ಭಟ್ಕಳ ತಾಲೂಕಿನಲ್ಲಿ ಅಕ್ರಮ ಇಸ್ಪೀಟ್‌ ಅಡ್ಡಾಕ್ಕೆ ಕಡಿವಾಣ ಇದ್ದರು ಕೂಡ ಅಕ್ರಮವಾಗಿ ಅಂದರ್‌ ಬಾಹರ್‌ ಆಟ : ಪೋಲಿಸ್‌ ಇಲಾಖೆಯ ದಾಳಿ

ಇಸ್ಪೀಟ್‌ ದಂದೆಕೋರರ ಮೇಲೆ ಎಪ್‌ ಐ ಆರ್‌ : ಮೂವರ ಬಂದನ

ಭಟ್ಕಳ ತಾಲೂಕಿನ ಪೋಲಿಸ್‌ ಇಲಾಖೆಯ ಕೆಲವು ಉನ್ನತ ಅಧಿಕಾರಿಗಳಿಂದಲೆ ದಂದೆಕೊರರಿಗೆ ಪ್ರೋತ್ಸಾಹ : ಸಾರ್ವಜನಿಕ ವಲಯದಲ್ಲಿ ಅನುಮಾನದ ಹುತ್ತಾ

ಭಟ್ಕಳ :ತಾಲೂಕಿನಲ್ಲಿ ಕಳೆದ ಎರಡು ವರ್ಷದಿಂದ ಅಕ್ರಮ ಇಸ್ಪಿಟ್‌ ದಂದೆಗೆ ಸಂಪೂರ್ಣ ಕಡಿವಾಣ ಬಿದ್ದರೂ ಕೂಡ ಕೆಲವೊಂದು ದಂದೆಕೊರರು ತಾಲೂಕಿನಲ್ಲಿ ಅಕ್ರಮವಾಗಿ ಕೆಲವು ಅಜ್ಙಾತ ಸ್ಥಳಗಳಲ್ಲಿ ದಂದೆಗೆ ಮುಂದಾಗಿದ್ದಾರೆ ತಾಲೂಕಿನ ನೂಜ್‌ ಅರಣ್ಯ ಬಾಗದಲ್ಲಿ ಶುಕ್ರವಾರ ರಾತ್ರಿ ೧೧ ಘಂಟೆಯ ಸುಮಾರಿಗೆ ದಂದೆಕೋರರು ದಂದೆ ನಡೆಸುತ್ತಿರುವ ಪಕ್ಕಾ ಮಾಹಿತಿ ಪಡೆದ ಪೋಲಿಸರು ದಾಳಿ ನಡೆಸಿದಾಗ ಮೂವರನ್ನು ಬಂದಿಸಿದ್ದು ಐದು ಜನರು ಓಡಿ ಹೋಗಿರುವ ಬಗ್ಗೆ ವರದಿ ಆಗಿದೆ .

