ಡಿಸೋಜಾ ಅವರು ಶರಾವತಿ ಮುಳುಗಡೆ ಪ್ರದೇಶದ ಜನರ ಜೀವನ ಚಿತ್ರಣವನ್ನು ಜನರ ಮುಂದಿಟ್ಟಿದ್ದಾರೆ : ನವೀನ್ ಜಿ.ವಿ
ಭಟ್ಕಳ : ಶ್ರೀ ಸಿಗಂದೂರೇಶ್ವರಿ ಎಜುಕೇಶನಲ್ ಟ್ರಸ್ಟ್ ಉಳ್ಳೂರು ಸಾಗರ ಇದರ ಅಂಗ ಸಂಸ್ಥೆಯಾದ ಶ್ರೀ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆ ಗಿಣಿವಾರ ಸಾಗರ ತಾಲೂಕು ವತಿಯಿಂದ ನಾ ಡಿಸೋಜ ಇವರ 88 ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ಜಿ ವಿ ರವರು ಉದ್ಘಾಟಿಸಿದರು. ನಾ ಡಿಸೋಜಾ ಅವರು ಶರಾವತಿ ಮುಳುಗಡೆ ಪ್ರದೇಶದ ಜನರ ಜೀವನ ಚಿತ್ರಣವನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಎಂದು ನುಡಿದರು. ಅವರ ಪ್ರತಿಯೊಂದು ಕೃತಿಯಲ್ಲೂ ಮಲೆನಾಡಿನ ಜೀವನ ಚಿತ್ರಣ ಸಂಸ್ಕೃತಿ ಉದ್ಯೋಗ ಮುಂತಾದವುಗಳ ಪ್ರಭಾವವನ್ನು ನೋಡುತ್ತೇವೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೃಷ್ಣಮೂರ್ತಿ ಎನ್ ಬಿಳಗಲ್ಲೂರು ರವರು ಕನ್ನಡ ಸಾರಸ್ವತ ಲೋಕದ ಸಾಹಿತಿಗಳಲ್ಲಿ ನಾಡಿ ಕೂಡ ಒಬ್ಬರು ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಪರಿಸರವಾದಿ ಕಾದಂಬರಿ ಕಾರ ಮಕ್ಕಳ ಸಾಹಿತಿಯಾಗಿ ಸಮಾಜಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಯಾರು ಸಮಾಜದಲ್ಲಿ ಶ್ರೇಷ್ಠವಾದ ಕಾರ್ಯಗಳನ್ನು ಮಾಡುತ್ತಾರೆ ಅವರ ಮರಣ ನಂತರ ಸ್ಮರಿಸಲ್ಪಡುತ್ತಾರೆ. ಅಂತಹ ಸ್ಮರಣೆಗೆ ಅರ್ಹರಾದವರು ಎಂದರು.ಮಲೆನಾಡಿನ ಹೆಸರಾಂತ ಸಾಹಿತಿ ನಾ ಡಿಸೋಜ 88ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮತ್ತೊಬ್ಬ ಮುಖ್ಯ ಅತಿಥಿಗಳಾದ ಬಿ.ಎ ಇಂದುದರ
ಗೌಡರವರು ನಾಡಿಸೋಜ ರವರು ಮಲೆನಾಡಿನ ಹೆಸರಾಂತ ಕವಿ ಸಾಹಿತಿ ಬರಹಗಾರರಲ್ಲಿ ನಾ ಡಿಸೋಜ ನಮ್ಮ ಸಾಗರ ತಾಲೂಕಿಗೆ ಕೀರ್ತಿ ತಂದವರಾಗಿದ್ದಾರೆ. ಎಂದರು. ಈ ಕಾರ್ಯಕ್ರಮದಲ್ಲಿ ವೀರಶೈವ ಮಲ್ಲವ ಸಮಾಜದ ಅಧ್ಯಕ್ಷರಾದ ರಾಜೇಂದ್ರ ಗೌಡ ಆವಿನ ಹಳ್ಳಿ ಮತ್ತು ನವೀನ್ ಡಿಸೋಜಾ ಚಲನಚಿತ್ರ ನಿರ್ದೇಶಕರು ಇನ್ನು ಮುಂತಾದವರನ್ನು ಸನ್ಮಾನಿಸಲಾಯಿತು. ನಾ ಡಿಸೋಜಾ ರವರ ಪುತ್ರರಾದ ನವೀನ್ ನಾ ಡಿಸೋಜ ರವರು ಹಕ್ಕಿಗೊಂದು ಗೂಡು ಕೊಡಿ.ಸೆಲ್ವಿಯ ಎಂಬ ಹುಡುಗಿ ಚಲನಚಿತ್ರಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ್ ಕುಮಾರ್ ಎಂ ಪಿ ಪ್ರಾಂಶುಪಾಲರು ಅವರು ವಹಿಸಿದ್ದರು. . ಗುರುಮೂರ್ತಿ ಸಹಕಾರ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಕಾನೂನು ಅರಿವಿನ ಕುರಿತು ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀಮತಿ ಜ್ಯೋತಿ ಆನಂದ್, ಶ್ರೀ ಸತೀಶ್ ಮತ್ತು ಚಿದಾನಂದ್ ಜಿ ಎಸ್ ರವರು ಕಾನೂನು ಅರಿವು ಕುರಿತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕೆ ಆರ್.ಪಿಡಿಒ ಸುಭಾಷ್. ಸೋಮಶೇಖರ್ ಗೌಡ್ರು.ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಮಂಜೋಜಿ ರಾವ್ ಪಿ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೊಡಚಾದ್ರಿ ಆಂಗ್ಲ ಪ್ರೌಢ ವಸತಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು