ನಮಸ್ಕಾರ ವಿಕ್ಷರೇ ಐ ಆರ್ ಬಿ ಕಂಪನಿಯ ಕರ್ಮಕಾಂಡ ವಿಷೇಶ ಕಾರ್ಯಕ್ರಮಕ್ಕೆ ಸ್ವಾಗತ

ಉತ್ತರ ಕನ್ನಡ ಜಿಲ್ಲೆಯ ಜನತೆ ಶಾಂತಿಪ್ರೀಯರು ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣಕ್ಕೆ ಹೆಸರುವಾಸಿಯಾದರೆ ಉತ್ತರ ಕನ್ನಡ ಜಿಲ್ಲೆ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ನಾಡಾಗಿದೆ ನಮ್ಮ ಉತ್ತರ ಕನ್ನಡಿಗರ ಈ ಜೌದಾರ್ಯತೆಯನ್ನೆ ದೌರ್ಬಲ್ಯ ಎಂದು ತಿಳಿದುಕೊಂಡ ಐ ಆರ್ ಬಿ ಎಂಬ ಕೆಂದ್ರ ಸಚಿವ ನಿತಿನ್ ಗಡ್ಕರಿ ಎಂಬ ಆಸಾಮಿಯ ಪಾಲುದಾರಿಕೆಯ ಮಹಾರಾಷ್ಟ್ರ ಮೂಲದ ಕಂಪನಿ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ನಡೆಸಲು ಮುಂದಾಗಿದೆ ಈ ಕಂಪನಿ ಕರಾವಳಿಯ ಉತ್ತರ ಕನ್ನಡದಲ್ಲಿ ಯಾವ ಮಟ್ಟದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿದೆ ಎಂದರೆ ಇವರು ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮಾಯಕರು ವಾಹನ ಸವಾರರ ಪಾದಾಚಾರಿಗಳ ಮಾರಣಹೊಮ ಸರ್ವೆ ಸಾಮಾನ್ಯವಾಗಿ ಹೊಗಿದೆ

ಹೌದು ವೀಕ್ಷಕರೆ ಈ ಐ ಆರ್ ಬಿ ಕಂಪನಿ ಕೇವಲ ನಮ್ಮ ಕರ್ನಾಟಕದ ಕರಾವಳಿಯಲ್ಲಷ್ಟೆ ಅಲ್ಲ ಇದು ಮಹಾ ರಾಷ್ಟ್ರದಲ್ಲೂ ಕೂಡ ಅವೈಜ್ಞಾನಿಕ ರಾಷ್ಟ್ರಿಯ ಹೆದ್ದಾರಿ ನಿರ್ಮಾಣಕ್ಕೆ ಕುಖ್ಯಾತಿಯನ್ನು ಪಡೆದಿದೆ ಇದೆ ಕೆಂದ್ರ ಸರಕಾರದ ಸಚಿವ ನಿತಿನ್ ಗಡ್ಕರಿ ಪಾಲುದಾರಿಕೆ ಕಂಪನಿಯಾದ ಐ ಆರ್ ಬಿ ಕೊಲೆ ಆರೋಪವನ್ನು ಕೂಡಾ ಹೊತ್ತುಕೊಂಡು ಸಿ ಬಿ ಐ ತನಿಖೆಗೆ ಒಳಗಾಗಿರುವುದರ ಬಗ್ಗೆ ನಾವು ಮಹಾರಾಷ್ಟ್ರ ಮೂಲದ ವಾಹಿನಿಯಲ್ಲಿ ಮಾಹಿತಿ ಪಡೆದುಕೊಳ್ಳ ಬಹುದಾಗಿದೆ ಇಂತಹ ಭಯಾನಕ ಹಿನ್ನೆಲೆಯನ್ನು ಈ ಐ ಆರ್ ಬಿ ಕಂಪನಿ ಹೊಂದಿರುತ್ತದೆ ಇದು ಒಂದು