ಇಷ್ಟು ಕೆಳಮಟ್ಟದ ರಾಜಕೀಯ ಒಳ್ಳೆಯದಲ್ಲ ಮಾಜಿ ಶಾಸಕರಿಗೆ ಸಚಿವರ ಕಿವಿಮಾತು
ಭಟ್ಕಳ: ೨೦೧೭ರಲ್ಲಿ ತಾನು ತಂದ ಯೋಜನೆಯನ್ನು ಸ್ಥಳ ಬದಲಾವಣೆ ಮಾಡಿ, ಜಾಲಿಯಲ್ಲಿ ತಂದಿರುವದನ್ನೆ ದೊಡ್ಡ ಸಾಧನೆ ಎಂದು, ಈಗ ಅದನ್ನು ತನ್ನದೆ ಕಾಮಗಾರಿ ಎಂದು ಕಟ್ ಔಟ್ ಹಾಕಿಸಿ ಜನರನ್ನು ಮರಳು ಮಾಡಲು ಯತ್ನಿಸುತ್ತಿರುವದು ಹಾಸ್ಯಸ್ಪದ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ಸೋಮವಾರ ತಾಲೂಕಿನ ಜಾಲಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಐಟಿಐ ಕಾಲೇಜು ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದರು. ಮಾಡದ ಕೆಲಸವನ್ನು ತಾನೆ ಮಾಡಿದ್ದೇನೆ ಎಂದು ಸುಳ್ಳು ಹೇಳಿ ಜನರನ್ನು ನಂಬಿಸುವಲ್ಲಿ ಮಾಜಿ ಶಾಸಕ ನಿಸ್ಸಿಮ್‌ರು. ೨೦೦೭ರಲ್ಲಿ ಭಟ್ಕಳಕ್ಕೆ ಐಟಿಐ ಕಾಲೇಜು ಬಂದಿದ್ದು ಇಲ್ಲಿಯವರೆಗೆ ಅದು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತಿತ್ತು. ತಾನು ಶಾಸಕನಿದ್ದಾಗ ಎಲ್ಲಾ ಶಿಕ್ಷಣ ಸಂಸ್ಥೆಗಳು ಒಂದೆ ಕಡೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೆಬಳೆಯಲ್ಲಿ ೫ಎಕರೆಯ ವಿಶಾಲ ಸ್ಥಳದಲ್ಲಿ ಐಟಿಐ ಕಾಲೇಜು ನಿರ್ಮಾಣಕ್ಕೆ ಭೂಮಿ ಮಂಜೂರಿ ಮಾಡಿಸಿದ್ದೆ. ಪಹಣಿ ಪತ್ರವೂ ಇನ್ನೂ ಐಟಿಐ ಕಾಲೇಜಿನ ಹೆಸರಿನಲ್ಲಿದೆ. ೨೦೧೭ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಒಂದೆ ವೇದಿಕೆಯಲ್ಲಿ ೭೦ಕ್ಕೂ ಅಧಿಕ ಕಾಮಾಗಾರಿಗಳನ್ನು ಉದ್ಘಾಟನೆಯನ್ನು ಮಾಡಿಸಿದ್ದೆ. ಅದರಲ್ಲಿ ಐಟಿಐ ಕಾಲೇಜು ಸೇರಿತ್ತು. ಬಳಿಕ ಶಾಸಕನಾದ ಸುನೀಲ ನಾಯ್ಕ ಜಾಲಿಯಲ್ಲಿ ವರ್ಗಾಯಿಸಿದ್ದೆ ಒಂದು ಸಾಧನೆ ಎಂದು ರಾಜಕೀಯ ಮಾಡುತ್ತಿರುವದು ಹಾಸ್ಯಸ್ಪದ. ಇವರ ಶಾಸಕತ್ವದ ಅವಧಿಯಲ್ಲಿ ಉದ್ಘಾಟನೆಗೊಂಡ ತಾಲೂಕು ಆಡಳಿತ ಸೌಧ, ಬಸ್ ನಿಲ್ದಾಣ, ಬಸ್ ಡೀಪೋ ಸೇರಿದಂತೆ ಅನೇಕ ಕಾಮಗಾರಿಗಳು ನನ್ನ ಅವಧಿಯಲ್ಲಿ ನಿರ್ಮಾಣವಾಗಿತ್ತು. ಅದನ್ನು ಅವರು ಉದ್ಘಾಟನೆ ಮಾಡುವ ಸಂದರ್ಬದಲ್ಲಿ ತಾನು ಎಂದು ರಾಜಕೀಯ ಮಾಡಿಲ್ಲ. ನಾವು ಮಾಡಿದ ಕೆಲಸ ಮಾತನಾಡಬೇಕು ಹೊರತು ನಾವಲ್ಲ ಎನ್ನುವದನ್ನು ಇವರು ಅರಿತುಕೊಳ್ಳಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಅವರಿಗೆ ಟಾಂಗ್ ಸಚಿವರು ನೀಡಿದರು.
