ಫೆ.22 ರಂದು ಶಾಲಾ ವಾರ್ಷಿಕ ಸ್ನೇಹ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ :ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ರವಿ ನಾಯ್ಕ

ಭಟ್ಕಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಟ್ಟಳ್ಳಿ ಇದಕ್ಕೆ 70 ವರ್ಷ ತುಂಬಿದ ಹಿನ್ನೆಲೆಯಲ್ಲಿಎಸ್.ಡಿ.ಎಂ. ಸಿ ಮತ್ತು ಹಳೆ ವಿದ್ಯಾರ್ಥಿಗಳು ಸೇರಿ ಫೆ.22 ರಂದು ಶಾಲಾ ವಾರ್ಷಿಕ ಸ್ನೇಹ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ ಎಂದು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ರವಿ ನಾಯ್ಕ ಹೇಳಿದರು.


ಅವರು ಗುರುವಾರ ಶಾಲಾ ಆವರಣದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ಹಿರಿಯ ಪ್ರಾಥಮಿಕ ಶಾಲೆ ಮುಟ್ಟಳ್ಳಿಗೆ 70 ವರ್ಷ ತುಂಬುತ್ತದೆ.
1955 ರಲ್ಲಿ ಪ್ರಾರಂಭವಾದ ಈ ಶಾಲೆಯು ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಬಾಳಿಗೆ ದಾರಿ ದೀಪವಾಗಿದೆ.
ಇಲ್ಲಿಯ ಹಿರಿಯರಿಂದ ನಾವು ಮಾಹಿತಿ ಸಂಗ್ರಹಿಸಿದಾಗ ಶ್ರೀ ರಾಘು ಭಟ್ ಸರ್ ರವರಿಂದ ಒಂದು ಕೊಟ್ಟಿಗೆಯಲ್ಲಿ ಶಾಲೆ ಪ್ರಾರಂಭವಾಗಿತ್ತು ಜೊತೆಗೆ ಶ್ರೀ ದತ್ತಾತ್ರೇಯ ಅವರಿಂದ ಮೂಡ ಭಟ್ಕಳದಲ್ಲಿ ರಾತ್ರಿ ಶಾಲೆ ನಡೆಯುತ್ತಿತ್ತು.
ಇಲ್ಲಿಯ ಬಗ್ಗಿ ಮನೆಯ ಹಿರಿಯರಾದ ಶ್ರೀ ವೆಂಕ್ಟಪ್ಪ ನಾಯ್ಕ ಅವರು ಆಗ ಇಲ್ಲಿಯ ಪಟೇಲರಾಗಿದ್ದರು. ಶಿಕ್ಷಣದ ಬಗ್ಗೆ ಅವರಿಗೆ ತುಂಬಾ ಆಸಕ್ತಿ ಇತ್ತು,
ನಂತರದಲ್ಲಿ ಕೇವಲ ಎರಡು ಕೊಠಡಿ ಗಳನ್ನು ಹೊಂದಿದ್ದ ಶಾಲೆಯು ಒಂದರಿಂದ ನಾಲ್ಕನೇ ತರಗತಿವರೆಗೆ ಪ್ರಾರಂಭವಾಯಿತು. ಕೆಲ ವರ್ಷಗಳ ನಂತರ ಶಾಲೆಗೆ ಒಂದರಿಂದ ಏಳನೇ ತರಗತಿಗಳನ್ನು ನಡೆಸಲು ಅನುಮತಿ ದೊರೆಯಿತು.
ಈ ಶಾಲೆಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಡಾಕ್ಟರ್, ಇಂಜಿನಿಯರ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಕೊಂಕಣ್ ರೈಲ್ವೆಯಲ್ಲಿ,,ಶಿಕ್ಷಕರಾಗಿ, ಪೊಲೀಸ್ ಹಾಗೂ ಫಾರೆಸ್ಟ್ ಡಿಪಾರ್ಟ್ಮೆಂಟ್ ಅಲ್ಲಿ ಮತ್ತು ಸ್ವಉದ್ಯೋಗ ಮಾಡಿಕೊಂಡು ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ 20 ರಿಂದ 30 ವರ್ಷಗಳವರೆಗೆ ನಮ್ಮ ಶಾಲೆಯಲ್ಲಿ ಯಾವುದೇ ವಾರ್ಷಿಕೋತ್ಸವ ಅಥವಾ ಹಳೆ ವಿದ್ಯಾರ್ಥಿಗಳ ಗ್ಯಾದರಿಂಗ್ ಆಗದ ಕಾರಣ ಇದೇ ತಿಂಗಳು 22ರಂದು ವಾರ್ಷಿಕ ಸ್ನೇಹ ಸಾಂಸ್ಕೃತಿಕ ಸಮ್ಮಿಲನವನ್ನು ಆಯೋಜಿಸಲಾಗಿದೆ.
ನಮ್ಮ ಶಾಲೆಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ನಮಗೆ ಹೆಮ್ಮೆ ಅನಿಸುತ್ತದೆ.ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಲೆಯ ಸಾಧನೆ ( ಬೆಸ್ಟ್ ಪ್ರಾಕ್ಟೀಸಸ್ ಇನ್ ಸ್ಕೂಲ್ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ) ಗಳಿಸಿರುತ್ತದೆ. ಪ್ರಸ್ತುತ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಹಾಗೂ ವಿವಿಧ ಅನೇಕ ಪ್ರಶಸ್ತಿ ಪಾರಿತೋಷಕಗಳನ್ನು ಗಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ಸಂಘಟಿಸಲು ನಿಮ್ಮೆಲ್ಲರ ಸೇವೆ ಸಹಕಾರ ಮತ್ತು ಪ್ರೀತಿ ಅತ್ಯವಶ್ಯಕವಾಗಿದೆ. ನಿಮ್ಮೆಲ್ಲರನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ನಾವೆಲ್ಲರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಸ್ ಅನಂತ ನಾಯ್ಕ, ಶಾಲೆ
ಮುಖ್ಯಾಧ್ಯಾಪಕರಾದ ಗಂಗಾ ಮೊಗೇರ,ಶಿಕ್ಷಕರಾದ
ಗಜಾನನ ನಾಯ್ಕ, ವಿಜಯ ಕುಮಾರ, ಲತಾ, ದೀಪಾ
ಶ್ರೀಧರ ನಾಯ್ಕ,ಹನುಮಂತ ನಾಯ್ಕ, ಮಂಜುನಾಥ ನಾಯ್ಕ, ಗಜಾನನ. ಭಟ್ , ವೆಂಕಟರಮಣ ನಾಯ್ಕ,ಮಂಜುನಾಥ ಎಸ್ ನಾಯ್ಕ, ಮಂಜುನಾಥ ಡಿ. ನಾಯ್ಕ ಇದ್ದರು.

WhatsApp
Facebook
Telegram
error: Content is protected !!
Scroll to Top