ಭಟ್ಕಳ ಮುರಿನಕಟ್ಟೆ ದೇವಿಯ ಎರಡು ಗೊಂಭೆ ನಾಪತ್ತೆ

ಭಟ್ಕಳದಲ್ಲಿ ಶಾಂತಿ ಕದಡುವ ಪ್ರಯತ್ನ ಯಾರು ಮಾಡುತ್ತಿದ್ದಾರೆ

ಇದು ರಾಜಕೀಯ ಪ್ರೆರೇಪಿತ ಕ್ರತ್ಯವೇ ಎಂಬ ಅನುಮಾನ

ಹಿಂದೂ ಮುಖಂಡ ಗೋವಿಂದ ನಾಯ್ಕ ಅವರಿಂದ ತನಿಖೆಗೆ ಆಗ್ರಹ

ಭಟ್ಕಳ : ತಾಲೂಕಿನ  ಮುರಿನ ಕಟ್ಟೆಯಲ್ಲಿ ಮಂಗಳವಾರ ರಾತ್ರಿ ಮಾರಿ(Marikambe) ಅಮ್ಮನ ಹೊರೆ ತೆಗೆಯುವ ವೇಳೆ ಅಲ್ಲಿದ್ದ ದೇವಿಯ ಮರದ ಗೊಂಬೆ ನಾಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು ಈ ಕ್ರತ್ಯ ಭಟ್ಕಳದ ಶಾಂತಿ ಕದಡಲು  ಕೆಲವು ದುಷ್ಕರ್ಮಿಗಳು ಮಾಡಿದ ಕ್ರತ್ಯ ಎನ್ನುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ  ಹರಿದಾಡುತಿದೆ

ಕೆಲ ದಿನಗಳ ಹಿಂದಷ್ಟೇ ಆಸರಕೇರಿ ಭಾಗದ ಹಿಂದೂ ಬಾಂಧವರು ಭಟ್ಕಳ ಅರ್ಬನ್ ಬ್ಯಾಂಕ್‌ ಸಮೀಪದ ವನದುರ್ಗಿ ದೇವಸ್ಥಾನದ ಬಳಿ ಇದ್ದ ಅಮ್ಮನ ಹೊರೆ ಹಾಗೂ ಶಂಸುದ್ದಿನ್ ಸರ್ಕಲ್ ಬಳಿ ಇದ್ದ ದೇವಿಯ ೨ ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿ ಬಳಿಕ ದೇವಿಯ ಮರದ ಗೊಂಬೆಗೆ ಪೂಜೆ ಸಲ್ಲಿಸಿ ಬಂದಿದ್ದರು. ಮಂಗಳವಾರ ರಾತ್ರಿ ಕಾರಗದ್ದೆ ಹುರುಳಿಸಾಲ, ಕಡವಿನಕಟ್ಟೆ ಹಾಗೂ ರಂಗಿನಕಟ್ಟೆಯ ಗ್ರಾಮಸ್ಥರು ಮುರಿನಕಟ್ಟೆಯಲ್ಲಿದ್ದ ಅಮ್ಮನವರ ಹೊರೆಯನ್ನು ವೆಂಕಟಾಪುರ ಗಡಿ ಭಾಗಕ್ಕೆ ಸಾಗಿಸಲೆಂದು ಬಂದ ವೇಳೆ ಮುರಿನಕಟ್ಟೆಯಲ್ಲಿದ್ದ ೨ ದೇವಿಯ ಮರದ ಗೊಂಬೆಗೆ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ದೇವಿಯ ಗೊಂಬೆ ನಾಪತ್ತೆ ಸುದ್ದಿ ಎಲ್ಲಾ ಕಡೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾವಣೆಗೊಂಡು ಕೆಲ ಕಾಲ ಆತಂಕ ಸೃಷ್ಟಿಯಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದರು. ರಾತ್ರಿಯಾದ ಕಾರಣ ಸ್ಥಳದಲ್ಲಿ ಗಿಡಗಂಟಿಗಳು ಬೆಳೆದುಕೊಂಡಿರುವುದರಿಂದ ಪರಿಶೀಲನೆ ಮಾಡಲು ಕಷ್ಟವಾಗಿದ್ದು, ಬೆಳಿಗೆ ಸ್ಥಳ ಪರಿಶೀಲನೆ ಮಾಡುತ್ತೇವೆ ಎಂದು ಅಲ್ಲಿ ನೆರೆದಿದ್ದ ಹಿಂದೂ ಮುಖಂಡರಿಗೆ ಹೇಳಿದರು. ಈ ಸಂದರ್ಭ ಸ್ಥಳೀಯರಿಗೂ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಬಗ್ಗೆ ಪ್ರಕರಣ ದಾಖಲು ಮಾಡಿದರೆ, ತನಿಖೆ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದರು.

