ಅಪಾಯ ಸಂಬವಿಸುವ ಮೊದಲು ಗಮನ ಹರಿಸಬೇಕಾಗಿದೆ ಅಧಿಕಾರಿಗಳು
ಭಟ್ಕಳ ತಾಲೂಕಿನ ಚೌಥನಿಯಲ್ಲಿ ಅಂಗನವಾಡಿ ಕೆಂದ್ರವೊಂದು ನೆಲಕ್ಕುರುಳುವ ಎಲ್ಲಾ ಸೂಚನೆಯನ್ನು ನೀಡುತ್ತಿದ್ದು ಪಾಲಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು ಅಪಾಯ ಎದುರಾಗುವ ಮೊದಲು ಅಧಿಕಾರಿಗಳು ಗಮನಹರಿಸಿ ಕೂಡಲೆ ಸಮಸ್ಯ ಬಗೆಹರಿಸುವ ಅನಿವಾರ್ಯತೆ ಇದೆ
ಹೌದು ವಿಕ್ಷಕರೇ ಇದು ಭಟ್ಕಳ ತಾಲೂಕಿನ ಚೌಥನಿಯಲ್ಲಿರುವ ಅಂಗನವಾಡಿ ಕೇಂದ್ರ ಅಂಗನವಾಡಿ ಕೇಂದ್ರದ ಹತ್ತಿರ ಖಾಸಗಿ ವ್ಯಕ್ತಿಯೊಬ್ಬ ತನ್ನ ಸ್ವಾರ್ಥದ ಕಾರಣಕ್ಕಾಗಿ ಪುಟಾಣಿ ಮಕ್ಕಳು ತಮ್ಮ ಪ್ರಾರಂಭದ ಶಿಕ್ಷಣ ಪಡೆದುಕೊಳ್ಳುವ ಅಂಗನವಾಡಿ ಶಾಲೆಯ ಅಂಚಿನವರೆಗೂ ಯಾವುದೇ ಮುಂಜಾಗರೂಕತೆ ವಹಿಸದೆ ಗುಡ್ಡವನ್ನು ಕೊರೆದು ಬಿಟ್ಟಿದ್ದಾನೆ . ಈ ರೀತಿ ಲಂಬವಾಗಿ ಗುಡ್ಡ ಕೊರೆದು ಕಣಿವೆ ಮಾಡಿದ ಕಾರಣಕ್ಕೆ, ಪಾಲಕರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟುಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಮಕ್ಕಳ ಯೋಚನೆ ಹೇಗಿರುತ್ತದೆ ಎಂದು ಎಲ್ಲರಿಗೂ ಅರಿವಿರುತ್ತದೆ ದುರದೃಷ್ಟವಶಾತ್ ಆಟವಾಡುವ ಸಂದರ್ಭದಲ್ಲಿ ಒಬ್ಬರನೊಬ್ಬರು ಸ್ವಲ್ಪ ದುಡಿಕೊಂಡರು ಅನಾಹುತವೇ ಆಗಿ ಹೋಗುವ ಸಂಭವವಿದೆ.
ಇತ್ತಿಚೇಗೆ ಸತತತ ಮಳೆಯ ಪರಿಣಾಮ ಗುಡ್ಡ ಜಾರಿ ಅಂಗನವಾಡಿ ಕಟ್ಟಡ ನೆಲಸಮವಾಗುವಂತ ಎಲ್ಲಾ ಲಕ್ಷಣವನ್ನು ನಾವು ಇಲ್ಲಿ ನೋಡಬಹುದಾಗಿದೆ .
ಕಡಿದಾದ ಗುಡ್ಡದ ರಸ್ತೆಗೆ ಕೆಲವು ಕಿಡಿಗೇಡಿಗಳು ಕಸ ಮುಂತಾದ ತ್ಯಾಜ್ಯವನ್ನು ನೀರು ಹರಿಯುವ ಜಾಗದಲ್ಲೇ ಗುಡ್ಡೆ ಹಾಕಿರುವುದರಿಂದ ಮಾಂಸದ ತ್ಯಾಜ್ಯಗಳ ಮಿಶ್ರಿತವಾಗಿರುವ ಕೊಳಕು ನೀರನ್ನು ತುಳಿದು ಕೊಂಡು ಬರುವ ಪರಿಸ್ಥಿತಿ ಮಕ್ಕಳಿಗೆ ಇದೆ.
ಈ ಹಿಂದೆಯೂ ಸ್ಥಳಿಯರೂ ಈ ಕುರಿತಂತೆ ಅದಿಕಾರಿಗಳಿಗೆ ದೂರು ನೀಡಿದ್ದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಪಾಲಕರ ದೂರಾಗಿದೆ.