ಸರಕಾರಿ ಮಾದರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆ ಪ್ರಾರಂಬ : ಸಿ ಆರ್ ಪಿ ಜಯಶ್ರೀ ಆಚಾರಿ ಹೇಳಿಕೆ
ಭಟ್ಕಳ : ತಾಲೂಕಿನ ಬೈಪಾಸ್ ಬಳಿಯಲ್ಲಿರುವ ಸರಕಾರಿ ಮಾದರಿ ಹೆಣ್ಣುಮಕ್ಕಳ ಶಾಲಾ ಪ್ರಾರಂಬೋತ್ಸವ ನಡೆದಿದ್ದು ಈ ಸಂದರ್ಬದಲ್ಲಿ ಹನುಮಂತ ಪೈ ಪೌಂಡೆಶನ್ ವತಿಯಿಂದ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಪೆನ್ನು ಹಾಗು ಪೆನ್ಸಿಲ್ಗಳನ್ನು ಶಾಲಾ ಮಖ್ಖಳಿಗೆ ಉಚಿತವಾಗಿ ವಿತರಿಸಲಾಯಿತು
ಈ ಸಂದರ್ಬದಲ್ಲಿ ಸಿ ಆರ್ ಪಿ ಬೆಳ್ಕೆ ಕ್ಲಸ್ಟರ್ ನ ಜಯಶ್ರೀ ಆಚಾರಿ ಅವರು ಮಾತನಾಡಿ ಇಂದು ಸರಕಾರಿ ಮಾದರಿ ಹೆಣ್ಣುಮಕ್ಕಳ ಶಾಲೆಯ ಪ್ರಾರಂಬೊತ್ಸವವನ್ನು ನಡೆಸಲಾಯಿತು ನಮೆ ಊರಿನ ಸಾರ್ವಜನಿಕರಿಂದ ಸಹಕಾರದ ಅಗತ್ಯ ಇದೆ ಪಾಲಕರು ತಮ್ಮ ಮಕ್ಕಳನ್ನು ಈ ಸುಸಜ್ಜಿತ ಶಾಲೆಗೆ ಸೇರಿಸ ಬೇಕು ಸರಕಾರಿ ಶಾಲೆಗೆ ಪ್ರೋತ್ಸಹವನ್ನು ನಿಡಬೇಕು ಎಂದು ಹೇಳಿದರು
ಶಾಲೆ ಮುಖ್ಯ ಉಪಾದ್ಯಾಯರಾದ ಪಿ ಎ ಗೊಮ್ಸ ಮಾತನಾಡಿ ನಮ್ಮ ಶಾಲೆಯ ಪ್ರಾರಂಬೋತ್ಸವ ಇಂದು ನಡೆದಿದ್ದು ನಮ್ಮ ಶಾಲೆಯಲ್ಲಿ ಮಖ್ಖಲಿಗೆ ಇಂಗ್ಲೀಷ್ ಕಲಿಕೆಯು ಕೂಡಾ ಪ್ರಾರಂಬವಾಗಿದೆ ನಮಗೆ ಸ್ಥಳಿಯ ಸಹಕಾರದ ಅಗತ್ಯ ಇದೆ ಹೆಚ್ಚು ಹೆಚ್ಚು ವಿಧ್ಯಾರ್ಥಿಗಳು ನಮ್ಮ ಈ ಶಾಲೆಗೆ ದಾಖಲಾಗುವಂತೆ ಸಹಕಾರ ಮಾಡಬೇಕು ಮುಖ್ಯವಾಗಿ ನಮ್ಮ ಈ ಮಾದರಿ ಹೆಣ್ಣುಮಕ್ಕಳ ಶಾಲೆ ಅಭಿವೃದ್ದಿಯನ್ನು ಹೊಂದಿ ತಾಲೂಕಿಗೆ ಹೆಸರು ವಾಸಿಯಾಗುವಂತಾಗ ಬೇಕು ಎಂದು ಹೇಳಿದರು
ಈ ಸಂದರ್ಬದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ದೇವಿದಾಸ ನಾಯ್ಕ ಸದಸ್ಯರು ಪಾಲಕರು ಹಾಗು ಮುಖಂಡರಾದ ಯಶೋದರ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು