ಫೇಕ್‌ ನ್ಯೂಸ್ ಹರಡುವುದರಲ್ಲಿ ಉತ್ತರಕನ್ನಡ ರಾಜ್ಯದಲ್ಲಿ ದ್ವಿತೀಯ ಸ್ಥಾನ!

ಬೆಂಗಳೂರು ನಗರ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು:  ಬ್ರಿಟಿಷರ ಕಾಲದಿಂದಲೂ ಇದ್ದ ಸುಳ್ಳುಸುದ್ದಿ ಶೂರರು ಎಂಬ ಗೌರವವನ್ನು ಮತ್ತೆ ಉಳಿಸಿಕೊಂಡ ಜಿಲ್ಲೆ!

ಕಾರವಾರ: ತಮಗಾಗದವರ ವಿರುದ್ಧ ಹೆಸರು. ವಿಳಾಸವಿಲ್ಲದೇ ಅಥವಾ ಇನ್ನೊಬ್ಬರ ಹೆಸರಿನಲ್ಲಿ ತಳ್ಳರ್ಜಿ ಬರೆಯುವುದರಲ್ಲಿ ಬ್ರಿಟಿಷರ ಕಾಲದಿಂದಲೂ ಮುಂಚೂಣಿಯಲ್ಲಿದ್ದ ಉತ್ತರಕನ್ನಡ ಜಿಲ್ಲೆ ಈಗಲೂ ತನ್ನ ಗತವೈಭವವನ್ನು ಉಳಿಸಿಕೊಂಡಿದ್ದು ಫೇಕ್‌ ನ್ಯೂಸ್ ಹರಡುವುದರಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಈ ಬಗ್ಗೆ ಸ್ವತ: ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರ ಮಾಹಿತಿಯನ್ನು ನೀಡಿದ್ದಾರೆ ಬುದ್ದಿವಂತರ ಜಿಲ್ಲೆ ಉತ್ತರ ಕನ್ನಡದಲ್ಲಿ ಹಿಂದೆ ತಳ್ಳರ್ಜಿಯನ್ನು ಪೋಸ್ಟ್ ಮೂಲಕ ಕಳಿಸುತ್ತಿದ್ದರೆ ಈಗ ಆಧುನಿಕ ತಂತ್ರಜ್ಞಾನ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ನಕಲಿ ಸುದ್ದಿ ಹಾಗೂ ತಪ್ಪಾದ ಸುದ್ದಿಗಳನ್ನು ಹರಡುವುದರಲ್ಲಿ ಜಿಲ್ಲೆ ಎರಡನೇ ಸ್ಥಾನವನ್ನು ಪಡೆದಿದ್ದು ಈ ಫೇಕ್‌ ನ್ಯೂಸ್ ಹರಡುವುದರಲ್ಲಿ ಮಹಾನಗರ ಬೆಂಗಳೂರಿಗೆ ಸಮರ್ಥವಾದ ಸ್ಪರ್ದೆಯನ್ನು ಒಡ್ಡಿದೆ. ರಾಜ್ಯದ ಇತರ ಮಹಾನಗರಗಳಾದ, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲ್ಬುರ್ಗಿ, ಮಂಗಳೂರು, ಬೆಳಗಾವಿ, ದಾವಣಗೆರೆ, ಶಿವಮೊಗ್ಗಗಳನ್ನು ಉತ್ತರಕನ್ನಡ  ಹಿಂದಿಕ್ಕಿದ್ದು ಗಾತ್ರ ಹಾಗೂ ಜನಸಂಖ್ಯೆಯಲ್ಲಿ ಉತ್ತರಕನ್ನಡಕ್ಕಿಂತ ಎಷ್ಟೋ ಪಟ್ಟು ದೊಡ್ಡದಾಗಿರುವ ಜಿಲ್ಲೆಗಳೂ ಸುಳ್ಳುಸುದ್ದಿ ಹರಡುವ ವಿಷಯದಲ್ಲಿ ಉತ್ತರ ಕನ್ನಡದೊಂದಿಗೆ ಸ್ಪರ್ಧಿಸಲಾಗದೇ ಹಿಂದೆ  ಬಿದ್ದಿವೆಯೆಂದರೆ ‘ಸುಳ್ಳುಸುದ್ದಿ’ ಹರಡುವ ಕಲೆಯನ್ನು ಉತ್ತರಕನ್ನಡದ ಫೇಕ್ ನ್ಯೂಸ್ ಶೂರರು ಹೇಗೆ ಕರಗತ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ! ಈ ಫೇಕ್ ನ್ಯೂಸ್ ಹರಡುವುದರಲ್ಲಿ ಬೆಂಗಳೂರು ನಗರ ಮೊದಲನೆಯ ಸ್ಥಾನದಲ್ಲಿದೆಯಾದರೂ ಬೆಂಗಳೂರು ನಗರದ ಒಟ್ಟೂ ಜನಸಂಖ್ಯೆ 1.15 ಕೋಟಿ ಎಂದು ಅಂದಾಜಿಸಲಾಗಿದೆ ಉತ್ತರಕನ್ನಡದ ಜನಸಂಖ್ಯೆ ಕೇವಲ 18 ಲಕ್ಷದಷ್ಟಿದೆ. ಆದರೂ ಉತ್ತರಕನ್ನಡ ಬೆಂಗಳೂರಿನ

ಜೊತೆಯಲ್ಲಿ ಸರಿಸಮಾನ ಸ್ಪರ್ಧೆಯನ್ನು ನಡೆಸಿದ್ದು ತಳ್ಳರ್ಜಿ ಹಾಗೂ ಸುಳ್ಳುಸುದ್ದಿ ಶೂರರಿಗೆ ಹೆಮ್ಮೆಯ ವಿಚಾರ ಎಂಬಂತಾಗಿದೆ.

ತಳ್ಳರ್ಜಿ ಹಾಗೂ ಫೇಕ್‌ ನ್ಯೂಸ್ ಶೂರರಿಗೆ ಹೆಮ್ಮೆಯ ವಿಚಾರ

ಈ ಫೇಕ್ ನ್ಯೂಸ್ ಹರಡುವುದರಲ್ಲಿ ಬೆಂಗಳೂರು ನಗರ ಮೊದಲನೆಯ ಸ್ಥಾನದಲ್ಲಿದೆಯಾದರೂ ಬೆಂಗಳೂರು ನಗರದ ಒಟ್ಟೂ ಜನಸಂಖ್ಯೆ 1.15 ಕೋಟಿ ಎಂದು ಅಂದಾಜಿಸಲಾಗಿದೆ ಉತ್ತರಕನ್ನಡದ ಜನಸಂಖ್ಯೆ ಕೇವಲ 18 ಲಕ್ಷದಷ್ಟಿದೆ. ಆದರೂ ಉತ್ತರಕನ್ನಡ ಬೆಂಗಳೂರಿನ ಜೊತೆಯಲ್ಲಿ ಸರಿಸಮಾನ ಸ್ಪರ್ಧೆಯನ್ನು ನಡೆಸಿದ್ದು ತಳ್ಳರ್ಜಿ ಹಾಗೂ ಸುಳ್ಳುಸುದ್ದಿ ಶೂರರಿಗೆ ಹೆಮ್ಮೆಯ ವಿಚಾರ ಎಂಬಂತಾಗಿದೆ

WhatsApp
Facebook
Telegram
error: Content is protected !!
Scroll to Top