ದುಶ್ಚಟಗಳಿಗೆ ಬಲಿಯಾಗಿ ಶೈಕ್ಷಣಿಕ ಜೀವನವನ್ನು ಹಾಳುಮಾಡಿಕೊಳ್ಳದಿರಿ :ಸಬ್ ಇನಸ್ಪೆಕ್ಟರ ರನ್ನ ಗೌಡ

ಪಾಶ್ಚಿಮಾತ್ಯ ಜೀವನ ಶೈಲಿಗೆ ಮಾರು ಹೋಗಿ ದುಶ್ಚಟಗಳಿಗೆ ಬಲಿಯಾಗಿ ಶೈಕ್ಷಣಿಕ ಜೀವನವನ್ನು ಹಾಳುಮಾಡಿಕೊಳ್ಳದಿರಿ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಸಬ ಇನಸ್ಪೆಕ್ಟರ ರನ್ನ ಗೌಡ ಹೇಳಿದರು

ಅವರು ಸರಕಾರಿ ಪ್ರೌಢಶಾಲೆ ಬೆಳಕೆಯ ಎನ್ ಎಸ್ ಎಸ್ ಘಟಕ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಭಟ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋದಿ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಾದಕ ವ್ಯಸನ ಒಂದು ಸಾಮಾಜಿಕ ಪಿಡುಗಾಗಿದೆ. ಪ್ರತಿ ವರ್ಷ 5.70 ಲಕ್ಷ ಜನರು ಮಾದಕ ವ್ಯಸನದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತ ದೇಶದ ಮಟ್ಟಿಗೆ ಹೇಳುವುದಾದರೆ 7.5 ಕೋಟಿ ಮಾದಕ ವ್ಯಸನಿಗಳಿದ್ದಾರೆ. ಪ್ರತಿ ದಿನ 10 ಜನರು ಮಾದಕ ವ್ಯಸನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುರಂತವೆಂದರೆ ಪ್ರತಿ 10 ಜನರಲ್ಲಿ ಇಬ್ಬರು 16 ವರ್ಷಕ್ಕಿಂತ ಕಡಿಮೆ ವಯೋಮಾನದವರಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳ್ಳಲು ನಿಮ್ಮ ಆಲೋಚನೆಗಳು ಯಾವಾಗಲು ಸಕಾರಾತ್ಮಕವಾಗಿರಲಿ. ಒಳ್ಳೆಯ ಶಿಕ್ಷಣ ಪಡೆದು ದೇಶಕ್ಕೆ ಕೊಡುಗೆಯನ್ನು ನೀಡಿರಿ ಎಂದು ಹೇಳಿದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪ್ರಕಾಶ ಶಿರಾಲಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಾನಗರಗಳಿಂದ ಗ್ರಾಮೀಣ ಭಾಗಗಳಿಗೂ ಇಂತಹ ಪಿಡುಗು ವ್ಯಾಪಿಸಿರುವುದು ದುರದೃಷ್ಟಕರ ವಿದ್ಯಾರ್ಥಿಗಳು ಈ ಬಗ್ಗೆ ಜಾಗ್ರತೆ ವಹಿಸ ಬೇಕು ಜೊತೆಗೆ ತಮ್ಮ ವ್ಯಾಪ್ತಿಯಲ್ಲಿ ಕಂಡುಬಂದರೆ ಪೊಲೀಸ ಸಹಾಯವಾಣಿಗೆ ಮಾಹಿತಿ ನೀಡಿ ಎಂದು ಹೇಳಿದರು. ಹೇಮಾವತಿ ಎಸ್ ವಂದಿಸಿದರು. ಪ್ರಶಾಂತಿ ನಾಯ್ಕ ಕಾರ್ಯಕ್ರಮವನ್ನು ಸಂಘಟಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ ಇಲಾಖೆಯ ಅಕ್ಷತ ಕುಮಾರ ಔಜಿ,ವಿನೋದ ಕುಮಾರ, ಶಿಕ್ಷಕರಾದ ಸವಿತಾ ನಾಯ್ಕ ಪ್ರಶಿಕ್ಷಣಾರ್ಥಿ ಮೇಘನಾ ನಾಯ್ಕ ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.

WhatsApp
Facebook
Telegram
error: Content is protected !!
Scroll to Top