ತಾಲೂಕಿನಾಧ್ಯಂತ ಇಸ್ಪೀಟ್‌ ದಂದೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು ಆದರೆ ಕೆಲವೊಂದು ದಂದೆಕೋರರು ಹಣದ ಆಸೆಗೆ ಹಳೆಯ ಚಾಳಿ ಬಿಡಲು ಸಾದ್ಯವಾಗದೆ ತಾಲೂಕಿನಲ್ಲಿ ಅಲ್ಲಲ್ಲಿ ಅಕ್ರಮವಾಗಿ ಅಂದರ್‌ ಬಾಹರ್‌ ಇಸ್ಪೀಟ್‌ ದಂದೆಯನ್ನು ನಡೆಸುತ್ತಿದ್ದಾರೆ ಈ ಅಕ್ರಮ ಕ್ರತ್ಯಕ್ಕೆ ತಾಲೂಕಿನ ಪೋಲಿಸ್‌ ಇಲಾಖೆಯ ಕೆಲವೋಂದು ಉನ್ನತ ಅಧಿಕಾರಿಗಳ ಸಹಕಾರಗಳು ದೋರೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ ಕೆಲವೋಂದು ಬಾರಿ ಈ ಊಹಾಪೋಹಗಳು ಸತ್ಯ ಎಂಬುವುದು ಕಂಡುಬರುತ್ತಿದೆ ಕಾರಣ ತಾಲೂಕಿನಲ್ಲಿ ಅಕ್ರಮವಾಗಿ ಇಸ್ಪೀಟ್‌ ದಂದೆಗಳು ನಡೆಯುತ್ತಿರುವ ಸಂದರ್ಬದಲ್ಲಿ ಇದರ ಮಾಹಿತಿ ಪಡೆದ ಸಾರ್ವಜನಿಕರು ತಾಲೂಕಿನ ಪೋಲಿಸ್‌ ಇಲಾಖಾ ಅಧಿಕಾರಿಗಳಿಗೆ ತಿಳಿಸಿದ ಸಂದರ್ಭದಲ್ಲಿ ಮಾಹಿತಿ ಕೊಟ್ಟವರ ಸಂಪೂರ್ಣ ವಿವರ ಅವರು ನೀಡಿದ ಎಲ್ಲಾ ವಿವರಗಳ ಸಹಿತ ಈ ಪೋಲಿಸ್‌ ಅಧಿಕಾರಿಗಳು ದಂದೆಕೊರರಿಗೆ ನೀಡುತ್ತಾರೆ ಎಂಬ ಮಾತುಗಳು ತಾಲೂಕಿನಾಧ್ಯಂತ ಕೇಳಿಬರುತ್ತಿದೆ ಅಲ್ಲದೆ ತಾಲೂಕಿನ ಈ ಅಕ್ರಮ ದಂದೆಕೋರನೊಬ್ಬನೊಂದಿಗೆ ಇಲಾಖೆಯ ಅಧಿಕಾರಿಗಳು ಆತ್ಮೀಯ ಸಂಬಂದವನ್ನು ಇಟ್ಟುಕೊಂಡಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ ಈ ಎಲ್ಲಾ ಭ್ರಷ್ಟ ಅಧಿಕಾರಿಗಳ ಮದ್ಯೆಯು ಕೂಡ ತಾಲೂಕಿನಲ್ಲಿ ನಿಷ್ಟಾವಂತ ಪೋಲಿಸ್‌ ಅಧಿಕಾರಿಗಳನ್ನು ನಾವು ಕೆಲವೊಂದು ಅಪರೂಪದ ಸಂದರ್ಭದಲ್ಲಿ ನೋಡಬಹುದಾಗಿದೆ ಇದಕ್ಕೆ ಉತ್ತಮ ಉದಾಹರಣೆ ನಿನ್ನೆ ಅಂದರೆ ಶುಕ್ರವಾರ ರಾತ್ರಿ ಸರಿ ಸುಮಾರು ೧೧ ೩೦ ರ ವೇಳೆ ಈ ಇಸ್ಫಿಟ್‌ ದಂದೆಯನ್ನು ತಾಲೂಕಿನ ನೂಜ್‌ ಅರಣ್ಯ ಬಾಗದಲ್ಲಿ ನಡೆಯುತ್ತಿದೆ ಎಂಬ ಪಕ್ಕಾ ಮಾಹಿತಿಯೊಂದಿಗೆ ಪೋಲಿಸ್‌ ಅಧಿಕಾರಿಗಳು ದಾಳಿ ನಡೆಸುತ್ತಾರೆ ಹಾಗು ಮೂವರು ದಂದೆಕೋರರಾದ ಗೋಪಾಲ ಲಕ್ಷ್ಮಣ ಖಾರ್ವಿ ಪ್ರಾಯ: 42ವರ್ಷ, ವೃತ್ತಿ: ಬೋಟಿ ಯಲ್ಲಿ ಕೆಲಸ, ವಾಸ:ಉಪ್ಪುಂದ, ಬೈಂದೂರು, ಉಡುಪಿ 2)ನಾಗರಾಜ ತಂದೆ ನಾರಾಯಣ ನಾಯ್ಕ ಪ್ರಾಯ 34ವರ್ಷ, ವೃತ್ತಿ-ರೈಸ ಮೀಲನಲ್ಲಿ ಕೆಲಸ ಸಾ||ಕೊಳೆಗೇರಿ,ಉತ್ತರಕೊಪ್ಪ,ಭಟ್ಕಳ 3)ಜಬ್ಬಾರ ತಂದೆ ಅಬ್ದುಲ್ ಖಾದರ ಸಾಬ ಪ್ರಾಯ 33ವರ್ಷ, ವೃತ್ತಿ-ಚಾಲಕ ಕೆಲಸ ಸಿದ್ದಾಪುರ ಎಂಬವರನ್ನು ಬಂದಿಸಿದ್ದಾರೆ ಇನ್ನುಳಿದ ದಂದೆಕೋರಾದ 4)ಜಯಂತ @ ಕೋಳಿ ಜಯಂತ ತಂದೆ ನಾರಾಯಣ ನಾಯ್ಕ ವಾಸ: ಮುರ್ಡೇಶ್ವರ, ಭಟ್ಕಳ 5) ಬಾಬು @ ಕೋಳಿ ಬಾಬು ತಂದೆ ಅಣ್ಣಪ್ಪ ನಾಯ್ಕ ವಾಸ: ಕೋಟೆ ಬಾಗಿಲು, ಶಿರಾಲಿ, ಭಟ್ಕಳ 6) ದತ್ತಾ ತಂದೆ ಮಾದೇವ ನಾಯ್ಕ ವಾಸ: ಕೋಟೆಬಾಗಿಲು, ಶಿರಾಲಿ, ಭಟ್ಕಳ 7)ಇರ್ಫಾನ್ ಸಾ:ಮುರ್ಡೇಶ್ವರ 8)ಕುಮಾರ ಗೌಡ ವಾಸ:ಉತ್ತರಕೊಪ್ಪ 9)ರಾಜೇಶ ವಾಸ: ಬೈಂದೂರು ಹಾಗೂ ಇನ್ನೂ 05-06 ಜನರು ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ.

ಮುಖ್ಯವಾಗಿ ಈ ದಂದೆಯನ್ನು ಯಾವಾಗಲೂ ನಡೆಸುತ್ತ ಅಕ್ರಮ ದಂದೆಯಿಂದಲೆ ಜೀವನ ನಡೆಸುತ್ತಿದ್ದ ದಂದೆಕೊರನೊರ್ವ ಪೋಲಿಸರಿಂದ ತಲೆ ಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದ್ದು ಪೋಲಿಸ್‌ ಇಲಾಖೆಯ ಇಂತಹ ನಿಷ್ಟಾವಂತ ಅಧಿಕಾರಿಗಳಿಂದಲೆ ಪೋಲಿಸ್‌ ಇಲಾಖೆ ಉತ್ತಮ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ

WhatsApp
Facebook
Telegram
error: Content is protected !!
Scroll to Top