ಮೀನುಗಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ 5 ಲಕ್ಷ ದೇಣಿಗೆ ನೀಡಿದ ಸಚಿವ ಮಂಕಾಳ ವೈದ್ಯ
ನಿಮ್ಮಿಂದ ನಾನು ಇಂದು ಸಚಿವನಾಗಿದ್ದೇನೆ ಸಚಿವ ಮಾಂಕಾಳ ವೈದ್ಯ ಹೇಳಿಕೆ
ಭಟ್ಕಳ : ಇಂದು ನಾನು ಸಚಿವನಾಗಿ ರಾಜ್ಯದಲ್ಲಿ ಜನಸೇವೆ ಮಾಡುತ್ತಿದ್ದೇನೆ ಎಂದರೆ ಅದರ ಶ್ರೇಯಸ್ಸು ನಿಮ್ಮೆಲ್ಲರಿಗೆ ಸಲ್ಲುತ್ತದೆ ಜನಸಾಮಾನ್ಯರ ಏಳಿಗೆಯೇ ನನ್ನ ಮುಖ್ಯಗುರಿ ಎಂದು ಸಚಿವ ಮಾಂಕಾಳ ವೈದ್ಯ ಹೇಳಿದರು
ಅವರು ಭಟ್ಕಳ ತಾಲ್ಲೂಕಿನಲ್ಲಿ ಕರಾವಳಿ ಮೀನುಗಾರ ಕಲಾಸಿಗಳ ಕ್ಷೇಮಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು ಮೀನುಗಾರರ ಬದುಕು ತುಂಬಾ ಕಷ್ಟದಿಂದ ಕೂಡಿದ ಬದುಕಾಗಿದೆ ನಾನು ಯಾವತ್ತೂ ಮೀನುಗಾರರ ಜೊತೆಯಲ್ಲಿ ಇರುತ್ತೇನೆ ಮೀನುಗಾರರು ಕೂಡ ತಮ್ಮ ವೃತ್ತಿ ಜೀವನ ಸಂದರ್ಭದಲ್ಲಿ ಲೈಕ್ ಜಾಕೆಟ್ ಗಳಂತಹ ಸೇಫ್ಟಿ ಸಾಧನೆಗಳನ್ನು ಬಳಸಬೇಕು ಯಾಕೆಂದರೆ ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬ ಬದುಕುತ್ತಿದೆ ಆದ್ದರಿಂದ ತುಂಬಾ ಜಾಗರೂಕತೆಯಿಂದ ತಮ್ಮ ವೃತ್ತಿ ಜೀವನವನ್ನು ನಡೆಸಬೇಕು ಎಂದು ಹೇಳಿದರು ಹಾಗೆಯೇ ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಬೇಕಾದಂತ ಎಲ್ಲ ಸೌಲಭ್ಯಗಳನ್ನು ನಮ್ಮ ಸರಕಾರ ಒದಗಿಸುತ್ತದೆ ಮೀನುಗಾರರ ಮಕ್ಕಳು ವಿದ್ಯಾವಂತರಾಗಬೇಕು ಎಂದು ಹೇಳಿದರು
ಮೀನುಗಾರ ಕಲಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಜಗದೀಶ್ ಮೊಗೇರ ದೊಡ್ಮನೆ ಅವರು ಮಾತನಾಡುತ್ತ ನಮ್ಮ ಪ್ರೀತಿಯ ಸಚಿವ ಮಂಕಾಳ ವೈದ್ಯರು ಮೀನುಗಾರರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಮೊದಲು ಮೀನುಗಾರರಿಗೆ ಯಾವುದೇ ಅನುದಾನಗಳು ದೊರೆಯುತ್ತಿರಲಿಲ್ಲ ಈಗ ಮೀನುಗಾರರ ದುರ್ಮರಣಕ್ಕೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 10 ಲಕ್ಷ ಅನುದಾನವನ್ನು ನೀಡುತ್ತಾರೆ ಈ ಪರಿಹಾರ ನಿಧಿಯನ್ನು 10 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಜೊತೆಗೆ ಮೀನುಗಾರರನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಹೆಚ್ಚಿನ ಅನುದಾನಗಳು ನಮಗೆ ದೊರಕಿಸಿ ಕೊಡಬೇಕೆಂದು ಮೀನುಗಾರ ಸಚಿವರಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಉದ್ಯಮಿಗಳಾದ ಸಂತೋಷ ಗ್ರಾಮ ಪಂಚಾಯಿತಿ ಶಿರಾಲಿಯ ಅಧ್ಯಕ್ಷರಾದ ಭಾಸ್ಕರ್ ಎಂ ದೈಮನೆ ಹಾಗೆಯೇ ಡೀಪ್ ಸೀ ಟ್ರಾವೆಲ್ ಬೋಟ್ ಮಾಲಕ ಸಂಘದ ಅಧ್ಯಕ್ಷರಾದ ಕರುಣಾಕರ್ ಸಾಲಿಯಾನ್ ರವಿರಾಜ್ ಸುವರ್ಣ ತಿಮ್ಮಪ್ಪ ಮೊಗೇರ್ ಹೊನ್ನಿ ಮನೆ ಭಟ್ಕಳ ತಾಲೂಕು ಮೊಗೇರ್ ಸಮಾಜದ ಅಧ್ಯಕ್ಷರಾದ ಅಣ್ಣಪ್ಪ ಎಂ ಮೊಗೇರ್ ಮೀನುಗಾರರ ಮುಖಂಡರಾದ ಮದನ ಕುಮಾರ್ ಬೈಂದೂರು ಮುಂತಾದವರು ಉಪಸ್ಥಿತರಿದ್ದರು