Covid Patient: ಮಣಿಪಾಲ್ ಆಸ್ಪತ್ರೆಯಿಂದ ಪರಾರಿಯಾದ ಕೋವಿಡ್ ಸೋಂಕಿತ ವ್ಯಕ್ತಿ

Covid Patient: ದೊಡ್ಡಬಳ್ಳಾಪುರದ ಮಣಿಪಾಲ್ ಆಸ್ಪತ್ರೆಯಿಂದ ನಾಪತ್ತೆಯಾಗಿರುವ 28 ವರ್ಷದ ಕೊರೊನಾ ಸೋಂಕಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 188, 269 ಮತ್ತು 270 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸೆಕ್ಷನ್ 51 (ಬಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಭಾರತದಲ್ಲಿ(India) ಕೊರೋನಾ(Corona) ಮೂರನೇ ಅಲೆಯ ಅಬ್ಬರ ಅಧಿಕವಾಗಿದೆ.ಹೀಗಾಗಿ ರೈಲು(train) ನಿಲ್ದಾಣ ಬಸ್ ನಿಲ್ದಾಣ ವಿಮಾನ ನಿಲ್ದಾಣ(Airport) ಸೇರಿದಂತೆ ಗಡಿಭಾಗಗಳಲ್ಲಿ ಸರ್ಕಾರ(Government) ಕಟ್ಟೆಚ್ಚರ ವಹಿಸಿದೆ.. ಅದರಲ್ಲೂ ಅಂತರ್ರಾಷ್ಟ್ರೀಯ ಪ್ರಯಾಣಿಕರ(passengers) ಮೇಲೆ ತೀವ್ರ ನಿಗಾ ವಹಿಸಿರುವ ಸರ್ಕಾರ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಬರುವ ಪ್ರತಿಯೊಬ್ಬ ಪ್ರಜೆಗಳ ಮೇಲೆ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿದೆ.. ಸೋಂಕು ಕಾಣಿಸಿಕೊಂಡ ಪ್ರಯಾಣಿಕರನ್ನೂ ಕೂಡಲೇ ಆಸ್ಪತ್ರೆಗೆ(Hospital) ದಾಖಲು ಮಾಡಿ ಚಿಕಿತ್ಸೆ ನೀಡುವ ಸರ್ಕಾರ ಮುಂದಾಗಿದೆ. ಆದರೆ ಎಷ್ಟು ಜನ ಪ್ರಯಾಣಿಕರು ಎಲ್ಲಿ ಕ್ವಾರಂಟೈನ್ ಗೆ ಒಳಪಡಿಸುತ್ತಾರೆ ಎಂಬ ಭಯದಿಂದ ಪ್ರಭಾಷಣೆ ನಡೆದ ಬಳಿಕ ವಿಮಾನನಿಲ್ದಾಣದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾರೆ.. ಅದೇ ರೀತಿ ಕೆಲವರು ಆಸ್ಪತ್ರೆಗೆಸೇರಿದ ಬಳಿಕ ಸೋಂಕು ಇತರರಿಗೆ ಹರಡಬಹುದು ಎಂಬ ಭೀತಿಯು ಕೂಡ ಇಲ್ಲದೆ ಆಸ್ಪತ್ರೆಯಿಂದ ಪರಾರಿ ಆಗುತ್ತಿದ್ದಾರೆ.. ಅದೇ ರೀತಿ ಈಗ ಸೋಂಕು ಕಾಣಿಸಿಕೊಂಡ ರೋಗಿಯೊಬ್ಬ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ

ಆಸ್ಪತ್ರೆಯಿಂದ ಪರಾರಿಯಾದ ಕೊರೋನಾ ರೋಗಿ

ಕಳೆದ ಕೆಲವು ದಿನಗಳ ಹಿಂದೆ ಯುಕೆಯಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ 28 ವರ್ಷದ ಪ್ರಯಾಣಿಕರ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗಿತ್ತು.. ತಪಾಸಣೆಯಲ್ಲಿ ಆತನಿಗೆ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಯುಕೆಯಿಂದ ಬಂದಿದ್ದ ಸೋಂಕಿತ ವ್ಯಕ್ತಿಯನ್ನು ಬೆಂಗಳೂರು ಗ್ರಾಮಾಂತರ ಪ್ರದೇಶದ ದೊಡ್ಡಬಳ್ಳಾಪುರದಲ್ಲಿ ಇರುವ ಮಣಿಪಾಲ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆದರೆ ಸೋಂಕು ಕಾಣಿಸಿಕೊಂಡಿರುವ 28 ವರ್ಷದ ವ್ಯಕ್ತಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಇನ್ನು ಈ ಘಟನೆ ಕಳೆದ ಸೋಮವಾರ ನಡೆದಿದ್ದು ಮಂಗಳವಾರ ಮಣಿಪಾಲ ಆಸ್ಪತ್ರೆಯ ವೈದ್ಯ ಕಾರ್ತಿಕ್ ಅವರು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.. ಹೀಗಾಗಿ ವೈದ್ಯ ಕಾರ್ತಿಕ್ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಂಕು ದೃಢಪಟ್ಟ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ಇನ್ನು ಆಸ್ಪತ್ರೆಯಿಂದ 28 ವರ್ಷದ ಸೋಂಕಿತ ವ್ಯಕ್ತಿ ಹಗಲಿನ ವೇಳೆಯಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದು ಆತನಿಗೆ ಒಮಿಕ್ರೋನ್ ಸೋಂಕು ಇದೆಯಾ ಇಲ್ಲವಾ ಎಂದು ಇನ್ನೂ ದೃಢಪಟ್ಟಿಲ್ಲ ಎಂದು ಮಾಹಿತಿ ನೀಡಿದ್ದಾರೆ..

ನಾಪತ್ತೆಯಾದ ರೋಗಿ ವಿರುದ್ಧ ಪ್ರಕರಣ ದಾಖಲು

ಸದ್ಯ ದೊಡ್ಡಬಳ್ಳಾಪುರದ ಮಣಿಪಾಲ್ ಆಸ್ಪತ್ರೆಯಿಂದ ನಾಪತ್ತೆಯಾಗಿರುವ 28 ವರ್ಷದ ಕೊರೊನಾ ಸೋಂಕಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 188, 269 ಮತ್ತು 270 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸೆಕ್ಷನ್ 51 (ಬಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಇನ್ನು ಕೆಲವು ದಿನಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಜೆ ಯೊಬ್ಬರಿಗೆ ಕೋವಿಡ್ ಕಾಣಿಸಿಕೊಂಡಿತ್ತು. ಹೀಗಿದ್ದರೂ ಸಹಾ ಅವರು ದೇಶದಿಂದ ಯಶಸ್ವಿಯಾಗಿ ಪರಾರಿಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ವಿಮಾನ ನಿಲ್ದಾಣದ ಸಿಬ್ಬಂದಿಗಳಲ್ಲಿ ಸಾಕಷ್ಟು ಆತಂಕ ಸೃಷ್ಟಿ ಮಾಡಿದೆ..ಇನ್ನು ದಕ್ಷಿಣ ಆಫ್ರಿಕಾಕ್ಕೆ ಪರಾರಿಯಾದ ವ್ಯಕ್ತಿ
ತನ್ನ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಯುವ ಮೊದಲು ನಕಲಿ ಆರ್‌ಟಿ-ಪಿಸಿಆರ್ ವರದಿಯ ಸಹಾಯದಿಂದ ದೇಶವನ್ನು ತೊರೆದಿದ್ದಕ್ಕಾಗಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

WhatsApp
Facebook
Telegram
error: Content is protected !!
Scroll to Top