ್ರೆಯಲ್ಲಿ ಭಾಗಿಯಾದವರಲ್ಲಿ ಕೋವಿಡ್​ ಸೋಂಕು(Corona Virus) ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ ಬಹುತೇಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮ್ಯಾಂಗೋ ಬೋರ್ಡ್ ಮಾಜಿ ಅಧ್ಯಕ್ಷೆ ಎಐಸಿಸಿ ಕಾರ್ಯದರ್ಶಿ ಕಮಲಾಕ್ಷಿ ರಾಜಣ್ಣ ಹಾಗೂ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸಗೆ ಸೋಂಕು ದೃಢಪಟ್ಟಿದೆ. ಇನ್ನೂ ಈ ನಾಯಕಿರು ಪಾದಯಾತ್ರೆಯಲ್ಲಿ ನೂರಾರು ಜನರೊಂದಿಗೆ ಹೆಜ್ಜೆ ಹಾಕಿದ್ದರು. ಹೀಗಾಗಿ ಇವರ ಸಂಪರ್ಕಕ್ಕೆ ನೂರಾರು ಜನರು ಬಂದಿದ್ದಾರೆ. ಸದ್ಯಕ್ಕೆ ಇವರೆಲ್ಲ ಹೋಮ್​ ಕ್ವಾರಂಟೈನ್​ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.  ಪಾದಯಾತ್ರೆ ಮೊದಲ ದಿನದಿಂದಲೂ ಸಖತ್​ ಆ್ಯಕ್ಟೀವ್​ ಆಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್​ ಅವರ ಆರೋಗ್ಯದಲ್ಲಿ ಏರು ಪೇರು ಉಂಟಾಗಿದೆ. ಹೀಗಾಗಿ ಅವರು ಕೂಡು ಕೋವಿಡ್ ಟೆಸ್ಟ್ ಮಾಡಲಿದೆ.

ಪಾದಯಾತ್ರೆಯಲ್ಲಿ ಭಾಗಿಯಾದವರಿಗೆ ಸೋಂಕು!

ಹೌದು, ಇದು ಕಾಂಗ್ರೆಸ್​ ಪಾದಯಾತ್ರೆ ಅಲ್ಲ.. ಸೋಂಕಿನ ಪಾದಯಾತ್ರೆ ಆಗಿದೆ. ಈ ಪಾದಯಾತ್ರೆಯಲ್ಲಿ ಭಾಗಿಯಾದ ಹಲವರಿಗೆ ಸೋಂಕು ವಕ್ಕರಿಸಿದೆ. ಅಷ್ಟೇ ಅಲ್ಲ, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸೋಂಕು ಅಂಟಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಯಿಂದ ಮತ್ತಷ್ಟು ಸೋಂಕು ಹೆಚ್ಚುವ ಆತಂಕ ಎದುರಾಗಿದೆ. ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ರಾಜ್ಯ ಹೈಕೋರ್ಟ್​ ಗರಂ ಆಗಿದ್ದು, ಕರೋನಾ ಇರೋವಾಗ ಏನಿದೆಲ್ಲಾ ಹುಡುಗಾಟ ಎಂಬ ಧಾಟಿಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದೆ. ಕೋರ್ಟ್​ ನೋಟಿಸ್ ಕೈಯಲ್ಲಿ ಹಿಡಿದು, ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್​ ನಾಯಕರ ವಿರುದ್ಧ ರಾಜ್ಯ ಸರ್ಕಾರ ಸೆಟೆದು ನಿಂತಿದೆ.

ಪಾದಯಾತ್ರೆ ನಿಲ್ಲಿಸುವಂತೆ ಸೋನಿಯಾ ಗಾಂಧಿ ಸೂಚನೆ!

ಹೀಗೆ ಈ ಪಾದಯಾತ್ರೆಯಿಂದ ಸೋಂಕು ಹೆಚ್ಚಿರುವ ಮಾಹಿತಿ ಕಾಂಗ್ರೆಸ್​ ಹೈಕಮಾಂಡ್​ವರೆಗೂ ಹೋಗಿದೆ. ಕೂಡಲೇ ಪಾದಯಾತ್ರೆ ನಿಲ್ಲಿಸುವಂತೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಸೂಚನೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಈಗ ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಯಾರೇ ಬಂದರೂ ಈ ಪಾದಯಾತ್ರೆ ನಿಲ್ಲಲ್ಲ. ನಾನೊಬ್ಬನೆ ನಡೆದುಕೊಂಡು ಪಾದಯಾತ್ರೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದರು.

WhatsApp
Facebook
Telegram
error: Content is protected !!
Scroll to Top