ಸಂವಿಧಾನ ನಮಗೆ ದಾರಿದೀಪವಾಗಿದೆ ಸಹಾಯಕ ಆಯುಕ್ತೆ ಡಾ.ನಯನಾ
ಭಟ್ಕಳ ತಾಲೂಕ ಸಂಶುದ್ದೀನ್ ಸರ್ಕಲ್ ಅಲ್ಲಿ ಸದ್ಬಾವನಾ ಮಂಚ ವತಿಯಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಂವಿಂಧಾ ಪೀಠಿಕೆ ಓದು ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕ ಸಹಾಯಕ ಆಯುಕ್ತರಾದ ಡಾ: ನಯನಾ ಅವರು ಮಾತನಾಡಿ ಸಂವಿಂಧಾನ ಎನ್ನುವುದು ನಮಗೆ ದಾರಿ ದೀಪ ಇದ್ದಂತೆ ಈ ಸಂವಿಂದಾನದ ಸಂಶಗಳನ್ನು ನಾವು ನಮ್ಮ ಜೀವನದ ಪ್ರತಿಯೊಂದು ಘಟ್ಟದಲ್ಲೂ ರೂಡಿಸಿಕೊಳ್ಳೊಣ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಸದ್ಬಾವನಾಮಂಚನ ಅಧ್ಯಕ್ಷರಾದ ಸತೀಶ ಕುಮಾರ್ ಅವರು ಮಾತನಾಡಿ ನಮ್ಮ ಸಂವಿಂಧಾನದ ರಚನೆಯ ಹಿಂದೆ ಸಾಕಷ್ಟು ಅನುಭವಿಗಳ ಪರಿಶ್ರಮವಿರುತ್ತದೆ ಹಲವಾರು ವೈವಿಧ್ಯತೆಯನ್ನು ಒಳಗೊಂಡ ನಮ್ಮ ರಾಷ್ಟದಲ್ಲಿ ಎಲ್ಲರನ್ನು ಕಾನೂನಿನ ಅಡಿಯಲ್ಲಿ ಸಮಾನವಾಗಿ ತರಲು ಸಂವಿಧಾನ ರಚನೆಕಾರರ ಶ್ರಮವಿದೆ ಪ್ರತಿಯೊಬ್ಬ ದೇಶವಾಸಿಗಳು ಸಂವಿಂಧಾನವನ್ನು ಪ್ರೀತಿ ವಿಶ್ವಾಸದಿಂದ ಗೌರವಿಸಬೇಕು ಎಂದು ಹೇಳಿದರು.
ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಮಾತನಾಡಿ, ಇಂದು ಕೇವಲ ಸಂವಿಧಾನದ ಪ್ರಸ್ತಾವನೆ ಓದುವುದು ಮಾತ್ರವಲ್ಲ, ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು, ನಮ್ಮ ಸಂವಿಧಾನವು ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಮತ್ತು ಬಾಂಧವ್ಯ ಎಂಬ ನಾಲ್ಕು ಮೂಲಭೂತ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಇದರಲ್ಲಿ ಎಲ್ಲಾ ನಾಗರಿಕರಿಗಾಗಿ ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ನ್ಯಾಯವನ್ನು ಸೃಷ್ಟಿಸುವ ಸಂಕಲ್ಪವಿದೆ ಎಂದರು.
ಈ ಸಂದರ್ಭದಲ್ಲಿ ಅಂಜುಮನ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ. ಆರ್.ಎಸ್.ನಾಯಕ ಅಂಜುಮನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗಣೇಶ ಯಾಜಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್YB ಎಸ್.ಎಂ., ಮುಜಾಹಿದ್ ಮುಸ್ತಫಾ, ಮೌಲಾನ ಜಾಫರ್ ನದ್ವಿ ಹಾಗೂ ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.