ಭಟ್ಕಳಿಗರೇ ನಿಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಸಚಿವ ಮಾಂಕಾಳು ವೈದ್ಯ
ಭಟ್ಕಳ: ತಾಲೂಕಿನ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ 66 ಐಸ್ ಫ್ಯಾಕ್ಟರಿ ಸಮೀಪದ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು ಇಂಡಿಯನ್ ನವಾಯತ್ ಫೋರಂ (INF) ವತಿಯಿಂದ 5 ದಿನಗಳ ನಡೆಯುವ INF ಟ್ರೇಡ್ ಎಕ್ಸ್‌ಪೋ 2025 ಚಾಲನೆ ನೀಡಲಾಯಿತು
ಸಚಿವ ಮಾಂಕಾಳು ವೈದ್ಯ ಅವರು ಟ್ರೇಡ್ ಎಕ್ಫೋ 2025 ವ್ಯಾಪಾರಿ ಮಳಿಗೆಗಳನ್ನು ಆಯೋಜಕರ ಜೊತೆಯಲ್ಲಿ ವೀಕ್ಷಣೆ ಮಾಡಿ ಮಾತನಾಡಿ ಭಟ್ಕಳದಲ್ಲಿ ಆಯೋಜನೆಯಾದ ಈ ಕಾರ್ಯಕ್ರಮ ತಾಲೂಕಿನ ಎಲ್ಲಾ ಜನಾಂಗದವರಿಗೂ ಉಪಯೋಗವಾಗಿದೆ.ಇಂತಹ ಕಾರ್ಯಕ್ರಮಗಳು ನೋಡಬೇಕೆಂದರೆ ಬೆಂಗಳೂರು ಹಾಗೂ ಡೆಲ್ಲಿಗೆ ತೆರಳಬೇಕಿತ್ತು. ಆದರೆ ಇದನ್ನು ಭಟ್ಕಳದಲ್ಲಿ ಆಯೋಜನೆ ಮಾಡಿರುವ ಇಂಡಿಯನ್ ನವಾಯತ್ ಫೋರಂ ಸಂಸ್ಥೆಗೆ ನಾವು ಅಭಿನಂದಿಸುತ್ತೇನೆ. ಇದರ ಉಪಯೋಗವನ್ನು ಭಟ್ಕಳದ ಜನತೆ ಪಡೆದುಕೊಳ್ಳಿ ಎಂದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿ ಇಂಡಿಯನ್ ನೋವಾಯಿತ್ ಫಾರ್ಮ್ ಒಂದು ಉತ್ತಮವಾದ ಸಂಘಟನೆಯಾಗಿದೆ ಇಂಥ ಸಂಘಟನೆ ನಮ್ಮ ಹೈದರಾಬಾದ್ ಕರ್ನಾಟಕದಲ್ಲಿ ಇರುವುದಿಲ್ಲ ಈ ರೀತಿ ಸಂಘಟನೆ ಇಲ್ಲದಿರುವುದರಿಂದ ನಮ್ಮ ಭಾಗದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ ಈ ಭಾಗದಲ್ಲಿ ಯಾವುದೇ ಕಾರ್ಯಕ್ರಮವಾದರೂ ಒಳ್ಳೆಯ ರೀತಿಯ ಸ್ಪಂದನೆ ನೀಡುತ್ತಾರೆ ಇದರಿಂದ ಇಲ್ಲಿ ಅಭಿವೃದ್ಧಿಯಾಗಿದೆ. ನಮ್ಮ ಭಾಗದ ಅಲ್ಪಸಂಖ್ಯಾತರು ವ್ಯಾಪಾರದಲ್ಲಿ ಅಥವಾ ಶಿಕ್ಷಣದಲ್ಲಿ ವ್ಯವಸ್ಥಿತವಾಗಿ ಸಂಘಟನೆ ಇರುವುದಿಲ್ಲ ಈ ಭಾಗದಲ್ಲಿ ಒಗ್ಗಟ್ಟು ಇದೆ, ಸಂಘಟನೆ ಇದೆ ಆದರಿಂದ ಇಲ್ಲಿ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿ ಇರುತ್ತಾರೆ.
INFA TRADE EXPO-2025″ ಇದೊಂದು ಉತ್ತಮ ಕಾರ್ಯಕ್ರಮ ಇದರಿಂದ ಜನರಿಗೆ ವ್ಯಾಪಾರ ಉದ್ಯಮಗಳು ಪ್ರಾರಂಭ ಮಾಡಲು ತರಭೇತಿ ಸಿಗುತ್ತದೆ.
ಎಲ್ಲವೂ ಸರ್ಕಾರ ಮಾಡಬೇಕೆಂದರೆ ಸಾಧ್ಯವಿಲ್ಲ ಈ ಸಂಘಟನೆ ಸ್ವಯಂ ಇತರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ. ವ್ಯವಹಾರ, ಶಿಕ್ಷಣ ನಮ್ಮ ಅಲ್ಪಸಂಖ್ಯಾತರಲ್ಲಿ ಬಂದರೆ ಇದು ದೇಶಕ್ಕೆ ಒಳ್ಳೆಯದು ಮತ್ತು ಜಗತ್ತಿಗೆ ಒಳ್ಳೆಯದು ಈ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಪೌರಾಡಳಿತ ಸಚಿವ ರಹೀಮ್ ಖಾನ್ ಚಾಲನೆ ನೀಡಿದರು
ಒಟ್ಟು ಐದು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉದ್ಯಮಕ್ಕೆ ಸಂಭಂಧಿಸಿದಂತೆ, ಸೆಮಿನಾರ್ ಗಳು, ಕಾರ್ಯಗಾರಗಳು, ಉದ್ಯಮದ ಕುರಿತಂತೆ, ಪ್ಯಾಕೇಜಿಂಗ್, ಸಂಸ್ಕರಣೆ, ತೆರಿಗೆ ಕುರಿತಾತ ಎಲ್ಲಾ ಹಂತದ ಮಾಹಿತಿ ಕಾರ್ಯಾಗಾರಗಳು ನಡೆಯಲಿದೆ.
ಈ ಸಂದರ್ಭದಲ್ಲಿ ಯೂನಸ್ ಕಾಜಿಯಾ, ಐ.ಎನ್.ಎಫ್ ಫೋರಂ ಕಾರ್ಯದರ್ಶಿ ಮಾರ್ಕ ಝುಕಾಕೋ, ತಜಿಂ ಅಧ್ಯಕ್ಷ ಇನಾಯತುಲ್ ಶಾಬಂದ್ರಿ.
ಮತ್ತಿತರರು ಉಪಸ್ಥಿತರಿದ್ದರು