ಭಟ್ಕಳ ಬ್ಲಾಕ್‌ ಕಾಂಗ್ರೇಸ್‌ ವತಿಯಿಂದ ಪತ್ರಿಕಾಗೋಷ್ಟಿ

ಮಾಸ್ತಪ್ಪ ನಾಯ್ಕ ಬಲ್ಸೆ ಸಚಿವ ವಿರುದ್ದ ಅಪಪ್ರಚಾರ ನಿಲ್ಲಸದಿದ್ದರೆ ಸಾರ್ವಜನಿಕರೆ ಬುದ್ದಿಕಲಿಸುತ್ತಾರೆ : ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ವೇಂಕಟೇಶ ನಾಯ್ಕ

ಭಟ್ಕಳ : ಮಾಸ್ತಪ್ಪ ನಾಯ್ಕ ಬಲ್ಸೆಯವರ ಅನಾಗರಿಕವರ್ತನಗೆ ತಾಲೂಕಿನ ಬೈಲೂರು ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಸರಿಯಾದ ಉತ್ತರವನ್ನು ನಿಡಿದ್ದಾರೆ ಮಾಸ್ತಪ್ಪ ನಾಯ್ಕ ಬಲ್ಸೆ ತಮ್ಮನ್ನು ಇನ್ನಾದರು ತಿದ್ದುಕೊಂಡು ಸನ್ನಡತೆ ರೂಪಿಸಿಕೊಳ್ಳ ಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರೆ ಮಾಸ್ತಪ್ಪ ನಾಯ್ಕ ಅವರಿಗೆ ಸರಿಯಾದ ಬುದ್ದಿಯನ್ನು ಕಲಿಸುತ್ತಾರೆ ಎಂದು ಭಟ್ಕಳ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು

ಅವರು ಮಾಸ್ತಪ್ಪ ನಾಯ್ಕ ಬಲ್ಸೆ ಎಂಬ ವ್ಯೆಕ್ತಿಯೋರ್ವರು ಸಾಮಾಜೀಕ ಜಾಲತಾಣದಲ್ಲಿ ಸಚಿವ ಮಂಕಾಳು ವೈದ್ಯರ ವಿರುದ್ದ ಅವಹೇಳನಕಾರಿಯಾಗಿ ಪೊಷ್ಟ ಮಾಡಿದ ಹಿನ್ನೆಲೆಯಲ್ಲಿ ಕರೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ ಮಾಸ್ತಪ್ಪ ನಾಯ್ಕ ನಮ್ಮ ಸಚಿವರ ವಿರುದ್ದ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಷ್ಟ ಮಾಡುವುದರ ಮೂಲಕ ವಯಕ್ತಿಕವಾಗಿ ತೆಜೋವದೆಯನ್ನು ಮಾಡಿದ್ದಲ್ಲದೆ ಸಚಿವರ ಕುಟುಂಬದ ಸದಸ್ಯರಿಗೂ ಅವಹೇಳನವಾಗುವಂತೆ ಮಾತನಾಡಿದ್ದಾರೆ ಇದು ಖಂಡನೀಯ ಕಾಂಗ್ರೇಸ್‌ ಮುಖಂಡರು ಕಾರ್ಯಕರ್ತರು ಆದ ನಾವುಗಳು ಇದನ್ನು ಸಹಿಸುವುದಿಲ್ಲ ಮಾಸ್ತಪ್ಪ ನಾಯ್ಕ ಬಲ್ಸ ಎಂಬ ಈ ವ್ಯಕ್ತಿ ಕೂಡಲೆ ತನ್ನ ಈ ದುಶ್ಕ್ರತ್ಯವನ್ನು ನಿಲ್ಲಿಸಬೇಕು

ಇನ್ನು ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಶಾಸಕರು ಮುಂದಾಗಿದ್ದಾರೆ ಇದನ್ನು ಕೂಡ ಸಹಿಸದ ಈ ಮಾಸ್ತಪ್ಪ ನಾಯ್ಕ ಸಚಿವರ ವಿರುದ್ದ ಇಲ್ಲಸಲ್ಲದ ಆರೋಪವನ್ನು ಮಾಡಿದ್ದಾನೆ ಬೈಲೂರಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕರನ್ನು ಎತ್ತಿಕಟ್ಟುವ ಕೆಲಸವನ್ನು ಈ ಮಾಸ್ತಪ್ಪ ನಾಯ್ಕ ಪ್ರಯತ್ನ ಮಾಡಿದ್ದಲ್ಲದೆ ಸಭೆಯಲ್ಲಿ ಇಲ್ಲಸಲ್ಲದ ತಪ್ಪು ಮಾಹಿತಿಯನ್ನು ಅಪಪ್ರಚಾರವನ್ನು ಮಾಡಲು ಪ್ರಯತ್ನಿಸಿದ್ದನ್ನು ಆದರೆ ಬೈಲೂರು ಪಂಚಾಯತ್‌ ವ್ಯಾಪ್ತಿಯ ಸಾರ್ವಜನಿಕರು ಇದಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ ಬೈಲೂರು ಪಂಚಾಯತ್‌ ಸಮಸ್ತ ಸಾರ್ವಜನಿಕರು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಚಿವರಿಗೆ ಬೆಂಬಲವನ್ನು ನಿಡಿದ್ದಾರೆ ಇನ್ನಾದರು ಈ ಮಾಸ್ತಪ್ಪ ನಾಯ್ಕ ತನ್ನನ್ನು ತಾನು ತಿದ್ದಿಕೊಂಡು ತನ್ನ ಹೋಣೆಗೇಡಿತನವನ್ನು ಕೈ ಬಿಡಬೇಕು ಇಲ್ಲವಾದರೆ ಮುಂದಿನ ದಿನಗಳು ಇದಕ್ಕೆ ಸಾರ್ವಜನಿಕರೆ ತಕ್ಕ ಪಾಠವನ್ನುನ ಕಲಿಸುತ್ತಾರೆ ಎಂದು ಹೇಳಿದರು

ಪತ್ರಿಕಾಗೋಷ್ಟಿಯಲ್ಲಿ ಕೈಕೀಣಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ರಾಜು ನಾಯ್ಕ, ಗ್ಯಾರಂಟಿ ಕಮೀಟಿ ಅಧ್ಯಕ್ಷರಾದ ರಾಜು ನಾಯ್ಕ ಕೊಪ್ಪ ಬೆಳ್ಕೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಜಗದೀಶ ನಾಯ್ಕ, ಪಟ್ಟಣ ಪಂಚಾಯತ್‌ ಸದಸ್ಯ ರಮೇಶ ನಾಯ್ಕ,ಕಿಸಾನ್‌ ಸಂಘದ ಅಧ್ಯಕ್ಷರಾದ ನಾರಾಯಣ ನಾಯ್ಕ ಸೋಡಿಗದ್ದೆ , ಗ್ಯಾರಂಟಿ ಕಮೀಟಿಯ ಸದಸ್ಯರಾದ ಬಾಸ್ಕರ್‌ ಮೋಗೆರ್‌ ಮಂಜುನಾಥ ನಾಯ್ಕ, ಜಟ್ಟಪ್ಪ ನಾಯ್ಕ ಮುಟ್ಟಳ್ಳಿ ವೆಂಕಟೇಶ ದೇವಾಡಿಗ ಹಾಗು ಇನ್ನಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top