ಶಿಕ್ಷಣ ಒಂದೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಶೈಕ್ಷಣಿಕವಾಗಿ ನಾವು ಇನ್ನೂ ಸಾಧಿಸಬೇಕಾದದ್ದು ಬಹಳಷ್ಟು ಇದೆ. ಈ ದಿಕ್ಕಿನಲ್ಲಿ ನಾವು ಪ್ರಯತ್ನಿಸಬೇಕು ಎಂದು ಯುವ ಮಾನಸ ಗಾಣಿಗ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಸಂಸ್ಥಾಪಕರಾದ ಸುಬ್ಬಯ್ಯ ಗಾಣಿಗ ಶಿವಮೊಗ್ಗ ಹೇಳಿದರು. ಅವರು
ಗಾಣಿಗ ಸಮಾಜ ಸೇವಾ ಟ್ರಸ್ಟ್ ಭಟ್ಕಳ (ರಿ)
ಯುವ ಮಾನಸ ಗಾಣಿಗ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ
ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಭಟ್ಕಳ.
ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ (ನಿ) ಭಟ್ಕಳ ಮತ್ತು
ಶ್ರೀ ವಾಸುಕಿ ಸೌಹಾರ್ದ ಸಹಕಾರಿ ಸಂಘ (ನಿ) ಭಟ್ಕಳ
ಇವರ ಸಂಯುಕ್ತ ಆಶ್ರಯದಲ್ಲಿ ಭಟ್ಕಳ ತಾಲೂಕು ಮುಗಳಿ ಕೋಣೆ ಶ್ರೀ ಗೋಪಾಲಕೃಷ್ಣ ಸಭಾ ಭವನದಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿ ಪಡೆದ ಗಾಣಿಗ ಸಮಾಜದ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ , ಸಾಧಕರರಿಗೆ, ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಭವಿಷ್ಯ ಉಜ್ವಲಗೊಳ್ಳಲು ನಿಮ್ಮ ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ. ಮುಂಬರುವ ದಿನಗಳಲ್ಲಿ ನಮ್ಮ ಟ್ರಸ್ಟ್ ಮೂಲಕ ಶೈಕ್ಷಣಿಕವಾಗಿ ಸಹಕಾರ ನೀಡಲು ನಾನು ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರು ಹಾಗೂ ಯುವ ಮಾನಸ ಗಾಣಿಗ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಮಂಜುನಾಥ ಶಿಕಾರಿಪುರರವರು ಇವರು ವೃತ್ತಿ ಮಾರ್ಗದರ್ಶನದ ಬಗ್ಗೆ ಹಾಗೂ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸುವ ತಂತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು. ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ದರಾಗಿ ಸತತ ಪ್ರಯತ್ನದ ಮೂಲಕ ಸಾಧನೆ ಮಾಡಬೇಕೆಂದರು ಮತ್ತು ಸಮಯದ ಸದುಪಯೋಗದ ಮಹತ್ವವನ್ನು ತಿಳಿಸಿದರು.ಮುಂದಿನ ದಿನಗಳಲ್ಲಿ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ನಮ್ಮ ಟ್ರಸ್ಟ್ ಸಹಕಾರ ನೀಡುವದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗಾಣಿಗ ಸಮಾಜ ಸೇವಾ ಟ್ರಸ್ಟ್ ಭಟ್ಕಳ (ರಿ) ಇದರ ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಅವರು ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಒಳ್ಳೆಯ ಶಿಕ್ಷಣ ಪಡೆದು ದೇಶಕ್ಕೆ ಕೊಡುಗೆಯನ್ನು ನೀಡಿರಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಭಟ್ಕಳ.ಇದರ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವ ಮಾನಸ ಗಾಣಿಗ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಕಾರ್ಯದರ್ಶಿ ಸವಿತಾ ಗಾಣಿಗ ಖಜಾಂಚಿ ಅನಂತ ಗಾಣಿಗ ,ಸುಬ್ರಹ್ಮಣ್ಯ ಗಾಣಿಗ, ಟ್ರಸ್ಟಿಗಳಾದ ಸಂತೋಷ ಗಾಣಿಗ, ರಾಜು ಗಾಣಿಗ, ಶಿವಾನಂದ ಗಾಣಿಗ, ಮಂಜುನಾಥ ಗಾಣಿಗ, ರತ್ನಾಕರ ಗಾಣಿಗ,. ಗಾಣಿಗ ಸಮಾಜ ಸೇವಾ ಟ್ರಸ್ಟ್ ಉಪಾಧ್ಯಕ್ಷ ರಾದ ಗಾಜಾನನ ಶೆಟ್ಟಿ, ರಾಧಾ ಶೆಟ್ಟಿ, ಎಂ .ಆರ್ ಮುರ್ಡೇಶ್ವರ , ಮೋಹನ ಶೆಟ್ಟಿ, ಸುಧಾಕರ ಶೆಟ್ಟಿ, ಇದ್ದರು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ನೌಕರರಿಗೆ, ಸಾಧಕರಿಗೆ ಸನ್ಮಾನಿಸಲಾಯಿತು.
ಪ್ರಕಾಶ್ ಶಿರಾಲಿ ಸ್ವಾಗತಿಸಿ,ಅತಿಥಿಗಳ ಪರಿಚಯಿಸಿದರುದರು . ರಾಜೇಶ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಮನೋಜ ಶೆಟ್ಟಿ, ಉಷಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.