ಮಗಳ ಆತ್ಮಹತ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಭಟ್ಕಳ : ಮಗಳು ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದನ್ನು ನೋಡಿದ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರ್ಪನಕಟ್ಟೆ ಯಲ್ವಡಿಕೌವರ ಗ್ರಾಮ ಪಂಚಾಯತ ವ್ಯಾಪ್ತಿಯ ಗೋರಿಕಲ್ಲ ಮನೆಯಲ್ಲಿ ನಡೆದಿದೆ
ಮೃತ ತಾಯಿ ಕೃಷ್ಣಮ್ಮ ನಾರಾಯಣ ನಾಯ್ಕ ( 55) ಮಗಳು ಮಾದೇವಿ ದೊಡ್ಡಯ್ಯ ನಾಯ್ಕ (37) ಎಂದು ತಿಳಿದು ಬಂದಿದೆ.
ಮೃತ ಮಾದೇವಿ ದೊಡ್ಡಯ್ಯ ನಾಯ್ಕ ಕಳೆದ 14 ವರ್ಷದ ಹಿಂದಷ್ಟೇ ಮದುವೆಯಾಗಿ ಕಳೆದ 12 ವರ್ಷಗಳಿಂದ ತನ್ನ ತಾಯಿ ಮನೆಯ ಸಮೀಪದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಳು 8ನೇ ತರಗತಿ ಓದುತ್ತಿರುವ ಮಗಳು ಹಾಗೂ 5ನೇ ತರಗತಿ ಓದುತ್ತಿರುವ ಓರ್ವ ಮಗನಿದ್ದಾನೆ. ಇಂದು ಸಂಬಂಧಿಕರ ಮದುವೆ ಇದ್ದ ಕಾರಣ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳು ಮಾದೇವಿ ನೇಣಿಗೆ ಶರಣಾಗಿದ್ದಾಳೆ. ಇದನ್ನು ನೋಡಿದ ತಾಯಿ ಕೂಡ ಅಲ್ಲೇ ಸಮೀಪವಿದ್ದ ತಮ್ಮ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ದಾರುಣ ಘಟನೆ ನಡೆದಿದೆ.
ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸದ್ಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾಗಿದೆ.