ಭಟ್ಕಳ: ತಾಲೂಕಿನ ಹಾಡವಳ್ಳಿಯಲ್ಲಿ ಶುಕ್ರವಾರ ಸಂಜೆ ಸುರಿದ ಗಾಳಿ ಮಳೆಗೆ ಅಡಿಕೆ ತೋಟದಲ್ಲಿದ್ದ ನೂರಾರು ಅಡಕೆ ಮರಗಳು ನೆಲಕ್ಕುರುಳಿದ್ದು ಕೆಲವೆಡೆ ಮನೆಗಳು ಹಾನಿಯಾಗಿರುವ ಘಟನೆ ವರದಿಯಾಗಿದೆ.
ಮಂಜುನಾಥ ಕುಪ್ಪಯ್ಯ ನಾಯ್ಕ ಹಲ್ಯಾಣಿ ಇವರ ಒಂದು ಎಕರೆ 12 ಗುಂಟೆಯಲ್ಲಿ ಬೆಳೆದೆ ಅಡಿಕೆ ಮರಗಳಲ್ಲಿ ನೂರಾರು ಮರ ಹಾಗು ತೆಂಗಿನ ಮರ ಭಾರಿ ಗಾಳಿ ಮಳೆಗೆ ನೆಲಸಮವಾಗಿದೆ. ಅದೇ ರೀತಿ ತಿಮ್ಮಯ್ಯ ನಾರಾಯಣ ನಾಯ್ಕ ಎನ್ನುವವರ ಮನೆ ಕೂಡ ಹಾನಿಯಾಗಿದೆ. ಬುಡ್ಡಾ ಮಂಗಳ ಗೊಂಡ ಇವರ ಮನೆ ಕೂಡ ಹಾನಿಯಾಗಿದ್ದು ಜೊತೆಗೆ ಅಡಿಕೆ ಮರ ಹಾಗೂ ತೆಂಗಿನ ಮರಕೂಡ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಅಣ್ಣಪ್ಪ ನಾರಾಯಣ ನಾಯ್ಕ, ಗಣಪತಿ ನಾರಾಯಣ ನಾಯ್ಕ, ನಾಗೇಶ ನಾಯ್ಕ ಎನ್ನುವವರ ಮನೆ ಹಾಗೂ ತೋಟ ಕೂಡ ಹಾನಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.