ಅಂಕೋಲ: ಶಿರೂರು ಗುಡ್ಡ ಕುಸಿತದ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಕಷ್ಟದಲ್ಲಿರುವರಿಗೆ ಎಲ್ಲಾ ರೀತಿಯ ಸೌಕರ್ಯ.ಕಲಿಸುವುದಾಗಿ ಭರವಸೆ ನೀಡಿದ್ದಾರೆ. ಮೃತರ ಕುಟುಂಬದ ಸದಸ್ಯರಿಗೆ 5ಲಕ್ಷ ರೂಪಾಯಿಗಳ ತಕ್ಷಣದ ಪರಿಹಾರ ವಿತರಿಸಲಾಗಿದೆ.
ಹೀಗಿರುವಾಗಲು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು ಮಾನವೀಯತೆ ಮರೆತು ರಾಜಕೀಯಕ್ಕಾಗಿ ತೆವಲಿನ ಮಾತನಾಡುವುದನ್ನ ನಿಲ್ಲಿಸಲಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂಪ್ಟರ್ ಅನಂತ ಮೂರ್ತಿ ಹೆಗಡೆ ಅವರ ವಿರುದ್ಧ ಗುಡುಗಿದ್ದಾರೆ.
ಶಿರೂರು ಗುಡ್ಡಕುಸಿತದಲ್ಲಿ ಸಂಕಷ್ಟದಲ್ಲಿರುವರಿಗೆ ನೆರವಾಗಬೇಕಿದ್ದ ರೈತಮೋರ್ಚಾ ಜಿಲ್ಲಾಧ್ಯಕ್ಷರು ಮಾನವೀಯತೆಯನ್ನು ಮರೆತು ಹಲುಬುತ್ತಿರುವ ರಾಜಕೀಯ ತೆವಲಿನ ಮಾತುಗಳು ಅವರ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ.
ಈಗಾಗಲೇ ಸರಕಾರದಿಂದ ಮನೆಕಳೆದುಕೊಂಡ ಕುಟುಂಬಗಳಿಗೆ 1 ಲಕ್ಷ 20 ಸಾವಿರ ರೂಪಾಯಿಗಳ ತಾತ್ಕಾಲಿಕ ಪರಿಹಾರ ರೂಪದಲ್ಲಿ ನೆರವು ನೀಡಲಿದೆ. ಹಾನಿಗೊಳಗಾಗಿರುವ ಆಸ್ತಿ- ಪಾಸ್ತಿಗಳ ಬಗ್ಗೆ
ಅಧಿಕಾರಿಗಳು ಸಮೀಕ್ಷೆ ನಡೆಸಿ ‘ಪರಿಹಾರ
ನೀಡಲು ಸರಕಾರ ಮುಂದಾಗಿದೆ.
ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಾಸಕ ಸತೀಶ ಸೈಲ್ ಅವರು ವೈಯುಕ್ತಿಕಾಗಿಯೂ ಸಾಕಷ್ಟು ನೆರವು ನೀಡಿದ್ದಾರೆ.
ನಮ್ಮ ಮುಖ್ಯಮಂತ್ರಿಗಳು ಏನು ಮಾಡಿಲ್ಲ ಎನ್ನುವ ರೀತಿಯಲ್ಲಿ ಮಾತನಾಡುತ್ತಿರುವ ಅನಂತಮೂರ್ತಿ ಹೆಗಡೆ ಶಿರೂರು ಗುಡ್ಡಕುಸಿತಕ್ಕೆ ಒಳಗಾಗಿರುವ ಕುಟುಂಬಕ್ಕೆ ಯಾವ ಸಹಾಯ ಮಾಡಿದ್ದಾರೆ ಎನ್ನುವುದರ ಬಗ್ಗೆ ಒಮ್ಮೆ ಆತ್ಮ ವಿಮರ್ಷೆ ಮಾಡಿಕೊಳ್ಳಲಿ. ಅದನ್ನ ಬಿಟ್ಟು ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಉಂಟಾದ ದುರಂತಕ್ಕೆ ರಾಜ್ಯ ಸರಕಾರದ ವಿರುದ್ಧ ಮಾತನಾಡುವುದನ್ನ ನೋಡಿದರೆ ಅನಂತಮೂರ್ತಿ ಹೆಗಡೆಗೆ ಮಾನವೀಯತೆ ಇರುವಂತೆ ಕಾಣುತ್ತಿಲ್ಲ.ದುರಂತದಲ್ಲಿ ರಾಜಕೀಯ ಮಾಡುವುದನ್ನ ಬಿಟ್ಟು ಸಂಕಷ್ಟದಲ್ಲಿರುವವರಿಗೆ ನೆರವಾಗಿ ಮಾತನಾಡಲಿ ಎಂದು ಅನಂತಮೂರ್ತಿ ವಿರುದ್ಧ ಸಾಯಿ ಗಾಂಷ್ಕರ್ ಕಿಡಿಕಾರಿದ್ದಾರೆ.