ಕೊಟ್ಟ ಮಾತಿನಂತೆ ನಡೆದ ಸಚಿವ ಮಂಕಾಳು ವೈದ್ಯ
ಮುರುಡೇಶ್ವರದಲ್ಲಿ ನಿರ್ಮಾಣವಾಗಲಿದೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಭಟ್ಕಳ : ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಮಾಡುವುದಾಗಿ ಸಚಿವ ಮಂಕಾಳ ವೈದ್ಯರು ಮಾತನ್ನು ನೀಡಿದ್ದರು. ತಾವು ನೀಡಿದ ಮಾತಿನಂತೆ ಇಂದು ಸಚಿವರು ಮುರುಡೇಶ್ವರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ಹೌದು ವೀಕ್ಷಕರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೆ ಅನೇಕ ದಶಕಗಳೇ ಕಳೆದು ಹೋಗಿದೆ ಉತ್ತರ ಕನ್ನಡಿಗರು ಎಂತಹ ತುರ್ತು ಪರಿಸ್ಥಿತಿ ನಿರ್ಮಾಣವಾದರೂ ಕೂಡ ದೂರದ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಸ್ಪತ್ರೆಯನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದ್ದಿತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪಘಾತಗಳಿಂದ ಹಲವಾರು ಅಮಾಯಕ ಜೀವಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದರು ದೂರದ ದಕ್ಷಿಣ ಕನ್ನಡ ಮತ್ತು ಮಂಗಳೂರು ಜಿಲ್ಲೆಗೆ ಅಪಘಾತಕ್ಕೆ ಒಳಗಾದವರನ್ನು ಸಾಗಿಸುವಾಗ ದಾರಿ ಮಧ್ಯದಲ್ಲಿಯೇ ಅಪಘಾತಕ್ಕೆ ಈಡಾದವರು ಮರಣವನ್ನು ಹೊಂದುತ್ತಾರೆ ಈ ಹಿನ್ನೆಲೆಯಿಂದ ಹಲವಾರು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜಿಲ್ಲೆಯ ಜನಸಾಮಾನ್ಯರು ಬೇಡಿಕೆಯನ್ನು ಇಡುತ್ತಲೇ ಬಂದಿದ್ದರು ಆದರೆ ಇದರಿಂದ ಯಾವುದೇ ಪ್ರಯೋಜನವೇ ಆಗಿರಲಿಲ್ಲ ಇದನ್ನು ಗಮನಿಸಿದ ಸಚಿವ ಮಂಕಾಳು ವೈದ್ಯರು ಚುನಾವಣಾ ಪೂರ್ವದಲ್ಲಿ ತಾನು ತನ್ನ ಸ್ವಂತ ಕರ್ಚಿನಿಂದ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಜನಸಾಮಾನ್ಯರಿಗೆ ಮಾತನ್ನು ಕೊಟ್ಟಿದ್ದರು ಸಚಿವರು ತಾವು ಹಿಂದೆ ಕೊಟ್ಟಂತಹ ಮಾತಿಗೆ ಇಂದು ಕೂಡ ಬದ್ಧರಾಗಿದ್ದಾರೆ ಅವರು ತಾವು ಕೊಟ್ಟ ಮಾತಿನಂತೆ ಮುರುಡೇಶ್ವರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ
ಸಚಿವರು ಈಗಾಗಲೇ ಕೇಂದ್ರ ಸರಕಾರದ ಪರಿವೇಶ ಎನ್ನುವ ಯೋಜನೆ ಅಡಿ ಆಸ್ಪತ್ರೆಗಾಗಿ ಜಾಗವನ್ನು ಕೇಳಿದ್ದಾರೆ. ಇದಕ್ಕಾಗಿ ಪ್ರಸ್ತಾವನೆ ಈಗಾಗಲೇ ಡೆಲ್ಲಿಯನ್ನು ತಲುಪಿದ್ದು ಆಸ್ಪತ್ರೆಯ ನಿರ್ಮಾಣಕ್ಕಾಗಿ ಸಚಿವ ಮಂಕಾಳು ವೈದ್ಯ ಪ್ರಥಮ ಹೆಜ್ಜೆಯನ್ನು ಇಟ್ಟಿದ್ದಾರೆ
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ಕ್ಷೇತ್ರ ಅಭಿವೃದ್ಧಿಯಾಗುವುದಲ್ಲದೆ ಇಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತದೆ ಹಾಗೆಯೇ ಉತ್ತರ ಕನ್ನಡದಲ್ಲಿ ಅಪಘಾತಗಳಿಂದ ಹಿಂದೆ ಸಂಭವಿಸುತ್ತಿದ್ದ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ
ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಸಚಿವ ಮಂಕಾಳು ವೈದ್ಯರು ಕೊಟ್ಟ ಮಾತಿನಂತೆ ನಡೆದುಕೊಂಡು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಮಾಡಲು ಮುಂದಾಗುವುದರ ಮೂಲಕ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದ್ದಾರೇ
ಸಚಿವರ ಈ ನಡೆಯು ರಾಜ್ಯದಾದ್ಯಂತ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಭಟ್ಕಳ ಹೊನ್ನಾವರ ಕ್ಷೇತ್ರದ ಸಾರ್ವಜನಿಕರು ಸಚಿವ ಮಂಕಾಳು ವೈದ್ಯರಿಗೆ ಮತನೀಡಿದ್ದು ಸಾರ್ಥಕವಾಯಿತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