ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಂಕಾಳು ವೈದ್ಯ
ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನೊಡಿಕೊಳ್ಳಿ ನೌಕಾನೆಲೆಯ ಅಧಿಕಾರಿಗಳಿಗೆ ಸಚಿವ ಮಂಕಾಳು ವೈದ್ಯ ಸೂಚನೆ
ಕಾರವಾರ ; ಸಿಬರ್ಡ ನೌಕಾನೆಲೆಯಿಂದ ನೀರು ಹೊರಹೋಗದೆ ಅಕ್ಕಪಕ್ಕ ಗ್ರಾಮಗಳ ಮನೆಗಳಿಗೆ ನೀರು ತುಂಬಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಸಚಿವ ಮಂಕಾಳು ವೈದ್ಯರು ಜಲಾವೃತ ಗ್ರಾಮಕ್ಕೆ ಬೇಟಿ ನಿಡಿ ಪರಿಶೀಲನೆ ನಡೆಸಿ ಜನ ಸಾಮಾನ್ಯರಿಗೆ ಆಗುವ ತೊಂದರೆಯನ್ನು ಈ ಕೂಡಲೆ ಪರಿಹರಿಸುವಂತೆ ನೌಕಾನೇಲೆಯ ಅಧಿಕಾರಿಗಳಿಗೆ ಸಚಿವರು ಸೂಚನೆಯನ್ನು ನೀಡಿದರು
ಹೌದು ವೀಕ್ಷಕರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಅತಿವೃಷ್ಟಿಯ ಕಾರಣ ಸಾರ್ವಜನಿಕರು ಹೈರಾಣಾಗಿಹೊಗಿದ್ದು ಈ ಸಮಸ್ಯೆಯ ಮದ್ಯ ಈ ಐ ಆರ್ ಬಿ ಮತ್ತು ನೌಕಾನೇಲೆಯ ಕಾರಣ ಜಿಲ್ಲೆಯಲ್ಲಿ ಗುಡ್ಡ ಕುಸಿತ ಗೊಂಡು ಅನೇಕ ಸಾವು ನೋವುಗಳು ಸಂಬವಿಸುತ್ತಿದ್ದು ಉತ್ತರ ಕನ್ನಡದ ಅನೇಕ ಗ್ರಾಮಗಳು ಜಲಾವೃತಗೊಂಡಿದೆ ಅಂಕೋಲದ ಶಿರೂರಿನಲ್ಲಿ ಐ ಆರ್ ಬಿ ಅವೈಜ್ಞಾನಿಕ ಕಾಮಗಾರಿ ಇಂದ ಗುಡ್ಡ ಕುಸಿದ್ದು ಸಾವಿನ ಸಂಖ್ಯೆ ಏಳಕ್ಕೆ ಎರಿದೆ ಈ ಪರಿಸ್ಥಿತಿ ಹಸಿಯಾಗಿರುವಾಗಲೆ ಕಾರವಾರದ ಸಿಬರ್ಡ ನೌಕಾನೆಲೆಯಿಂದ ಸಮರ್ಪಕವಾಗಿ ನೀರು ಹೊರಹೊಗದ ಕಾರಣ ಅಕ್ಕಪಕ್ಕದ ಗ್ರಾಮಗಳು ಜಲಾವೃತವಾಗಿದ್ದು ಗ್ರಾಮದ ಮನೆಗಳಿಗೆ ನೀರು ಹೊಕ್ಕಿ ಗ್ರಾಮಸ್ಥರ ಜೀವನ ಮೂರಾಬಟ್ಟೆಯಾಗಿ ಹೋಗಿದೆ ಸ್ಥಳಕ್ಕೆ ಸಚಿವ ಮಂಕಾಳು ವೈದ್ಯರು ಬೇಟಿ ನೀಡಿದ್ದು ಪರಿಶಿಲನೆ ನಡೆಸಿದ್ದಾರೆ ಈ ಸಂದರ್ಬದಲ್ಲಿ ಸಚಿವರು ಸ್ಥಳಿಯ ಸಾರ್ವಜನಿಕರಿಗೆ ಸಿಬರ್ಡ ನೌಕಾನೆಲೆಯ ಕಾರಣ ಆಗುತ್ತಿರುವ ಸಮಸ್ಯೆಯನ್ನು ಕೂಡಲೆ ಸರಿಪಡಿಸುವಂತೆ ಹೇಳಿದರು
ಈ ಸಂದರ್ಬದಲ್ಲಿ ಅವರು ಮಾದ್ಯಮದ ಜೊತೆ ಮಾತನಾಡಿ ನನ್ನ ಜಿಲ್ಲೆಯಾದ ಉತ್ತರ ಕನ್ನಡದ ಜನತೆ ಈ ಐ ಆರ್ ಬಿ ಮತ್ತು ಸಿಬರ್ಡ ನೌಕಾನೆಲೆಯ ಕಾರಣ ತೊಂದರೆಯನ್ನು ಅನುಭವಿಸುವಂತಾಗಿದೆ ಇದು ಖಂಡನಿಯ ಅಭಿವೃದ್ದಿಯ ಹೆಸರಲ್ಲಿ ಜನ ಸಾಮಾನ್ಯರಿಗೆ ತೊಂದರೆ ನೀಡುವುದನ್ನು ನಾನು ಸಹಿಸುವುದಿಲ್ಲ ಜಿಲ್ಲೆಯ ಜನತೆಯ ಸಹನೆಯನ್ನು ಪರಿಕ್ಷಿಸಬೇಡಿ ಅವರ ಸಹನೆಗೆ ಕೂಡ ಒಂದು ಮಿತಿಯಿದೆ ಅದನ್ನು ಪರೀಕ್ಷಿಸ ಬೇಡಿ ಜನತೆ ಸಮಸ್ಯೆಗೆ ಹಾಗು ಉಂಟಾದ ನಷ್ಟಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು
ಈ ಸಂದರ್ಬದಲ್ಲಿ ಅಂಕೋಲ ಸಚಿವ ಸತೀಶ್ ಸೈಲ್ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಹಾಗು ಇತರ ಅಧಿಕಾರಿಗಳು ಉಪಸ್ಥಿತರಿದ್ದರು