ಭಟ್ಕಳ ನಗರದಲ್ಲಿ ಅತೀ ವೇಗ ಮತ್ತು ನಿರ್ಲಕ್ಷ ಚಾಲನೆಗೆ ಬ್ರೇಕ್

ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಡಾರ್ ಗನ್ ಕಾರ್ಯಾಚರಣೆ

ಭಟ್ಕಳ: ನಗರದಲ್ಲಿ ಅತೀ ವೇಗ ಮತ್ತು ನಿರ್ಲಕ್ಷತನದಿಂದ ವಾಹನ ಚಲಾಯಿಸುವ ಸವಾರರನ್ನು ನಿಯಂತ್ರಿಸಲು ನಗರ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಡಾರ್ ಗನ್ ಕಾರ್ಯಾಚರಣೆ ನಡೆಸಲಾಯಿತು.

ನಗರ ಠಾಣೆಯ ಟ್ರಾಪಿಕ್ ಪಿ.ಎಸ್.ಐ, ನವೀನ್ ನಾಯ್ಕ ಅತೀ ವೇಗವಾಗಿ ವಾಹನ ಚಲಾಯಿಸುತ್ತಿದ್ದ 3 ಜನ ವಾಹನ ಸವಾರರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ರೂ.3,000/- ದಂಡ ವಿಧಿಸಿದ್ದಾರೆ.

ಮಹೇಶ ಎಮ್. ಕೆ. ಪೊಲೀಸ್ ಉಪಾಧಿಕ್ಷಕರು ಭಟ್ಕಳ, ಗೋಪಿಕೃಷ್ಣ ಕೆ.ಆರ್. ಪೊಲೀಸ್ ನಿರೀಕ್ಷಕರು ಭಟ್ಕಳ ಶಹರ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ ಶಿವಾನಂದ ನಾವದಗಿ ಪಿ.ಎಸ್.ಐ (ಕಾ.ಸೂ), ಯಲ್ಲಪ್ಪ ಮಾದರ (ಪಿ.ಎಸ್.ಐ ತನಿಖೆ-1) ಹಾಗೂ ಸಿಬ್ಬಂಧಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಭಟ್ಕಳ ನಗರ ಸಭಾ ವ್ಯಾಪ್ತಿಯಲ್ಲಿ ವಾಹನಗಳ ವೇಗದ ಮಿತಿ ಗಂಟೆಗೆ 30 ರಿಂದ 35 ಕಿ.ಮೀ ವೇಗ ಕಡ್ಡಾಯವಾಗಿ ನಿಗದಿಪಡಿಸಲಾಗಿದ್ದು, ಅತಿ ವೇಗ ನಿರ್ಲಕ್ಷತನದಿಂದ ವಾಹನ ಚಲಾಯಿಸುವ ಸವಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಭಟ್ಕಳ ಡಿ.ಎಸ್.ಪಿ ಮಹೇಶ ಎಮ್. ಕೆ. ಎಚ್ಚರಿಕೆ ನೀಡಿದ್ದಾರೆ.

WhatsApp
Facebook
Telegram
error: Content is protected !!
Scroll to Top