ಲಿಂಗನಮಕ್ಕಿ ಜಲಾಶಯದ ನೀರು ಹೊರಬಿಟ್ಟಾಗ ಶರಾವತಿ ನದಿ ತೀರದ ಜನತೆಗೆ ತೊಂದರೆಯಾಗದಂತೆ ಕ್ರಮ ವಹಿಸಿ: ಸಚಿವ ಮಂಕಾಳು ವೈದ್ಯ

ಜಲಾಶಯಕ್ಕೆ ಸಂಪ್ರದಾಯ ಬದ್ದವಾಗಿ ಭಾಗಿನ ಅರ್ಪಿಸಿದ ಸಚಿವ ಮಂಕಾಳು ವೈದ್ಯ

ಲಿಂಗನಮಕ್ಕಿ ಜಲಾಶಯದ ನೀರು ಹೊರಬಿಟ್ಟಾಗ ಹೊನ್ನಾವರ ಶರಾವತಿ ನದಿಯ ಎಡದಂಡೆ ಮತ್ತು ಬಲದಂಡೆಯ ವಾಸಿಗಳಿಗೆ ಯಾವುದೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಮನ್ನೆಚ್ಚರಿಕೆ ಕ್ರಮವನ್ನು ಈಗಲೆ ವಹಿಸಿ ಎಂದು ಸಚಿವ ಮಂಕಾಳ ವೈದ್ಯ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದರು.

ಅವರು ಲಿಂಗನಮಕ್ಕಿ ಜಲಾಶಯಕ್ಕೆ ಬೇಟಿ ನೀಡಿ ನೀರಿನ ಒಳಹರಿವು, ನೀರಿನ ಸಂಗ್ರಹವನ್ನು ಪರೀಶೀಲಿಸಿ ಮಾತನಾಡಿದರು.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಈಗಾಗಲೆ ಹಲವು ದುರಂತಗಳು ಸಂಭವಿಸಿ ಅನೇಕರು ತಮ್ಮ ಪ್ರಾಣ, ನೆಲೆಯನ್ನು ಕಳೆದುಕೊಂಡಿದ್ದಾರೆ. ಈಗ ಜಿಲ್ಲೆಯ ಜಲಾಶಯಗಳು ಭರ್ತಿಯಾಗಿದ್ದು ಯಾವುದೆ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ತನ್ನ ಜಿಲ್ಲೆ, ವಿಧಾನಸಭಾ ಕ್ಷೇತ್ರದ ಹೊನ್ನಾವರ ತಾಲೂಕಿನ ಎಡದಂಡೆ ಮತ್ತು ಬಲದಂಡೆಯಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಬಾರದು ಎಂದು ಸಚಿವರು ಸೂಚಿಸಿದ್ದಾರೆ. ೫೦ಸಾವಿ ಕ್ಯೂಸೆಕ್ಷ ನೀರು ಬಿಟ್ಟರೆ ಸುಮಾರು ೪೫೦ ಮನೆಗಳು, ೧ಲಕ್ಷ ಕ್ಯೂಸೆಕ್ಷ ನೀರು ಬಿಟ್ಟರೆ ೨೨೦೦ಕ್ಕೂ ಅಧಿಕ ಮನೆಗಳು ಮುಳುಗಡೆಯಾಗಲಿದೆ ಎಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ ಸಚಿವ
ಜಲಾಶಯದಲ್ಲಿ ನೀರು ತುಂಬುವವರೆಗೂ ಕಾಯುವದು ಬೇಡ. ೮೦ ಪ್ರತಿಶತಕ್ಕೂ ಅಧಿಕ ನೀರು ಸಂಗ್ರಹವಾಗುತ್ತಿರುವAತೆ ಸ್ವಲ್ಪ ಸ್ವಲ್ಪ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಸಮುದ್ರದಲ್ಲಿ ಏರಿಳಿತಗಳು ಇದ್ದುದ್ದರಿಂದ ನೀರಿನ ಇಳಿಕೆ ಇದ್ದ ಸಂದರ್ಬದದಲ್ಲಿ ನೀರು ಬಿಡಬೇಕು. ಸಮುದ್ರದಲ್ಲಿ ಏರಿಕೆ ಇದ್ದಾಗ ಬಿಟ್ಟರೆ ಅಲ್ಲಿ ಗಾಳಿಯ ಒತ್ತಡ ಹೆಚ್ಚಿದ್ದು ಇದರಿಂದ ಮತ್ತೆ ಸ್ಥಳೀಯ ನಿವಾಸಿಗಳಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಇದನ್ನು ಕಡ್ಡಾಯವಾಗಿ ಗಮನಿಸಿ, ಪಾಲಿಸುವಂತೆ ಸಲಹೆ ನೀಡಿದ್ದಾರೆ.

ಮುಖ್ಯವಾಗಿ ಲಿಂಗನಮಕ್ಕಿ ಇತಿಹಾಸದಲ್ಲೆ ಮೊದಲ ಸಚಿವರ ಬೇಟಿ
ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗಿ ೬೦ವರ್ಷ ಕಳೆದರೂ ಇಲ್ಲಿಯ ತನಕ ಯಾವೊಬ್ಬ ಸಚಿವರು ಇಲ್ಲಿ ಬೇಟಿ ನೀಡಿಲ್ಲ. ಸಚಿವ ಮಂಕಾಳ ವೈದ್ಯ ಮೊದಲ ಬಾರಿಗೆ ಇಲ್ಲಿ ಬೇಟಿ ನೀಡಿ ಇಲ್ಲಿನ ಪರಿಸ್ಥಿತಿ ಸ್ವತಃ ಅವಲೋಕಿಸಿರುವದು ಪ್ರಶಂಸೆ ವ್ಯಕ್ತವಾಗಿದೆ. ಇಲ್ಲಿಂದಲೆ ಇದಕ್ಕೆ ಸಂಬಂದಪಡುವ ೧೩ ಪಂಚಾಯಿತಿಯ ಪಿಡಿಒಗಳ ವಿಡಿಯೋ ಕಾನ್ಪರೆನ್ಸ್ ನಡೆಸಿ ಸಾಧಕಬಾಧಕಗಳ ಚರ್ಚೆ ನಡಿಸಿದ್ದಾರೆ.

ಈ ಸಂದರ್ಬದಲ್ಲಿ ಸಚಿವ ಮಂಕಾಳು ವೈದ್ಯರು ಲಿಂಗನಮಕ್ಕಿ ಜಲಾಶಯಕ್ಕೆ ಸಂಪ್ರದಾಯಬದ್ದವಾಗಿ ಭಾಗಿನವನ್ನು ಅರ್ಪಿಸಿದರು

ಉಭಯ ತಾಲೂಕಿನ ಹಿರಿಯ ಅಧಿಕಾರಿಗಳು, ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಲಿಂಗನಮಕ್ಕಿ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಕಾಶ ಕೆ. ಗೆರುಸೊಪ್ಪಾ ಕೆ.ಪಿ.ಸಿ.ಎಲ್ ಅಭಿಯಂತರ ಗೀರೀಶ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು ಇದು ಮೊದಲ ಬಾರಿಗೆ ಎನ್ನಲಾಗಿದೆ.

WhatsApp
Facebook
Telegram
error: Content is protected !!
Scroll to Top