ಪ್ಲೈಓವರ್ ನಿರ್ಮಾಣದ ಪಟ್ಟು ಸಡಿಲಿಸದ ಸಾರ್ವಜನಿಕರು
ಭಟ್ಕಳ: ತಾಲೂಕ ಮುರ್ಡೆಶ್ವರದ ಉತ್ತರಕೊಪ್ಪ ಕ್ರಾಸ್ ಅಲ್ಲಿ ಪ್ಲೈಓವರ್ ನಿರ್ಮಾಣ ಮಾಡದೆ ರಾಷ್ಟ್ರೀಯ ರಸ್ತೆ ನಿರ್ಮಾಣ ಮಾಡದಂತೆ ಸಾರ್ವಜನಿಕರು ಪ್ರತಿಭಟನೆಗೆ ಇಳಿದಿದ್ದು ಈ ಸಂಬಂದ ತಾಲೂಕ ಸಹಾಯಕ ಆಯುಕ್ತೆ ಡಾ ನಯನಾ ಅವರ ನೇತ್ರತ್ವದಲ್ಲಿ ಸಭೆಯನ್ನು ನಡೆಸಲಾಗಿದ್ದು ಸಭೆಯಲ್ಲಿ ಪ್ಲೈಓವರ್ ನಿರ್ಮಾಣಮಾಡದೆ ರಸ್ತೆ ಕಾಮಗಾರಿ ನಡೆಸಲು ಬೀಡಲಾರೆವು ಎಂದು ಪಟ್ಟು ಹಿಡಿದಿರುವ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಐ ಆರ್ ಬಿ ಕಂಪನಿ ನಡೆಸಿದ ಅವೈಜ್ಞಾನಿಕ ಕಾಮಗಾರಿಯ ಕಾರಣ ಜಿಲ್ಲೆಯ ಜನತೆ ದಿನ ನಿತ್ಯ ನರಕಯಾತನೆ ಅನುಭವಿಸುತಿದ್ದಾರೆ ಜಿಲ್ಲೆಯಲ್ಲಿ ಜನತೆ ಪ್ಲೈಓವರ್ ಹಾಗು ರಸ್ತೆಯ ಇಕ್ಕೆಲಗಳಲ್ಲಿ ವ್ಯವಸ್ಥಿತ ಚರಂಡಿಗಳ ನಿರ್ಮಾಣ ಮಾಡುವಂತೆ ಬೆಡಿಕೆ ಇಡುತ್ತಲೆ ಬರುತ್ತಿದ್ದಾರೆ ಆದರೆ ಈ ಐ ಆರ್ ಬಿ ಕಂಪನಿ ಸಾರ್ವಜನಿಕರ ಬೇಡಿಕೆಗೆ ಕೆರೆ ಎನ್ನದೆ ಬೆಜವಬ್ದಾರಿತನವನ್ನು ಪ್ರದರ್ಶನ ಮಾಡುತ್ತಲೆ ಬಂದಿದ್ದು ಉತ್ತರಕೊಪ್ಪ ಕ್ರಾಸ್ ಬಳಿ ಪ್ಲೈಓವರ್ ನಿರ್ಮಾಣ ಮಾಡದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಐ ಆರ್ಬಿ ಮುಂದಾದಾಗ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಿ ಕಾಮಗಾರಿಯನ್ನು ನಿಲ್ಲಿಸಿದ್ದರು ಈ ಸಂಭಂದ ತಾಲೂಕ ಸಹಾಯಕ ಆಯುಕ್ತರಾದ ಡಾ ನಯನಾ ಅವರು ಸಾರ್ವಜನಿಕರನ್ನೊಳಗೊಂಡಂತೆ ಸಭೆಯನ್ನು ಕರೆಯಲಾಗಿತ್ತು ಈ ಸಂದರ್ಬದಲ್ಲಿ ಸ್ಥಳಿಯ ಮುಖಂಡರು ಮತ್ತು ಸಾರ್ವಜನಿಕರು ಪ್ಲೈಓವರ್ ನಿರ್ಮಾಣ ಮಾಡದೆ ರಸ್ತೆ ನಿರ್ಮಾಣಕ್ಕೆ ಬಿಡಲಾರೆವು ಎಂದು ಪಟ್ಟುಹಿಡಿದರು ಸಹಾಯಕ ಆಯುಕ್ತೆ ನಯನಾ ಅವರು ಎಷ್ಟೆ ಸಮಜಾಯಿಸಿ ನಿಡಲು ಪ್ರಯತ್ನಿಸಿದರು ಸಾರ್ವಜನಿಕರು ಪ್ಲೈಓವರ್ ನಿರ್ಮಾಣದ ಪಟ್ಟನ್ನು ಸಡಿಲಿಸಲಿಲ್ಲ
ಈ ಸಂದರ್ಬದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಲ್ಬರ್ಟ ಡಿಕೊಸ್ಟಾ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ಈಶ್ವರ ಬಿಳಿಯಾ ನಾಯ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ನಾಗಪ್ಪ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಭಾಸ್ಕರ್ ನಾಗಪ್ಪ ನಾಯ್ಕ ವಸಂತ ನಾರಾಯಣ ನಾಯ್ಕ ಗಜಾನನ ಮಾಸ್ತಪ್ಪ ನಾಯ್ಕ, ಕೊಪ್ಪ ಗ್ರಾಮ ಪಂಚಾಯತ್ ಸದಸ್ಯ ರಾಜು ಮಂಜಪ್ಪ ನಾಯ್ಕ, ಸುರೇಶ ದುರ್ಗಪ್ಪ ನಾಯ್ಕ, ಚಂದ್ರಕಾಂತ ಕುಪ್ಪಯ್ಯ ನಾಯ್ಕ, ದಿಪಕ್ ದುರ್ಗಪ್ಪ ನಾಯ್ಕ, ಲಕ್ಷ್ಮಣ್ ನಾಯ್ಕ ,ಪರಮೇಶ್ವರ ನಾಯ್ಕ, ನಾಗಪ್ಪ ನಾಯ್ಕ ತೆನ್ಮಮಕ್ಕಿ, ವಿಷ್ಣು ನಾಯ್ಕ ದೇವಿಕಾನ್ ಸುರೇಶ್ ನಾಯ್ಕ ತೆರ್ನಮಕ್ಕಿ,ಪ್ರದೀಪ ಕುಪ್ಪಯ್ಯ ನಾಯ್ಕ, ಸುಬ್ರಾಯ್ ನಾಯ್ಕ ತೆರ್ನಮಕ್ಕಿ ದುರ್ಗಪ್ಪ ನಾಯ್ಕ ಹಾಗು ಇನ್ನಿತರ ಪ್ರಮುಖ ಗಣ್ಯರು ಉಪಸ್ತಿತರಿದ್ದರು.