ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿದವರನ್ನು ಹೊರತೆಗೆಯುವ ಕಾರ್ಯಾಚರಣೆಗೆ ಸಹಾಯ ಸಹಕಾರ ನೀಡಲು ಕೇರಳದಿಂದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸಿಪಿಐಎಂ ನ ಎರಡು ಶಾಸಕರು ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ ಐ ) ನ ರಾಜ್ಯ ಪದಾಧಿಕಾರಿಗಳು ಅಂಕೋಲಾ ಶಿರೂರಿನಲ್ಲಿ ಬೀಡುಬಿಟ್ಟಿದ್ದಾರೆ.
ಗಂಗಾವಳಿ ನೀರಿನ ಮಧ್ಯ ಮಣ್ಣೊಳಗೆ ಸಿಲುಕಿರುವ ಲಾರಿ ಡ್ರೈವರ್ ಅರ್ಜುನ್ ನ ಮೂಲ ಊರಾದ ಕ್ಯಾಲಿಕಟ್ ನಿಂದ ಬಂದಿರುವ ಬಾಲುಶೆರಿ ಶಾಸಕರಾದ ಸಚಿನ್ ದೇವ್ ಹಾಗೂ ತಿರುವಂಬಾಡಿ ಶಾಸಕರಾದ ಲಿಂಟೋ ಜೊಸೆಫ್, ಡಿವೈಎಫ್ ಐ ಕೇರಳ ರಾಜ್ಯಾಧ್ಯಕ್ಷರಾದ ವಿ ವಾಸಿಫ್, ಕೋಜಿಕ್ಕೋಡ್ ಜಿಲ್ಲಾ ಮುಖಂಡರಾದ ಪಿಸಿ ಶೈಜು, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜೇಶ ವೆಲ್ಲಟ್ಟ, ರಾಜ್ಯ ಸಮಿತಿ ಸದಸ್ಯ ಸುಮೇಶ್ ಟಿಕೆ, ಚೆಂಗಳ ಕಾರ್ಯದರ್ಶಿ ಪ್ರದೀಪ ಟಿಜೆ ಸ್ಥಳದಲ್ಲೇ ಇದ್ದು ಮಾನ್ಯ ಡಿಸಿಯವರೊಂದಿಗೆ ಚರ್ಚಿಸಿ, ಕೇರಳ ಸರ್ಕಾರದ ಪರವಾಗಿ ಅಗತ್ಯ ಸಹಕಾರ ನೀಡುತ್ತ ಕಾರ್ಯಾಚರಣೆ ಗಮನಿಸುತ್ತಿದ್ದಾರೆ. ಹಾಗೂ ಬಹಳಷ್ಟು ಸಂಗಾತಿಗಳು ಬಂದುಹೋಗಿ ಮಾಡುತ್ತ ಇದ್ದಾರೆ. ಅಕ್ಕಪಕ್ಕದಲ್ಲಿ ನೆರೆಹಾವಳಿಗೆ ಈಡಾದ ಪ್ರದೇಶಕ್ಕೂ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.