ಕಾರವಾರ ಕಾಳಿನದಿ ಸೇತುವೆಯಲ್ಲಿ ಬಿರುಕು

ವೀಡಿಯೋ ವೈರಲ್ : ಸಾರ್ವಜನಿಕರಲ್ಲಿ ಆತಂಕ

KARWAR ಕಾರವಾರ: ಕಳೆದ ಒಂದು ವಾರದ ಹಿಂದಷ್ಟೆ ಕಾಳಿ ಸೇತುವೆ ಕುಸಿತವಾದ ಆತಂಕದಲ್ಲಿರುವಾಗಲೇ ಇದೀಗ ರಾಷ್ಟ್ರೀಯ ಹೆದ್ದಾರಿ 66 (NH66)ರಲ್ಲಿರುವ ಕಾಳಿ ನದಿಗೆ ಅಡ್ಡಲಾಗಿ ಐಆರ್‌ಬಿ ಕಂಪನಿ ಹೊಸದಾಗಿ ಕಟ್ಟಲಾಗಿರುವ ಸೇತುವೆಯಲ್ಲಿಯೇ ಬಿರುಕು ಕಾಣಿಸಿಕೊಂಡಿದೆ ಎನ್ನುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದು, ಬಿರುಕು ಕಾಣಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದೆ..

ಕಾಳಿ ನದಿಯ ಹೊಸ ಸೇತುವೆಯ ಕೆಳ ಭಾಗದಲ್ಲಿ ಸೇತುವೆ ಬಿರುಕು ಬಿಟ್ಟ (Kali New Bridge Crack)ವಿಡಿಯೋ ವೈರಲ್ ಆಗಿರುವುದರಿಂದ ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳಿಯರು ಮತ್ತಷ್ಟು ಭಯಭೀತರಾಗಿದ್ದಾರೆ. ಹಳೆ ಸೇತುವೆ ಕುಸಿದು ಬಿದ್ದರುವ ಸಂಧರ್ಭದಲ್ಲಿ ಹೊಸ ಸೇತುವೆಗೂ ಹೊಡೆತ ಬಿದ್ದರುವುದರಿಂದ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರಬಹುದು ಎಂದು ಉಹಿಸಲಾಗತ್ತಿದೆ.

ಕಳೆದ ಸೇತುಗೆ ಏನು ಕುಸಿತವಾಗಿತ್ತೋ ಆ ಸಂದರ್ಭದಲ್ಲಿ ಹೊಸ ಸೇತುವೆ ಧಾರಣ ಸಾಮರ್ಥ್ಯದ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿ ಸೇತುವೆ ಕಾಮಗಾರಿ ಮಾಡಿದ ಐಆರ್‌ಬಿ ಕಂಪನಿಗೆ ನೋಟಿಸ್‌ ನೀಡಿತ್ತು. ಅಲ್ಲದೆ ಆ ಸಂದರ್ಭದಲ್ಲಿ ಭಾರೀ ವಾಹನಗಳ ಸಂಚಾರವನ್ನ ಕೂಡ ಬಂದ್‌ ಇಡಲಾಗಿತ್ತು.ಬಳಿಕ ಸಂಬಂಧಪಟ್ಟವರು ಭಾರೀ ವಾಹನಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಸೇತುಗೆ ಸಮರ್ಥವಾಗಿದೆ ಎಂದು ವರದಿ ನೀಡಿತ್ತು.

ಈ ಸೇತುವೆಯ ಮೇಲೆ ನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತದೆ.ಮಂಗಳೂರು ಗೋವಾ ಸಂಪರ್ಕ ಸೇತುವೆ ಇದಾಗಿರೋದ್ರಿಂದ ಭಾರೀ ಸರಕರು ತುಂಬಿದ ವಾಹನಗಳು ಈ ಸೇತುವೇ ಸಂಚಾರ ಮಾಡುತ್ತದೆ. ಆದರೆ ಇದೀಗ ಹೊಸ ಸೇತುವೆಯ ಕೇಳಬಾಗದಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಸೇತುವೆ ಇನ್ನಷ್ಟು ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ
ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಪಾಲಕರಲ್ಲಿ ಮತ್ತಷ್ಟು ಆತಂಕ ಉಂಟಾಗುವಂತೆ ಮಾಡಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರವಾರಕ್ಕೆ ಬರುತ್ತಾರೆ. ಪಕ್ಕದ ಸದಾಶಿವಗಡ ಸೇರಿ ಇತರ ಪ್ರದೇಶಗಲ್ಲಿರುವ ಶಿಕ್ಷಣ ಸಂಸ್ಥೆಗೆ ತೆರಳುತ್ತಾರೆ. ಹಳೆ ಸೇತುವೆ ಕುಸಿದು ಹೋಗಿರುವ ಕಾರಣ ಒಂದೇ ಸೇತುವೆಯ ಮೇಲೆ ಎಲ್ಲಾ ವಾಹನಗಳು ಸಂಚಾರ ಮಾಡುತ್ತಿದೆ.ಈ ಬಗ್ಗೆ ತಕ್ಷಣ ಜಿಲ್ಲಾಡಳಿತ ಪರಿಶೀಲನೆ ನಡೆಸಿ ಮುಂದಾಗಬಹುದಾದ ಅಪಾಯ ತಪ್ಪಿಸಬೇಕಿದೆ..

WhatsApp
Facebook
Telegram
error: Content is protected !!
Scroll to Top