ಸರಕಾರಿ ಜಾಗದಲ್ಲಿ ಖಾಸಗಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೇ ನಿರ್ಮಾಣ ಮಾಡಲು ಬಿಡಲಾರೆವು : ಮಾಸ್ತಪ್ಪ ನಾಯ್ಕ ಬಲ್ಸೆ
ಉತ್ತರ ಕನ್ನಡಿಗರ ದಶಕದ ಬೇಡಿಕೆಗೆ ಎಳ್ಳು ನೀರು ಬೀಳಲಿದೇಯೆ ?
ಭಟ್ಕಳ: ಬೈಲೂರಿನಲ್ಲಿ ನಿರ್ಮಾಣ ಮಾಡಲು ಹೊರಟಿರುವ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಖಾಸಗಿ ಜಾಗದಲ್ಲಿ ನಿರ್ಮಾಣ ಮಾಡಿ ಸರಕಾರಿ ಜಾಗದಲ್ಲಿ ನಿರ್ಮಾಣ ಮಾಡುವುದಕ್ಕೆ ನನ್ನ ಆಕ್ಷೇಪ ಇದೆ ಎಂದು ಬೈಲೂರು ಗ್ರಾಮ ಸಭೆಯಲ್ಲಿ ಓನ್ ಇಂಡಿಯಾ ಕಂಪನಿ ಮಾಲಕ ಮಾಸ್ತಪ್ಪ ನಾಯ್ಕ ಬಲ್ಸೆ ಅವರು ಹೇಳುವುದರ ಮೂಲಕ ಉತ್ತರ ಕನ್ನಡದಲ್ಲಿ ನಿರ್ಮಾಣವಾಗಲು ಸಜ್ಜಾಗಿರುವ ಆಸ್ಪತ್ರೆ ನಿರ್ಮಾಣದ ಕನಸಿಗೆ ಎಳ್ಳು ನೀರು ಬಿಡಲು ಸಜ್ಜಾಗಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾಸ್ತಪ್ಪ ನಾಯ್ಕ ಬಲಸೆ ವಿರುದ್ದ ಆಕ್ರೋಶಗಳು ಕೇಳಿಬರುತ್ತಿದೆ
ಅನೇಕ ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇಲ್ಲದೆ ಜಿಲ್ಲೆಯ ಜನಸಾಮಾನ್ಯರು ಕಂಗೆಟ್ಟುಹೊಗಿದ್ದರು ಜಿಲ್ಲೆಯಾಧ್ಯಂತ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಾಗಿ ಜನಸಾಮಾನ್ಯರು ಬ್ರಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು . ಈ ಹಿಂದೆ ಚುನಾವಣಾ ಸಂದರ್ಬದಲ್ಲಿ ಬಿಜೆಪಿ ಸರಕಾರ ಇದ್ದಾಗ ಅಂದಿನ ಬಿಜೆಪಿಯ ಸರಕಾರದ ಆರೋಗ್ಯ ಮಂತ್ರಿಗಳು ಭಟ್ಕಳಕ್ಕೆ ಬೇಟಿಕೊಟ್ಟು ಮಂಕಿಯಲ್ಲಿ ನಾವು ಸ್ಥಳ ಗೊತ್ತುಪಡಿಸಿದ್ದೇವೆ ಇನ್ನೆನು ಸ್ಪಲ್ಪ ದಿನಗಳಲ್ಲಿ ಆಸ್ಪತ್ರೇ ನಿರ್ಮಾಣ ಮಾಡುತ್ತೆವೆ ಎಂದು ಆಶ್ವಾಸನೆಯನ್ನು ನೀಡಿದ್ದರು ಆದರೆ ಆ ಆಶ್ವಾಸನೆ ಕೇವಲ ಆಶ್ವಾಸನೆಯಾಗಿ ಉಳಿಯಿತೆ ಹೊರತು ಯಾವುದೆ ಪ್ರಯೋಜನೆ ಇಲ್ಲದೆ ಹೋಯಿತು ಈ ಸಂದರ್ಬದಲ್ಲಿ ಅಂದು ಇಂದಿನ ಸಚಿವರಾದ ಮಂಕಾಳ ಎಸ್ ವೈದ್ಯ ಅವರು ಮುಂದಿನ ದಿನಗಳಲ್ಲಿ ಸರಕಾರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡದೆ ಇದ್ದಲ್ಲಿ ತಾನು ಸ್ವತಃ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಹೇಳಿಕೆಯನ್ನು ನಿಡಿದ್ದರು . ಅಂದು ಸಚಿವರು ನೀಡಿದ ಹೇಳಿಕೆ ಬದ್ದರಾಗಿ ಮುರ್ಡೆಶ್ವರ ಬೈಲೂರಿನಲ್ಲಿ ತಮ್ಮ ಪುತ್ರಿ ಬೀನಾ ವೈದ್ಯಾ ಅವರ ಹೆಸರಿನಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ .
ಉತ್ತರ ಕನ್ನಡದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕಂಟಕ

ಅದರಂತೆ ಆಸ್ಪತ್ರೆ ನಿರ್ಮಾಕ್ಕೆ ಬೇಕಾದ ಭೂಮಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕಾಗಿ ಬೈಲೂರು ಗ್ರಾಮ ಪಂಚಾಯತ್ ಅಲ್ಲಿ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿತ್ತು ಈ ಸಭೆಯಲ್ಲಿ ಸುಮಾರು 75% ಸಾರ್ವಜನಿಕರು ಆಸ್ಪತ್ರೆ ನಿರ್ಮಾಣಕ್ಕೆ ಸರಕಾರಿ ಜಾಗ ಅರಣ್ಯ ಭೂಮಿಯನ್ನು ನೀಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಆದರೆ ಸಭೇಯಲ್ಲಿ ಈ ಮಾಸ್ತಪ್ಪ ನಾಯ್ಕ ಬಲ್ಸೆ ಇವರು ಸರಕಾರಿ ಭೂಮಿಯಲ್ಲಿ ನಾನು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಬೀಡಲಾರೆವು. ನೀವು ನಿಮ್ಮ ಖಾಸಗಿ ಭೂಮಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿಕೊಳ್ಳಿ ಸರಕಾರಿ ಬೂಮಿಯಲ್ಲಿ ನಿರ್ಮಾಣ ಮಾಡಲು ಬೀಡಲಾರೆವು ಎಂಬ ಹೇಳಿಕೆಯನ್ನು ಮಾದ್ಯಮಕ್ಕೆ ನೀಡುತ್ತಾರೆ ಈ ಸಂದರ್ಬದಲ್ಲಿ ಮಾಧ್ಯಮವರು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಷೇಷಾಲಿಟಿ ಆಸ್ಪತ್ರೆಗಾಗಿ ಬೇಡಿಕೆಯನ್ನು ಇಡುತ್ತಲೆ ಬಂದಿದ್ದಾರೆ ಈಗ ಸಮಯ ಕೂಡಿಬಂದಿದೆ ನೀವು ಸಹಕಾರ ಮಾಡಿಕೊಡಬಹುದಲ್ಲ ಎಂದರೆ ಸಾದ್ಯವೇ ಇಲ್ಲ ಸರಕಾರಿ ಜಮೀನಿನಲ್ಲಿ ಖಾಸಗಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತಿಲ್ಲ ಎಂಬ ಹೇಳಿಕೆ ನೀಡುತ್ತಾರೆ ಇನ್ನು ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಹೇಗೆ ಎಂದು ಕೇಳಿದರೆ ಆಸ್ಪತ್ರೆ ನಿರ್ಮಾಣವಾಗದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೆವೆ ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ ಹಾಗೆ ಮಾಸ್ತಪ್ಪ ನಾಯ್ಕ ಅವರು ಸಚಿವರ ರಾಜಿನಾಮೆಯಿಂದ ಹಿಡಿದು ಮೂರು ವರ್ಷದ ನಂತರ ನಡೆಯುವ ಚುನಾವಣೆಗೆ ಮಂಕಾಳು ವೈದ್ಯರಿಗೆ ಟಿಕೇಟು ನೀಡಬೇಡಿ ಎಂದು ಈಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಆಪೀಲು ಮಾಡುತ್ತಾರೆ . ಹಾಗಾದರೆ ಇಂದು ಇವರ ಗ್ರಾಮ ಸಭೆಯಲ್ಲಿ ನಡೆಸಿದ ಹೋರಾಟ ರಾಜಕೀಯ ಅಜೆಂಡಾವೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ತಲೆ ಎತ್ತಿದೆ
ಈ ಮಾಸ್ತಪ್ಪ ನಾಯ್ಕ ಬಲ್ಸೆ ಯಾರು
ಈ ಮಾಸ್ತಪ್ಪ ನಾಯ್ಕ ಬಲ್ಸೆ ತನ್ನನ್ನು ಯಂಗ್ ಒನ್ ಇಂಡಿಯಾ ಕಂಪನಿಯ ಸಂಸ್ಥಾಪಕ ಇದರ ಮಾಲಕ ತಾನು ಎಂದು ಹೇಳಿಕೊಳ್ಳುತ್ತಿದ್ದು ತನ್ನ ಕಂಪನಿ ಸುಸ್ಥಿಯಲ್ಲಿದ್ದು ನಾನು ಕಂಪನಿಯ ಲಾಬಾಂಶಗಳಿಂದ ಬಡ ಸಾರ್ವಜನಿಕರಿಗೆ ದಾನವನ್ನು ಮಾಡುತ್ತೆನೆ ಸಾರ್ವಜನಿಕರ ಕಷ್ಟಕ್ಕೆ ಸಹಾಯ ಮಾಡುತ್ತೆನೆ ಎಂದು ಹೇಳಿಕೊಳ್ಳುತ್ತಾರೆ . ಆದರೆ ಇವರು ಸಾರ್ವಜನಿಕರ ಮುಂದೆ ಯಾವುದೆ ಒಂದು ಹೇಳಿಕೆ ಕೊಡುತ್ತಾರೆ ಎಂದರೆ ಅದು ರಾಜಕೀಯ ಹಿತಾಸಕ್ತಿಯನ್ನು ಹೊಂದಿರುವ ಹೇಳಿಕೆಯಾಗಿರುತ್ತದೆ ಹಾಗೆ ಸಚಿವ ಮಂಕಾಳು ವೈದ್ಯರ ವಿರುದ್ದ ಹೇಟ್ ಸ್ಪಿಚ್ಗಳನ್ನು ನೀಡುತ್ತಾರೆ ಎಂಬುವುದು ಗಣನೀಯ ಸಂಗತಿಯಾಗಿದೆ
ಅಣ್ಣ ಗೋಪಾಲ ನಾಯ್ಕ ಬಲ್ಸೆ ಸಚಿವ ಮಂಕಾಳು ವೈದ್ಯರ ಪರಮಾಪ್ತ : ತಮ್ಮ ಮಾಸ್ತಪ್ಪ ನಾಯ್ಕ ಬಲ್ಸೆ ಮಂಕಾಳು ವೈದ್ಯ ಕಡು ವಿರೋದಿ
ಮುಖ್ಯವಾಗಿ ಈ ಮಾಸ್ತಪ್ಪ ನಾಯ್ಕ ಅವರ ಅಣ್ಣ ಗೋಪಾಲ ನಾಯ್ಕ ಬಲ್ಸೆ ಅವರು ಸಚಿವ ಮಂಕಾಳು ವೈದ್ಯರ ಪರಮ ಆಪ್ತರೆಂದು ತಮ್ಮನ್ನು ಕರೆದುಕೊಳ್ಳುತ್ತಾರೆ ತಮ್ಮ ರೆಸಾರ್ಟ ಉದ್ಗಾಟನೆಗೆ ಸಚಿವ ಮಂಕಾಳು ವೈದ್ಯರನ್ನು ಕರೆಯಿಸಿ ತನ್ನ ಇಂದಿನ ಎಲ್ಲಾ ಅಭಿವೃದ್ದಿ ಏಳಿಗೆಗೆ ಸಚಿವ ಮಂಕಾಳು ವೈದ್ಯರೆ ಕಾರಣ ಎಂದು ಅವರನ್ನು ಹೊಗಳಿ ಹೊಗಳಿ ಹೊನ್ನಕಳಶಕ್ಕೆ ಏರಿಸಿದರು ಎನ್ನಬಹುದು ಇನ್ನೊಂದು ಕಡೆ ಇವರದ್ದೆ ಬಡಹುಟ್ಟಿದ ತನ್ನ ಮಾಸ್ತಪ್ಪ ನಾಯ್ಕ ಮಂಕಾಳು ವೈದ್ಯರು ಮತ್ತು ಅವರ ಆಪ್ತರನ್ನು ದಂಡುಪಾಳ್ಯದ ಗ್ಯಾಂಗ ಎಂದು ಬಿಂಬಿಸುತ್ತಾರೆ ಇಲ್ಲಿ ಮುಖ್ಯವಾಗಿ ಅಣ್ಣ ತಮ್ಮ ಇಬ್ಬರು ಒಂದೆ ಕಾರನ್ನು ತಮ್ಮ ಕೆಲಸ ಕಾರ್ಯಕ್ಕೆ ಉಪಯೋಗಿಸುತ್ತಾರೆ ಅಣ್ಣ ತಮ್ಮನ ಮದ್ಯ ಮನಸ್ತಾಪ ಏನಾದರು ಇದೆಯೆ ಎಂದು ನೊಡಿದರೆ ಅದೂ ಕೂಡ ಇಲ್ಲಾ ಹಾಗಾದರೆ ಇಲ್ಲಿ ಯಾರು ಜಾಣರು ಯಾರು ಮೂರ್ಖರು ಎಂಬ ಅನುಮಾನಗಳು ಮೂಡುವುದು ಮಾತ್ರ ಸುಳ್ಳಲ್ಲ
ಇನ್ನು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಮುಂದಾಗಿರುವ ಸಚಿವರನ್ನು ಮಾಧ್ಯಮದವರು ಸಂಪರ್ಕಿಸಿ ಮಾತನಾಡಿಸಿದಾಗ ಅವರು ಪ್ರತಿಕ್ರಿಯಿಸಿ ನಾನು ನನ್ನ ಕ್ಷೇತ್ರದ ಕಟ್ಟಕಡೆಯ ಜನಸಾಮಾನ್ಯನನ್ನು ಗಮನದಲ್ಲಿಟ್ಟಿಕೊಂಡು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದೇನೆ ನನ್ನ ಜೋತೆ ಆ ಭಗವಂತ ಇದ್ದಾನೆ ನಾನು ಉತ್ತರ ಕನ್ನಡದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿಯೆ ಮಾಡುತ್ತೆನೆ ಯಾವುದೆ ಅಡೆತಡೆಗಳು ಬಂದರೂ ನಾನು ತಲೆ ಕೆಡಿಸಿಕೊಳ್ಳಲಾರೆ ನನ್ನ ಜೋತೆ ನನ್ನ ಕ್ಷೇತ್ರದ ಜನಸಾಮಾನ್ಯರು ಇದ್ದಾರೆ ಎಂದು ಹೇಳಿದರು.
ಒಟ್ಟಾರೆ ಉತ್ತರ ಕನ್ನಡದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಆಗುತ್ತದೆ ಎಂಬ ಆಸೆಗಣ್ಣಿನಿಂದ ಉತ್ತರ ಕನ್ನಡಿಗ ನೋಡುತ್ತಿದ್ದರೆ ಆಸ್ಪತ್ರೆ ನಿರ್ಮಾಣದ ಕಾರ್ಯಕ್ಕೆ ರಾಜಕೀಯ ಬಣ್ಣ ಬಳಿಯುವ ಕೆಲಸಗಳು ನಡೆಯಲು ಪ್ರಾರಂಬವಾಗಿದೆ ಇಂದು ಬೈಲೂರು ಗ್ರಾಮ ಸಭೇಯಲ್ಲಿ ಮಾಸ್ತಪ್ಪ ನಾಯ್ಕ ಬಲ್ಸೆ ಇವರ ನಡೆಯ ವಿರುದ್ದ ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ವ್ಯಕ್ತವಾಗಿದೆ