ತಾನು ಅಂದಿನಿAದಲೂ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದೇನೆ. ಕಿತ್ತೂರು ರಾಣಿ ಚೆನ್ನಮ್ಮ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಸೇರಿ ಅನೇಕ ಹಾಸ್ಟೆಲ್‌ಗಳು ತನ್ನ ಅವಧಿಯಲ್ಲಿ ನಿರ್ಮಾಣವಾಗಿದೆ. ಕೈಗಾರಿಕೆ ಕ್ಷೇತ್ರದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ತುಂಬಾ ಬೇಡಿಕೆ ಇದ್ದು ಸರ್ಕಾರದ ಈ ಸದವಕಾಶವನ್ನು ಸದುಪಯೋಗ ಪಡೆದುಕೊಳ್ಳಿ . ವಿದ್ಯಾರ್ಜನೆಯೊಂದಿಗೆ ಮಾನವೀಯತೆಯ ಗುಣಗಳನ್ನು ಅಳವಡಿಸಿಕೊಳ್ಳಿ ಇಲ್ಲವಾದರೆ ಪಡೆದ ಶಿಕ್ಷಣಕ್ಕೆ ಬೆಲೆ ಇರುವದಿಲ್ಲ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯುವನಿಧಿ ಯೋಜನೆ ಫಲಕ ಅನಾವರಣ
ಕಾಲೇಜು ಕಲಿತ ವಿದ್ಯಾರ್ಥಿಗಳಿಗಾಗಿ ಸರ್ಕಾರ ನೀಡುವÀ ಯುವನಿಧಿ ಯೋಜನೆಯ ಕರಪತ್ರವನ್ನು ಸಚಿವ ಮಂಕಾಳ ವೈದ್ಯ ಐಟಿಐ ಕಾಲೇಜಿನ ಪ್ರಾಂಗಣದಲ್ಲಿ ಸೋಮವಾರ ಬಿಡುಗಡೆ ಮಾಡಿದರು. ಪದವಿ ವಿದ್ಯಾರ್ಥಿಗಳಿಗೆ ೩ ಸಾವಿರ, ಐಟಿಐ ವಿದ್ಯಾರ್ಥಿಗಳಿಗೆ ೧.೫ಸಾವಿರ ಸರ್ಕಾರ ನೀಡುತ್ತಿದೆ ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. ಬಳಿಕ ಕಾರವಾರದ ಕಾಜುಭಾಗದ ರಂಗಮAದಿರಲ್ಲಿ ಜ ೯ರಂದು ನಡೆಯುವ ಉದ್ಯೋಗ ಮೇಳದ ಕರಪತ್ರವನ್ನು ಉದ್ಘಾಟಿಸಿದರು. ಎಸ್‌ಎಸ್ ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರ ಸಂದರ್ಶನವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ ಎಂದು ವಿನಂತಿಸಿದರು.
ಈ ಸಂದರ್ಬದಲ್ಲಿ ಬೆಳಗಾವಿಯ ಜಂಟಿ ನಿರ್ದೇಶಕ ಡಾ. ಬಸವ ಪ್ರಭು ಹೀರೆಮಠ, ಪಂಚಾಯತ ರಾಜ್ ಇಲಾಖೆಯ ಇಂಜೀನೀಯರ್ ರಾಮು ಪಿ. ಗುನಗಿ, ಸಹಾಯಕ ಇಂಜೀನೀಯರ ಮಲ್ಲಪ್ಪ ಮಡಿವಾಳ, ಕಾಲೇಜಿನ ಪ್ರಾಂಶುಪಾಲ ಗಂಗಾಧರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ವಿ ನಾಯಕ, ಗ್ಯಾರಂಟಿ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷ ರಾಜು ನಾಯ್ಕ, ಪ.ಪಂ ಸದಸ್ಯರಾದ ದಯಾನಂದ ನಾಯ್ಕ, ರಮೇಶ ಗೊಂಡ, ರಮೇಶ ನಾಯ್ಕ, ನಾಗರಾಜ ನಾಯ್ಕ, ಈಶ್ವರ ಮೊಗೇರ ಇತರರು ಇದ್ದರು.