ಧರಾಶಾಯಿಯಾದ ಪುರಾತನ ದೇವಸ್ಥಾನದ ಗರ್ಭಗುಡಿ
ಖಾಸಗಿ ಕಟ್ಟಡ ಕಾಮಗಾರಿ ಮತ್ತು ಐ ಆರ್ ಬಿ ಕಂಪನಿಯ ರಸ್ತೆ ಕಾಮಗಾರಿಯ ಕಾರಣ ಅಪಾಯದ ಅಂಚನ್ನು ತಲುಪಿದ ಕೊರಗಕೇರಿಯ ಕನ್ನಡ ಶಾಲೆ
ಭಟ್ಕಳ : ತಾಲೂಕಿನ ಕೋಟೇಶ್ವರ ನಗರದ ಕೊರಗಾರಕೇರಿಯ ಮುಂಭಾಗದಲ್ಲಿನ ಐ ಆರ್ ಬಿ ಕಂಪನಿ ನಡೆಸುವ ಎನ್ ಎಚ್ 66 ರಾಷ್ಡ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಹಾಗು ಖಾಸಗಿ ವ್ಯಕ್ತಿಯೊಬ್ಬನ ಕಟ್ಟಡ ಕಾಮಗಾರಿಯ ಕಾರಣ ಇಲ್ಲಿನ ನಿವಾಸಿಗಳು ಹೈರಾಣಾಗಿದ್ದು ಅತ್ತ ದರಿ ಇತ್ತ ಪುಲಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೆ ಇಲ್ಲಿನ ಕನ್ನಡ ಶಾಲೆಯೊಂದು ಅಳಿವಿನ ಅಂಚನ್ನು ಬಂದು ತಲುಪಿದ್ದು ಮುಂದಿನ ದಿನದಲ್ಲಿ ಭಾರಿ ಸಾವು ನೋವುಗಳು ಸಂಬವಿಸುವ ಮುನ್ಸೂಚನೆ ಕಂಡು ಬರುತ್ತಿದೆ
ಹೌದು ವೀಕ್ಷಕರೆ ನಮ್ಮ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಅಭಿವೃದ್ದಿಗಾಗಿ ಹೆಚ್ಚಿನ ಒತ್ತನ್ನು ನೀಡುತ್ತಲೆ ಬರುತ್ತಿದ್ದಾರೆ ಆದರೆ ಭಟ್ಕಳ ತಾಲೂಕಿನಲ್ಲಿ ದೇವರುಕೊಟ್ಟರು ಪೂಜಾರಿ ಕೊಡ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಸಚಿವರು ದೀನ ದಲಿತರು ಅಸಹಹಾಯಕರ ಕಷ್ಟ ನಿವಾರಣೆ ಅನೇಕ ಪ್ರಯತ್ನಗಳನ್ನು ಮಾಡಿ ಯಶಸ್ವಿಯು ಆಗಿದ್ದಾರೆ ಈ ಮಧ್ಯ ಕೆಲವೋಂದು ಹಿತಾಸಕ್ತಿ ತಮ್ಮ ಸ್ವಾರ್ಥ ಸಾದನೆಗಾಗಿ ಬಡವರ ಕಣ್ಣಲ್ಲಿ ನೀರು ತರಿಸುವ ಕೆಲಸ ಮಾಡುತ್ತಲೆ ಬರುತ್ತಿದ್ದಾರೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ತಾಲೂಕಿನ ಕೋಟೆಶ್ವರ ನಗರ ಮುಂಬಾಗದಲ್ಲಿ ಐ ಆರ್ ಬಿ ಕಂಪನಿ ರಸ್ತೆ ಕಾಮಗಾರಿ ಹೆಸರಿನಲ್ಲಿ ಕೊಟೆಶ್ವರ ನಗರದ ಗುಡ್ಡ ಕೊರೆದು ಸ್ಥಳಿಯ ನಿವಾಸಿಗಳಿಗೆ ಮಾನಸಿಕ ಹಿಂಸೆಯನ್ನು ನಿಡುತ್ತಿದ್ದಾರೆ ಇವರ ಈ ಅವೈಜ್ಞಾನಿಕ ಕಾಮಗಾರಿಯ ಕಾರಣ ಗುಡ್ಡ ಕುಸಿತವಾಗಿ ದೇವಸ್ಥಾನವೊಂದರ ಗರ್ಭಗುಡಿ ದರಾಶಾಯಿಯಾಗಿ ಸಂಪೂರ್ಣ ನಾಶವಾಗಿ ಹೊಗಿದೆ ಅಲ್ಲದೆ ಕೊಟೇಶ್ವರ ಕನ್ನಡ ಶಾಲೆಯೊಂದು ಕುಸಿಯುವ ಅಪಾಯವನ್ನು ಹೊಂದಿದೆ ಐ ಆರ್ ಬಿ ಈ ಬಗೆಯ ಕರ್ಮಕಾಂಡ ಹೀಗಾದರೆ ಇನ್ನೊಂದು ಕಡೆ ಖಾಸಗಿ ವ್ಯಕ್ತಿಯೋರ್ವ ಈ ಕೋಟೆಶ್ವರ ನಗರಕ್ಕೆ ತಾಗಿಸಿಕೊಂಡು ಬಹು ಮಹಡಿ ಕಟ್ಟಡವನ್ನು ಕಟ್ಟುತ್ತಿದ್ದು ಇತ ಈಗಾಗಲೆ ಅಲ್ಲಿ ನೇಲಮಹಡಿಗಾಗಿ ಭೂಮಿಯನ್ನು ಕೊರೆದಿದ್ದು ಈಗ ಅಕ್ಕಪಕ್ಕದ ಎತ್ತರ ಪ್ರದೇಶದ ಗುಡ್ಡಗಳು ಕುಸಿಯುತ್ತಿದ್ದು ಕೊಟೇಶ್ವರ ನಗರದ ಅಮಾಯಕ ಕೊರಗ ಜನಾಂಗವು ಭಯದಲ್ಲಿ ಬದುಕುವ ಪರಿಸ್ತಿತಿ ನಿರ್ಮಾಣವಾಗಿದೆ ಜಿಲ್ಲೆಯಲ್ಲಿ ಐ ಆರ್ ಬಿ ಕಂಪನಿ ನಡೆಸುವ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಈಗಾಗಲೆ ಸಚಿವ ಮಂಕಾಳು ವೈದ್ಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ಆದರೆ ಈ ರಸ್ತೆ ಪ್ರಾದಿಕಾರ ಮತ್ತು ಐ ಆರ್ ಬಿ ಕಂಪನಿಯ ನೌಕರರು ಅಧಿಕಾರಿಗಳು ನಮ್ಮದ್ದು ಕೆಂದ್ರ ಸರಕಾರದ ಕಾಮಗಾರಿ ನಾವು ರಾಜ್ಯ ಸರಕಾರದ ಸಚಿವರಿಗ್ಯಾಕೆ ಉತ್ತರಿಸ ಬೇಕು ಎಂಬ ಉಡಾಪೆಯನ್ನು ತೊರಿಸುತ್ತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಹೆದ್ದಾರಿ ಪ್ರಾದಿಕಾರ ಮತ್ತು ಐ ಆರ್ ಬಿ ಕಂಪನಿಯ ಉಡಾಪೆಯ ತಿಕ್ಕಲು ತನಕ್ಕೆ ಇಂದು ಜಿಲ್ಲೆಯ ಜನರು ಜೀವ ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ತಾಲೂಕಿನ ಕೋಟೇಶ್ವರ ನಗರದ ಸ್ಥಳಿಯರು ಕ್ಷಣ ಕ್ಷಣಕ್ಕೂ ಭಯದಿಂದ ಬದುಕುವುದು ನಾವು ನೋಡಬಹುದಾಗಿದೆ ಇನ್ನು ಇಲ್ಲಿ ಬಹುಮಹಡಿ ಕಟ್ಟುವ ಅವಕಾಶವನ್ನು ಭಟ್ಕಳ ಪುರಸಭೆ ನೀಡಿದ್ದಾರು ಹೇಗೆ ಈಗಾಗಲೆ ಸ್ಥಳಿಯ ಸಾರ್ವಜನಿಕರು ಈ ಕಟ್ಟದ ಬಗ್ಗೆ ಪುರಸಭೆ ಮುಂದೆ ವಿರೋದ ವ್ಯಕ್ತ ಪಡಿಸಿರುವುದು ನಮ್ಮ ಮಾಧ್ಯಮಕ್ಕೆ ತಿಳಿದು ಬಂದಿದೆ ಹಾಗಾದರೆ ಪುರಸಭೆ ಮಾಡುತ್ತಿರುವುದಾದರು ಏನು ಒಂದು ವೇಳೆ ಇಲ್ಲಿ ಅಮಾಯರ ಜೀವ ಹಾನಿಯಾದರೆ ಯಾರು ಹೊಣೆ ಕೇವಲ ಡಬ್ಬಲ್ ಟ್ಯಾಕ್ಸ ಹಾಕಿದರೆ ಪುರಸಭೆಯ ಕರ್ತವ್ಯ ಮುಗಿದು ಹೊಗುತ್ತದೆಯೆ ಅಥವಾ ಪುರಸಭೆ ತಾನು ಮಾಡಿದ್ದೆ ಆಡಳಿತ ಎಂದು ತಿಳಿದುಕೊಂಡಿದೆಯೆ ಎಂಬುವುದು ಸಾರ್ವಜನಿಕರ ಆಕ್ರೋಶದ ಪ್ರಶ್ನೇಯಾಗಿದೆ .
ಈ ಹಿನ್ನೆಲೆಯಲ್ಲಿ ತಾಲೂಕ ತಹಶಿಲ್ದಾರರು ಸ್ಥಳಕ್ಕೆ ಬೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿ ಈ ಬಗ್ಗೆ ಕೂಡಲೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಬರವಸೆಯನ್ನು ನೀಡಿದ್ದಾರೆ
ಒಟ್ಟಾರೆ ಐ ಆರ್ ಕಂಪನಿ ಹಾಗು ಖಾಸಗಿ ವ್ಯಕ್ತಿಯೊರ್ವನ ದಬ್ಬಾಳಿಕೆಗೆ ಬಡ ಅಮಾಯಕ ಕೊರಗ ಸಮಾಜದವರು ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