ಕ್ರಷೀ ಚಟುವಟಿಕೆಯ ಬಗ್ಗೆ ಜಾಗ್ರತಿ ಮೂಡಿಸಿದ ವಿಧ್ಯಾರ್ಥಿಗಳು
ಭಟ್ಕಳ ತಾಲೂಕಿನ ವಿದ್ಯಾ ಭಾರತಿ ಇಂಗ್ಲೀಷ್ ಮಿಡಿಯಂ ಶಾಲೆಯ ವಿದ್ಯಾರ್ಥಿಗಳು ಸ್ವತಃ ರೈತನಾಗಿ ಗದ್ದೆ ನಾಟಿ ಮಾಡುವ ಖುಷಿಯ ಕ್ಷಣವನ್ನು ಅನುಭವಿಸಿದರು.
ಹೌದು ಇತ್ತಿಚೀಗೆ ಕೃಷಿ ಕಾರ್ಯದಿಂದ ಹೆಚ್ಚಿನ ರೈತರು ವಿಮುಖವಾಗಿದ್ದು, ಮಕ್ಕಳು ರೈತರು ಮಾಡುವ ಕೃಷಿ ಚಟುವಟಿಕೆಗಳನ್ನು ಕಣ್ಣಾರೆ ನೋಡಲು ಸಿಗುವುದು ಕಷ್ಟ ಎಂಬಂತ ಪರಿಸ್ಥಿತಿ ತಲೆದೋರಿದೆ ಆದರೆ ಈ ನಡುವೆ ವಿದ್ಯಾಭಾರತಿ ಶಾಲೆಯ ಆಡಳಿತ ಮಂಡಳಿ ಹಾಗೂ ವಿಶೇಷವಾಗಿ ಇಲ್ಲಿನ ಪ್ರಾಂಶುಪಾಲರಾದ ರೂಪಾ ಖಾರ್ವಿಯವ ಆಸಕ್ತಿಯಿಂದಾಗಿ ವಿದ್ಯಾರ್ಥಿಗಳು ಕೂಡ ಇಂತಹ ಕಾರ್ಯಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ಅನ್ನದ ಮಹತ್ವವನ್ನು ತಿಳಿಯಬೇಕು ಎಂಬ ದೃಷ್ಠಿಯಿಂದ ತಮ್ಮ ಶಾಲೆ ಮಕ್ಕಳಿಗಾಗಿ ವಿನೂತನವಾದ ಗದ್ದೆ ನಾಟಿ ಕಾರ್ಯಕ್ರಮವನ್ನು ಆಸರಕೇರಿಯ ಜಂಬೂರಮಠ ಗದ್ದೆಯಲ್ಲಿ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಅಧಿಕಾರಿ ಮೇಘನಾ ಖಾರ್ವಿ ಕೇವಲ ಗದ್ದೆ ಉಳುಮೆ ಮಾಡಿದ ಮಾತ್ರಕ್ಕೆ ಕೃಷಿ ಕಾರ್ಯ ಮುಕ್ತಾಯವಾಗುವುದಿಲ್ಲ ನಾವು ತಿನ್ನುವ ಅನ್ನಕ್ಕೆ ರೈತರು ನಿರಂತgವÀವಾಗಿ ತಮ್ಮ ಪರಿಶ್ರಮವನ್ನು ಧಾರೆಯೆರೆಯಬೇಕಾಗುತ್ತದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದ ಮೂಲಕ ಕೃಷಿ ಚಟುವಟಿಕೆಯ ಕುರಿತಾಗಿ ಸಂಪಾದಿಸುವ ಜ್ಞಾನವು ಅವರ ಮುಂದಿನ ಜೀವನಕ್ಕೆ ಪಾಠವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವವನ್ನು ತಿಳಿಹೇಳಿದರು.
ಬೈಟ್: ಮೇಘನಾ ಖಾರ್ವಿ
ಒಟ್ಟಾರೆ ಇಂತಹ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳು ಮೇಲಿಂದ ಮೇಲೆ ಹಮ್ಮಿಕೊಳ್ಳುತ್ತಿದ್ದರೆ ಅನ್ನದ ಮಹತ್ವದ ಜತೆಗೆ ರೈತರ ಶ್ರಮವನ್ನು ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುವುದಂತೂ ಸತ್ಯ