ಕಡೆಯಾದರೆ ಇದೆ ಐ ಆರ್ ಬಿ ಕಂಪನಿ ಮಹಾರಾಷ್ಟ್ರದಲ್ಲಿ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯನ್ನು ನಡೆಸಿ ಮಹಾರಾಷ್ಟ್ರದ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯವರ ಕೆಂಗಣ್ಣಿಗೆ ಗುರಿಯಾಗಿತ್ತು 2014 ಅವದಿಯಲ್ಲಿ ಐ ಆರ್ ಬಿ ಕಂಪನಿ ಮಹರಾಷ್ಟ್ರದಲ್ಲೂ ಕೂಡ ಅವೈಜ್ಞಾನಿಕ ಕಾಮಗಾರಿಯನ್ನು ನಡೆಸಿ ಅನೇಕ ಸಮಸ್ಯೆಯನ್ನು ಹುಟ್ಟುಹಾಕಿತ್ತು ಇದರಿಂದ ರೊಚ್ಚಿಗೆದ್ದ ಮಹಾರಾಷ್ಟ್ರದ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯವರು ಟೋಲ್ ಯಾರು ಕಟ್ಟಬೇಡಿ ಒಂದು ವೇಳೆ ಟೊಲಕಟ್ಟುವಂತೆ ಹೇಳಿ ನಿಮ್ಮ ವಾಹನವನ್ನು ತಡೆದರೆ ನಿಮ್ಮ ಶೈಲಿಯಲ್ಲೆ ಉತ್ತರಿಸಿ ಎಂದು ರಾಜ್ ಠಾಕ್ರೆ ಕರೆ ನುಡಿದ್ದರು ರಾಜ ರಾಕ್ರೆ ಕರೆ ಮಹಾರಾಷ್ಟ್ರದಲ್ಲಿ ಅಕ್ಷರಶ ಐ ಆರ್ ಬಿ ಕಂಪನಿ ನಡುಗಿಹೊಗಿತ್ತು ಎಲ್ಲಿ ನೊಡಿದರಲ್ಲಿ ಟೊಲ್ ಕಟ್ಟುವುದಿಲ್ಲ ಎನ್ನುವ ಅಬಿಯಾನ ಪ್ರತಿಭಟನೆಗಳು ಪ್ರಾರಂಬವಾಗಿದ್ದವು ಟೋಲ್ ವಿರೋದಿ ಹೊರಾಟಗಳು ಮಹಾರಾಷ್ಟ್ರದಾಧ್ಯಂತ ಬುಗಿಲೆದ್ದು ಹೊಯಿತು ಮಹಾರಾಷ್ಟ್ರದಲ್ಲಿ ಒಂದಲ್ಲಾ ಎರಡಲ್ಲಾ ಬರೊಬ್ಬರಿ 22 ಟೋಲ್ ಬೂತ್ಗಳ ಮೇಲೆ ದಾಳಿ ನಡೆಸಿ ಪ್ರತಿಭಟನೆಯನ್ನು ಮಾಡಿದ್ದರು

ಇಂತಹ ಕುಖ್ಯಾತಿಯನ್ನು ಪಡೆದ ಐ ಆರ್ ಬಿ ಕಂಪನಿಗೆ ಕೆಂದ್ರ ಸರಕಾರ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಟೆಂಡರ್ ಕೊಟ್ಟು ಕರ್ನಾಟಕಕ್ಕೆ ಕಳುಹಿಸುತ್ತದೆ ಟೆಂಡರ್ ಪಡೆದ ಮಾನಗೆಟ್ಟ ಕುಖ್ಯಾತ ಐ ಆರ್ ಬಿ ಕಂಪನಿ ಕರ್ನಾಟಕಕ್ಕೆ ಎಂಟ್ರೀಹೊಡೆದಿದ್ದೆ ದೇಶ ಭಕ್ತಿ ಎಂಬ ಅಸ್ತ್ರವನ್ನು ಹಿಡಿದು ನಮ್ಮದು ಕೆಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಪ್ರೋಜೆಕ್ಟ ಆಗಿದ್ದು ನಾವು ರಾಷ್ಟ್ರಿಯ ಹೆದ್ದಾರಿ ನಿರ್ಮಾಣ ಮಾಡುತ್ತೆವೆ ದೇಶ ಕಟ್ಟುವ ಕೆಲಸ ಮಾಡುತ್ತೆವೆ ಎಂದು ರಸ್ತೆ ನಿರ್ಮಾಣಕ್ಕಾಗಿ ತಮ್ಮ ಮನಸ್ಸಿಗೆ ಬಂದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹೆಸರಲ್ಲಿ ವರ್ತಿಸಲು ಪ್ರಾರಂಬಿಸಿದೆ ಸರಕಾರದ ಆದೇಶ ಎಂದು ಅನೇಕ ಜಾಗಗಳನ್ನು ವಶಕ್ಕೆ ಪಡೆದಿದೆ ಮೊದಲು ಉತ್ತರ ಕನ್ನಡದ ಜನತೆ ಇವರ ಮಾತಿಗೆ ಮರುಳಾಗಿದ್ದಾರೆ ತಮ್ಮ ಒಡೆತನದ ಭೂಮಿಗಳನ್ನು ಇವರಿಗೆ ಒಪ್ಪಿಸಿದ್ದಾರೆ ಆದರೆ ದಿನ ಕಳೆದಂತೆ ಇವರಿಗೆ ಬರಬೇಕಾದ ಪರಿಹಾರಗಳು ಮರಿಚಿಕೆಯಾಗಿ ಹೊದವು ಪರಿಹಾರಕ್ಕಾಗಿ ಕೊರ್ಟು ಮನೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿ ದಶಕಗಳು ಕಳೆದರು ಇನ್ನು ಪರಿಹಾರ ಸಿಗದೆ ಕೊಟ್ಟವ ಕೊಡಂಗಿ ಇಸ್ಕಂಡವ ಈರಬಂದ್ರ ಎಂಬ ಪರಿಸ್ತಿತಿಗೆ ಇಡಾಗಿದ್ದಾರೆ ಬೂಮಿಯನ್ನು ಪಡೆದು ರಸ್ತೆಯನ್ನಾದರು ಸರಿಯಾಗಿ ನಿರ್ಮಾಣ ಮಾಡಿದ್ದಾರಾ ಅದೂ ಇಲ್ಲ ಪ್ರಾರಂಬದ ಒಂದೆ ಒಂದು ಮಳೆಗೆ ಅನೇಕ ಮನೆಗಳು ಕೊಚ್ಚಿಕೊಂಡು ಹೋದವು ಬೆಟ್ಟಗುಡ್ಡಗಳು ದರಾಶಾಹಿತಾದವು ರಸ್ತೆ ಅಪಘಾತಗಳು ಹೆಚ್ಚಾಗಿ ವಾಹನ ಸವಾರರು ಪಾದಾಚಾರಿಗಳ ಮಾರಣ ಹೋಮಗಳು ಪ್ರಾರಂಬವಾದವು ಈ ಬಗ್ಗೆ ಸಾರ್ವಜನಿಕರಾಗಲಿ ಮುಖಂಡರಾಗಲಿ ಪ್ರಶ್ನೇ ಮಾಡಿದರೆ ಮೊದಿ ಸರಕಾರದ ಕಡೆ ಬೆರಳು ತೊರಿಸಿ ನಾವು ದೇಶ ಕಟ್ಟುವ ಕೆಲಸ ಮಾಡುತ್ತಿದ್ದೆವೆ ಮೊದಿ ಸರಕಾರದ ಆದೇಶ ಎಂದು ಹೇಳುವ ಮೂಲಕ ಕೊತಿ ಮೊಸರನ್ನು ತಿಂದು ಆಡಿನ ಮೂತಿಗೆ ಒರೆಸಿತ್ತಂತೆ ಎಂಬ ಗಾದೆಯಂತೆ ವರ್ತಿಸಲು ಪ್ರಾರಂಬಿಸಿತು ಈ ಬಗ್ಗೆ ಜಿಲ್ಲೆಯ ಕೆಂದ್ರ ಸಚಿವರಿಂದ ಹಿಡಿದು ಬಿಜೆಪಿ ಪಕ್ಷದ ಎಲ್ಲಾ ಶಾಸಕರು ಕೆಂದ್ರದ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಪ್ರಶ್ನೆಯನ್ನೆ ಮಾಡದೆ ಇಂಗು ತಿಂದ ಮಂಗನಂತೆ ಕುಳಿತುಕೊಂಡಿದ್ದಂತು ಸುಳ್ಳಲ್ಲ

