ಕರ್ನಾಟಕವು ತಮಿಳುನಾಡನ್ನು ಚರಂಡಿಯಂತೆ ಬಳಸಿಕೊಳ್ಳುತ್ತಿದೆ: ಎಐಎಡಿಎಂಕೆ ನಾಯಕ

Uncategorized

: ಕರ್ನಾಟಕವು ತನ್ನ ಹೆಚ್ಚುವರಿ ನೀರನ್ನು ಹೊರಹಾಕಲು ತಮಿಳುನಾಡನ್ನು ಕೇವಲ ಚರಂಡಿಯಂತೆ ಬಳಸಿಕೊಳ್ಳುವ ಮೂಲಕ ‘ಆಧಿಪತ್ಯದ ಧೋರಣೆ’ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಆರ್‌.ಬಿ.ಉದಯಕುಮಾರ್‌ ಶುಕ್ರವಾರ ಆರೋಪಿಸಿದ್ದಾರೆ.

‘ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಹಕ್ಕುಗಳ ಕುರಿತು ಒಮ್ಮತದ ನಿಲುವನ್ನು ಪ್ರದರ್ಶಿಸಲು ತಕ್ಷಣವೇ ಸರ್ವಪಕ್ಷ ಸಭೆಯನ್ನು ಕರೆಯಿರಿ’ ಎಂದು ಮುಖ್ಯಮಂತ್ರಿ ವಿಜಯ್‌ ಅವರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಸರ್ಕಾರವು ನಿರಂತರವಾಗಿ ಸುಪ್ರೀಂ ಕೋರ್ಟ್‌, ಕಾವೇರಿ ನೀರು ನಿರ್ವಹಣಾ ಸಮಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ಜಲವಿವಾದ ಮಂಡಳಿಯ ನಿರ್ದೇಶನಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕವು ಐತಿಹಾಸಿಕ ಒಪ್ಪಂದಗಳನ್ನು ಉಲ್ಲಂಘಿಸಿ ಈಗಾಗಲೇ ಐದು ಅಣೆಕಟ್ಟೆಗಳನ್ನು ನಿರ್ಮಿಸಿದೆ. ಇದೀಗ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *