ಭಟ್ಕಳದ ಬಸ್‌ಗೆ ಸಾಗರದಲ್ಲಿ  ಬೆಂಕಿ

ಉತ್ತರಕನ್ನಡ: ಜಿಲ್ಲೆಯ ಭಟ್ಕಳದಿಂದ ಬೆಂಗಳೂರಿಗೆ ಚಲಿಸುತ್ತಿದ್ದ ವಾಯವ್ಯ ಸಾರಿಗೆ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ.

ಈ ಬಸ್ ಭಟ್ಕಳದಿಂದ ಸಾಗರ ಮಾರ್ಗವಾಗಿ ಬೆಂಗಳೂರಿಗೆ ಹೊರತ್ತಿತ್ತು. (Bhatkala Bangalore Bus) ಸಾಗರ ಪಟ್ಟಣಕ್ಕೆ ತಲುಪುತ್ತಿದ್ದಂತೆ ಆಕಸ್ಮಿಕವಾಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ತಕ್ಷಣ ಚಾಲಕ ಬಸ್‌ನಿಲ್ಲಿದ್ದು, ಒಳಗಿದ್ದ ಪ್ರಯಾಣಿಕರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಸ್‌ನಲ್ಲಿ 12ಮಂದಿ ಪ್ರಯಾಣಿಸುತ್ತಿದ್ದರು.

ಬಸ್‌ಗೆ ಬೆಂಕಿ ಬಿದ್ದ ಬಗ್ಗೆ ಸುದ್ದಿ ತಿಳಿದ ಸಾಗರದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಘಟನೆಯಿಂದಾಗಿ ಬಸ್‌ ಬಹುತೇಕ ಸುಟ್ಟುಹೋಗಿದೆ. ಸಾಗರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp
Facebook
Telegram
error: Content is protected !!
Scroll to Top