ಈ ಬಗ್ಗೆ ಸಚಿವ ಮಂಕಾಳು ವೈದ್ಯರು ಅಧಿಕಾರ ಹಿಡಿದ ಪ್ರಾರಂಭದಿಂದಲೆ ಐ ಆರ್ ಬಿ ಕಂಪನಿಗೆ ಹಾಗು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರಕ್ಕೆ ಜಿಲ್ಲೆಯಲ್ಲಿ ಸಾವು ನೊವುಗಳು ಹೆಚ್ಚಾಗಿದೆ ನಿಮ್ಮ ಅವೈಜ್ಞಾನಿಕ ಕಾಮಗಾರಿಯ ಕಾರಣ ಬೆಟ್ಟ ಗುಡ್ಡಗಳು ಕುಸಿಯುವ ಅಪಾಯದ ಹಂತವನ್ನು ತಲುಪಿದೆ ಎಂದು ಮನವಿಯ ಮೂಲಕ ಹೇಳಿದರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು ಸರಿಯಾದ ಕ್ರಮ ವಹಿಸುವಂತೆ ಸೂಚಿಸಿದರು ಆದೇಶ ಮಾಡಿದರು ಆದರೆ ಈ ಬಂಡ ಮಾನಗೆಟ್ಟ ಐ ಆರ್ ಬಿ ಕಂಪನಿ ಜಗ್ಗಲೆ ಇಲ್ಲ ಬದಲಾಗಿ ಸ್ಥಳಿಯ ಕೆಂದ್ರ ಸಚಿವರ ಮೂಲಕ ಒತ್ತಡಗಳನ್ನು ತರುವುದು ರಾಜಕಿಯವನ್ನು ಮಾಡುವ ಬಂಡತಕ್ಕೆ ಇಳಿಯಿತು ಇದರ ಪರಿಣಾಮ ಈ ಜಿಲ್ಲೆಯ ಜನತೆ ಸಾವು ನೋವುಗಳನ್ನು ಅನುಭವಿಸುಂತಾಗಿದೆ ಜಿಲ್ಲೆಯ‌ಅಂಕೋಲಾ ಶಿರೂರಿನಲ್ಲಿ ಈ ಮಾನಗೇಡಿ ಐ ಆರ್ ಬಿ ಕಂಪನಿಯ ರಸ್ತೆ ಕಾಮಗಾರಿಯ ಕಾರಣ ಅಮಾಯಕ ಅಸಹಾಯಕರ ಮಾರಣ ಹೊಮವೆ ನಡೆದು ಹೊಗಿದೆ ಈಗಾಗಲೆ ಸಾವಿನ ಸಂಖ್ಯೆ ಏಳಕ್ಕೆ ಎರಿದ್ದು ಇನ್ನು ಹೆಚ್ಚಾಗುವ ಸಾಧ್ಯತೆಗಳು ಕಂಡುಬರುತ್ತಿದೆ ಇಷ್ಟೆಲ್ಲಾ ಆದರೂ ಕೂಡ ಈ ಮಾನಗೆಟ್ಟ ಐ ಆರ್ ಬಿ ಕಂಪನಿ ತನ್ನ‌ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ ಬದಲಾಗಿ ನಮ್ಮ ತಪ್ಪಿಲ್ಲ ಎಂದು ಹೇಳುತ್ತದೆ ಹಾಗೆ ಜನರಿಂದ ಟೋಲ್ ಬೂತಿನಿಂದ ಜನರಿಂದ ನಿರಾತಂಕವಾಗಿ ಟೋಲ್ ವಸೂಲಿ ಮಾಡುತ್ತಲೆ ಇದೆ

