ಸಚಿವ ಮಂಕಾಳು ವೈದ್ಯ ಹಾಗು
ಕ್ರಷ್ಣ ಬೈರೆಗೌಡರೊಂದಿಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಮುಖ್ಯಮಂತ್ರಿ
ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಐ ಆರ್ ಬಿ ಕಳಪೆ ಕಾಮಗಾರಿ ಹಾಗು ಅತಿಯಾಗಿ ಸುರಿದ ಭಾರಿ ಮಳೆಯ ಕಾರಣ ಗುಡ್ಡ ಕುಸಿದ ಅನೇಕ ಸಾವುನೋವು ಸಂಬವಿಸಿದ ಸ್ಥಳಕ್ಕೆ ಸಚಿವ ಮಂಕಾಳ ವೈದ್ಯ ಸಚಿವ ಕ್ರಷ್ಣ ಬೈರೆ ಗೌಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು
ಹೌದು ವಿಕ್ಷಕರೇ ಕೆಲವು ದಿನಗಳ ಹಿಂದೆ ಜಿಲ್ಲೆಯ ಅಂಕೋಲಾ ಶಿರೂರಿನಲ್ಲಿ ಐ ಆರ್ ಬಿ ಅವೈಜ್ಞಾನಿಕ ಕಾಮಗಾರಿಯ ಕಾರಣ ಅತಿಯಾಗಿ ಮಳೆ ಸುರಿದ ಸಂದರ್ಬದಲ್ಲಿ ಗುಡ್ಡ ಕುಸಿದು ಅನೇಕ ಸಾವು ನೋವುಗಳು ಸಂಬವಿಸಿ ಇಡಿ ದೇಶವೇ ಬೆಚ್ಚಿಬೀಳುವ ಪ್ರಸಂಗ ಎದುರಾಯಿತು
ಇಂದು ಮುಖ್ಯಮಂತ್ರಿಗಳು ಸ್ಥಳಕ್ಕೆ ಬೇಟಿ ಸ್ಥಳ ಪರಿಶೀಲನೆ ನಡೆಸಿ ಶಿಘ್ರದಲ್ಲೆ ತೆರವು ಕಾರ್ಯಾಚರಣೆ ನಡೆಸಿ ಕಾಣೆಯಾದ ಡ್ರೈವರ್ ಅರ್ಜುನ್ ಹಾಗು ಸ್ಥಳಿಯರನ್ನು ಕೂಡಲೆ ಹುಡುಕುವ ಪ್ರಕ್ರಿಯೇಗೆ ವೇಗ ನೀಡಬೇಕು ಎಂದು ಹೇಳಿದರು ಈ ಸಂದರ್ಬದಲ್ಲಿ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರು ಜಿಲ್ಲೆಯಲ್ಲಿ ನಡೆದ ಈ ಅವಘಡದ ಬಗ್ಗೆ ಸಂಪೂರ್ಣ ಮಾಹಿತಿ ಈಗಾಗಲೇ 6 ಮೃತ ದೇಹಗಳು ಸಿಕ್ಕಿದ್ದು ಇನ್ನು ನಾಪತ್ತೆಯಾದವರ ಹುಡುಕಾಟ ನಡೆಯುತ್ತಿದ್ದು ಸ್ಥಳೀಯ ಶಾಸಕರಾದ ಸತೀಶ ಸೈಲ್ ಘಟನೆ ನಡೆದ ದಿನದಿಂದಲೂ ಸ್ಥಳದಲ್ಲೇ ಇದ್ದು ರಕ್ಷಣಾ ಕಾರ್ಯ ನೋಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿರುತ್ತಾರೆ ನಾಪತ್ತೆಯಾದವರ ಹುಡುಕಾಟಕ್ಕೆ ಇನ್ನಷ್ಟು ರಕ್ಷಣಾ ತಂಡಗಳನ್ನು ಅವಶ್ಯಕತೆ ಇದ್ದಲ್ಲಿ ಕರೆಸಿಕೊಳ್ಳುವ ಬಗ್ಗೆ ಹಾಗೂ ಕಾರ್ಯಚರಣೆಗೆ ಯಾವುದೇ ರೀತಿಯಲ್ಲಿ ಸಹಾಯ ಸಹಕಾರ ನಮ್ಮ ಸರಕಾರ ಮಾಡುವಲ್ಲಿ ಸಿದ್ದವಿದ್ದು. ಘಟನೆಯಲ್ಲಿ ಮನೆ ಕಳೆದುಕೊಂಡವರಿಗೆ ಸರಕಾರ ಪರಿಹಾರ ನೀಡಿದ್ದು ಮುಂದಿನ ದಿನದಲ್ಲಿ ಇನ್ನಷ್ಟು ರೀತಿಯಲ್ಲಿ ಸಹಾಯ ಮಾಡುವ ಬಗ್ಗೆ ತಿಳಿಸಿ ಮುಖ್ಯಮಂತ್ರಿಗಳು ಸಂತ್ರಸ್ಥರಿಗೆ ಧೈರ್ಯ ತುಂಬಿದರು.
ಲೋಕೋಪಯೋಗಿ ಇಲಾಖೆ ಸತೀಶ್ ಜಾರಕಿಹೊಳಿ, ಹಳಿಯಾಳ ಶಾಸಕರಾದ ಆರ್.ವಿ.ದೇಶಪಾಂಡೆ, ಕಾರವಾರ ಶಾಸಕರಾದ ಸತೀಶ್ ಸೈಲ್, ಸರ್ಕಾರ ಅಪರಾ ಮುಖ್ಯಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನಿಶ್ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದರು.