ಅರಣ್ಯ ಇಲಾಖೆ ಮಾಡುತ್ತಿರುವುದಾದರು ಏನು?
ಅಂಕೋಲಾ : ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66ರ ಶಿರೂರಿನಲ್ಲಿ ಗುಡ್ಡಕುಸಿತ ಉಂಟಾಗಿ ಹನ್ನೊಂದು ಮಂದಿಯ ಜೀವ ಗುಡ್ಡ ಬಲಿ ಪಡೆದಿದೆ.ಇದರಿಂದ ಪಕ್ಕದ ಉಳುವರೆ ಗ್ರಾಮದ ಆರೇಳು ಮನೆಗಳು ನೆಲಸಮವಾಗಿದೆ.ಇದರ ನಡುವೆ ಉಳುವರೆ ಗುಡ್ಡದಲ್ಲಿ ರೆರ್ಸಾಟ್ ಒಂದು ನಿರ್ಮಾಣವಾಗುತ್ತಿರುವಂತಿದ್ದು ಅರಣ್ಯ ಇಲಾಖೆ ನಿದ್ದೆ ಮಾಡುತಿದೆಯೇ ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ
ವೀಕ್ಷಕರೆ ಈಗಾಗಲೇ ಉತ್ತರಕನ್ನಡ ಜಿಲ್ಲೆಯ ಶಿರೂರು ಸೇರಿದಂತೆ ಕೇರಳದ ವಯನಾಡು ಗುಡ್ಡಕುಸಿತವಾಗಿ ಅದೆಷ್ಟೋ ಜೀವಗಳು ಬಲಿಯಾಗಿದೆ. ಇದಕ್ಕೆಲ್ಲಾ ಅರಣ್ಯದಲ್ಲಿ ಗುಡ್ಡಕೊರೆದು ರೆಸಾರ್ಟ್ ಹಾಗೂ ಅಭಿವೃದ್ಧಿ ಹೆಸರಲ್ಲಿ ಗುಡ್ಡಕೊರೆದಿರುವುದೆ ಕಾರಣ ಎನ್ನಲಾಗುತ್ತಿದೆ. ಈ ನಡುವೆ ಶಿರೂರು ಗುಡ್ಡಕುಸಿತದಿಂದ ಉಳುವರೆ ಗ್ರಾಮದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಆದರೆ ಇದೀಗ ಗುಡ್ಡಕುಸಿತದ ಭೀಕರತೆಯನ್ನ ಕಣ್ಣಾರೆ ಕಂಡಿರುವ ಉಳುವರೆ ಗ್ರಾಮದ ಗುಡ್ಡದಲ್ಲಿ ಗಂಗಾವಳಿ ನದಿಯ ತೀರದಲ್ಲೇ ಭಾರೀ ಪ್ರಮಾಣದಲ್ಲಿ ಗುಡ್ಡಕೊರೆದು ಅಲ್ಲಿ ರೆಸಾರ್ಟ್ ನಿರ್ಮಾಣ ಮಾಡಲಾಗತ್ತಿದೆ ಎನ್ನುವ ಮಾತು ಕೇಳಿ ಬರತ್ತಿದೆ.ಕೊರೆದಿರುವ ಗುಡ್ಡ ಖಾಸಗಿ ಜಾಗ ಎನ್ನುವ ಮಾಹಿತಿ ಸಹ ಇದೆ. ಆದರೆ ಅದು ಖಾಸಗಿ ಜಾಗವೇ ಆಗಿದ್ದರು ಸಹ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗುಡ್ಡ ಕೊರೆಯಲು ಅವಕಾಶ ನೀಡಿದವರು ಯಾರು. ಅನುಮತಿ ಪಡೆದೆ ಕೊರೆಯಲಾಗಿದೇಯಾ ಅಥವಾ ಆ ಜಾಗ ಯಾರೊಬ್ಬರ ಖಾಸಗಿ ಆಸ್ತಿನಾ.? ಇಲ್ಲ ಅರಣ್ಯ ಇಲಾಖೆಗೆ ಸೇರಿದ್ದ ಈ ಎಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ಇನ್ನಷ್ಟು ಜೀವ ಬಲಿ ಪಡೆಯುವ ಮೊದಲು ಕ್ರಮ ಜರುಗಿಸಬೇಕಿದೆ ಎನ್ನುವುದು ಸಾರ್ವಜನಿಕರ ಒತಾಯವಾಗಿದೆ.
ಬಡ ಸಾರ್ವಜನಿಕನು ತನ್ನ ಜೀವನೋಪಾಯಕ್ಕಾಗಿ ಮನೆ ಕಟ್ಟಿಕೊಳ್ಳಲು ಅರಣ್ಯ ಅತಿಕ್ರಮಣದ ಜಿಪಿಎಸ್ ಜಾಗವನ್ನು ಉಪಯೋಗಿಸಿಕೊಂಡರೆ ಪ್ರಪಂಚವೇ ತಲೆಯ ಮೇಲೆ ಬಿದ್ದವರಂತೆ ಅರಣ್ಯ ಇಲಾಖೆ ವರ್ತಿಸುತ್ತದೆ ಆದರೆ ಈಗ ಉಳುವರೇ ಗ್ರಾಮದಲ್ಲಿ ಗುಡ್ಡವನ್ನೇ ಕೊರೆದು ರೆಸಾರ್ಟ್ ಒಂದನ್ನು ನಿರ್ಮಿಸಲಾಗುತ್ತಿದೆ ಎನ್ನುವ ಮಾಹಿತಿ ದೊರೆತರೂ ಅರಣ್ಯ ಇಲಾಖೆ ಮಾತ್ರ ನಿದ್ದೆಯಲ್ಲಿದ್ದಂತೆ ವರ್ತಿಸುತ್ತಿರುವುದು ಬಹಳ ಶೋಚನೀಯವಾಗಿದೆ ಹಾಗಾದರೆ ಅರಣ್ಯ ಇಲಾಖೆಯ ಈ ಇಬ್ಬಗೇಯ ನೀತಿಯು ಯಾರನ್ನು ರಕ್ಷಿಸುವ ಸಲುವಾಗಿ ಆಗಿರುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ
ಆದ್ದರಿಂದ ಏನೇ ಆಗಲಿ ಜಿಲ್ಲಾಡಳಿತ ಈ ಕೂಡಲೇ ಮಧ್ಯಪ್ರವೇಶಿಸಿ ಅದು ಖಾಸಗಿ ಆಸ್ತಿ ಆಗಿರಲಿ ಅಥವಾ ಅರಣ್ಯ ಇಲಾಖೆಯ ಆಸ್ತಿಯಾಗಿರಲಿ ಕೂಡಲೇ ಅಲ್ಲಿ ನಡೆಯುತ್ತಿರುವ ರೆಸಾರ್ಟ್ ಕಾಮಗಾರಿಯನ್ನು ನಿಲ್ಲಿಸಿ ಭವಿಷ್ಯದಲ್ಲಿ ನಡೆಯಲಿರುವ ಅಪಾಯವನ್ನು ತಡೆಗಟ್ಟಬೇಕು ಎನ್ನುವುದೇ ಪ್ರಜ್ಞಾವಂತ ನಾಗರಿಕರ ಮಾತಾಗಿದೆ