ಸ್ಥಳದಲ್ಲಿದ್ದ ಹಿಂದೂ ಮುಖಂಡ ಗೋವಿಂದ ನಾಯ್ಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ದೂರವಾಣಿ ಕರೆ ಮಾಡಿ, ಈ ಬಗ್ಗೆ ಸೂಕ್ತವಾಗಿ ತನಿಖೆ ಮಾಡಿ ಒಂದು ವಾರದೊಳಗಾಗಿ ಪ್ರಕರಣ ಇತ್ಯರ್ಥ ಮಾಡುತ್ತೇವೆ ಎಂದು ಹೇಳಿದರು. ಬಳಿಕ ಗೋವಿಂದ ನಾಯ್ಕ ಜಮಾವಣೆಗೊಂಡ ಹಿಂದೂ ಬಾಂಧವರಿಗೆ ಈ ಬಗ್ಗೆ ಮಾಹಿತಿ ನೀಡಿ ಮನವೊಲಿಸಿದರು. ಬಳಿಕ ಸ್ಥಳೀಯರು ಅಲ್ಲಿಂದ ಅಮ್ಮನರ ಹೊರೆಯನ್ನು ವಾಹನದಲ್ಲಿ ತುಂಬಿಕೊಂಡು ವೆಂಕಟಾಪುರ ಗಡಿಭಾಗಕ್ಕೆ ತಲುಪಿಸಿದರು.

ವೀಕ್ಷಕರೇ ನಿನ್ನೆ ನಡೆದ ಈ ಘಟನೆ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ ಇದೊಂದು ಪ್ರೀ ಪ್ಲಾನ್ ಕ್ರತ್ಯವೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ ರಾಜಕೀಯಕ್ಕಾಗಿ ಕಿಡಿಗೇಡಿಗಳು ನಡೆಸಿದ ಹುನ್ನಾರವೇ ಎಂಬ ಅನುಮಾನ ಮೂಡಿರುದು ಸುಳ್ಳಲ್ಲ

ಶಾಂತವಾಗಿ ಮಲಗಿರುವ ಭಟ್ಕಳದಲ್ಲಿ ಶಾಂತಿಯನ್ನು ಕದಡಿ ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ಕೆಲವು ಹಿತಾಶಕ್ತಿಗಳು ಪ್ರಯತ್ನ ಪಡಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ

ಈ ಬಗ್ಗೆ ಪೊಲೀಸ್ ಇಲಾಖೆ ಕುಲಕುಷವಾಗಿ ಆದಷ್ಟು ಬೇಗ ತನಿಖೆ ನಡೆಸಿ ತಪ್ಪಿತಸ್ತರನ್ನು  ಆದಷ್ಟು ಬೇಗ ಪತ್ತೆಹಚ್ಚಿ  ಭಟ್ಕಳದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎನ್ನುದು ಸಾರ್ವಜನಿಕರ ಆಗ್ರಹವಾಗಿದೆ

WhatsApp
Facebook
Telegram
error: Content is protected !!
Scroll to Top