ಹೌದು ವಿಕ್ಷಕರೆ ಇಷ್ಟೆಲ್ಲ ಅವಘಡಗಳಾದರೂ ಐ ಆರ್ ಬಿ ಕಂಪನಿಗೆ ಯಾವುದೆ ಪಶ್ಚಾತಾಪ ಇರುವಂತೆ ಕಂಡುಬರುತ್ತಿಲ್ಲ ಜಿಲ್ಲೆಯ ಜನತೆ ಈ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರತ್ತ ಆಶಾ ಭಾವನೆಯಿಂದ ನೊಡುತ್ತಿರುವುದಂತು ಸತ್ಯ ಸಚಿವರು ಕೂಡ ಅವಘಡಕ್ಕೆ ಇಡಾದ ಸ್ಥಳದಲ್ಲೆ ಮೊಕ್ಕಾಮ್ ಹುಡಿದ್ದು ಮುಂದಾಗುವ ಅಪಾಯದ ಬಗ್ಗೆ ಅಧಿಕಾರಿಗಳೊಂದಿಗೆ ಅಧ್ಯಯನ ನಡೆಸಿ ಅಪಾಯವನ್ನು ತಡೆಯುವ ಮಾರ್ಗಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ ಈಗಾಗಲೆ ಐ ಆರ್ ಬಿ ಅವಘಡದಿಂದ ತೊಂದರೆ ಜಿವಹಾನಿ ನಷ್ಟಕ್ಕೆ ಇಡಾದವರಿಗೆ ಪರಿಹಾರವನ್ನು ಒದಗಿಸುವ ಕೆಲಸವನ್ನು ಸಚಿವ ಮಂಕಾಳು ವೈದ್ಯರು ಮಾಡುತ್ತಿದ್ದಾರೆ

ಈ ಅವಘಡದ ಕಾರಣ ಜಿಲ್ಲೆಯ ಜನತೆ ಐ ಆರ್ ಬಿ ಕಂಪನಿಯ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು ಜಿಲ್ಲೆಯಲ್ಲಿರುವ ಎಲ್ಲಾ ಟೊಲ್ಗಳನ್ನು ಬದ್ ಮಾಡಿಸಬೇಕು ಎಂದು ಸಚಿವರಲ್ಲಿ ಒತ್ತಾಯವನ್ನು ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ

ಸಚಿವರು ಅಪಾಯದಿಂದ ಜರ್ಜರಿತರಾದವರ ಹಾಗು ಅವರ ಕುಟುಂಬದ ನೆರವಿಗೆ ನಿಂತಿದ್ದು ಸಚಿವರ ಕಾರ್ಯದಿಂದ ಉತ್ತರ ಕನ್ನಡಿಗರು ಆಶಾಬಾವನೆಯನ್ನು ಹೊಂದಿದ್ದಾರೆ ಆದಷ್ಟು ಬೇಗ ಐ ಆರ್ ಬಿ ಕಂಪನಿಯ ಮಾರಣಹೊಮಕ್ಕೆ ತಕ್ಕ ಪಾಠವನ್ನು ಸಚಿವ ಮಂಕಾಳು ವೈದ್ಯರು ಕಲಿಸಲಿದ್ದಾರೆ ಎಂದು ಆಡಿಕೊಳ್ಳುತ್ತಿದ್ದಾರೆ ಒಟ್ಟಾರೆ ಈ ಬುದ್ದಿಗೇಡಿ ಐ ಆರ್ ಬಿ ಕಂಪನಿಯಿಂದ ತಮ್ಮಗೆ ಮುಕ್ತಿ ಸಿಕ್ಕಿ ಈ ಕಂಪನಿಯನ್ನು ಜಿಲ್ಲೆಯಿಂದ ಓಡಿಸಿದರೆ ಸಾಕು ಎಂದು ಹೇಳುತ್ತಿದ್ದಾರೆ ಉತ್ತರ ಕನ್ನಡಿಗರು

WhatsApp
Facebook
Telegram
error: Content is protected !!
Scroll to Top