ಜಿಲ್ಲೆಗೆ ಮಾದರಿಯಾದ ಬೀನಾ ವೈದ್ಯ. ಶಿಕ್ಷಣ ಸಂಸ್ಥೆ
ಭಟ್ಕಳದ ಪ್ರತಿಷ್ಟೀತ ಬೀನಾ ವೈದ್ಯ ಇಂಟರ್ ನ್ಯಾಷನಲ್ ಸ್ಕೂಲಿಗೆ “ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ್ ಅವಾರ್ಡ ಮತ್ತು “ಒಲಂಪಿಯಾಡ್ ವಿನ್ನರ್ ಅವಾರ್ಡ್ 2023-2024” ಪ್ರಶಸ್ತಿಯಗಳು ದೊರೆತಿದ್ದು ಶಿಕ್ಷಣ ಸಂಸ್ಥೆ ಇಡಿ ಜಿಲ್ಲೆಗೆ ಮಾದರಿಯಾಗಿ ಹೊರಹೊಮ್ಮಿದೆ
2023-2024 ನೇ ಶೈಕ್ಷಣಿಕ ವರ್ಷದಲ್ಲಿ “ಸಿಲ್ವರ್ ನ್ ಪೌಂಡೇಶನ್’ ನ್ಯೂ ಡೆಲ್ಲಿ, ಅವರು ಏಷ್ಯ ಖಂಡದಾದ್ಯಂತ ಆಯೋಜಿಸಿದ ‘ವರ್ಲ್ಡ ಬಿಗ್ಗೆಸ್ಟ್ ಇಂಟರ್‌ನ್ಯಾಷನಲ್ ಒಲಂಪಿಯಾಡ್’, ಪರೀಕ್ಷೆಯಲ್ಲಿ ಮುರ್ಡೇಶ್ವರದ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅತ್ಯುನ್ನತ ಸಾಧನೆ ಮಾಡಿದೆ.
‘ಸಿಲ್ವರ ನ್ ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ್ ಅವಾರ್ಡ್ 2023-2024’ ಪ್ರಶಸ್ತಿಯನ್ನು ಹಾಗೂ ‘ಒಲಂಪಿಯಾಡ್ ವಿನ್ನರ್ 2023-2024ರ ಪ್ರತಿಷ್ಠಿತ ಪ್ರಶಸ್ತಿಗಳನ್ನು ಏಷ್ಯ ಖಂಡದ ಸ್ಕೂಲ್‌ಗಳೊಂದಿಗೆ ಸ್ಪರ್ಧಿಸಿ ತನ್ನದಾಗಿಸಿಕೊಳ್ಳುವ ಮೂಲಕ ಸಾಧನೆ ಮಾಡಿದೆ.
2023-2024ರ ಸಿಲ್ವರ್ ಝೋನ್ ಒಲಂಪಿಯಾಡ್ ಪರೀಕ್ಷೆಯನ್ನು ಒಟ್ಟು 184 ವಿದ್ಯಾರ್ಥಿಗಳು ಬರೆದಿದ್ದು ಅದರಲ್ಲಿ 103 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದರು, 76 ವಿದ್ಯಾರ್ಥಿಗಳು ಬೆಳ್ಳಿಯ ಪದಕಗಳನ್ನು ಪಡೆದರು ಮತ್ತು 05 ವಿದ್ಯಾರ್ಥಿಗಳು ಕಂಚಿನ ಪದಕ ಪಡೆದರು. ಶಾಲೆಯ ಎರಡು ವಿದ್ಯಾರ್ಥಿಗಳು ನಗದು ಬಹುಮಾನವನ್ನು ಪಡೆದು ಪುರಸ್ಕೃತರಾಗಿದ್ದಾರೆ. 83 ವಿದ್ಯಾರ್ಥಿಗಳು ದ್ವಿತೀಯ ಹಂತದ ಸಿಲ್ವರ್ ರೋನ್ ಪರೀಕ್ಷಗೆ ಆಯ್ಕೆಯಾಗಿದ್ದಾರೆ. ಶಿಕ್ಷಕಿ ವಿದ್ಯಾ ನಾಯ್ಕ ‘ಎಕ್ಸಲೆಂಟ್ ಎಕ್ಸಾಮ್ ಇನ್‌ಚಾರ್ಜರ್’ ಪ್ರಶಸ್ತಿಯನ್ನು, ಶ್ರೀಮತಿ ಕಾಮಾಕ್ಷಿ ಪ್ರಭು ‘ಬೆಸ್ಟ್ ಸೂಪರ್‌ವೈಸರ್’ ಪ್ರಶಸ್ತಿಯನ್ನು ಗಳಿಸಿದರೆ, ಶಿಕ್ಷಕಿಯರಾದ ರಂಜೀತಾ ನಾಯ್ಕ ಹಾಗೂ ಶ್ವೇತಾ ಮೋಗೇರ ‘ಬೆಸ್ಟ್ ಕೊರ್ಡಿನೇಟರ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿಗಳು ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಥಿಕ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಶಾಲೆಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಮಾನ್ ಮಂಕಾಳ್ ವೈದ್ಯರವರು, ಸಂಸ್ಥೆಯ ಟ್ರಸ್ಟಿ ಹಾಗೂ ನಿರ್ದೇಶಕಿಯವರಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು, ಪ್ರಾಂಶುಪಾಲರಾದ ಡಾ.ಜಗನ್ನಾಥ ಗೊಂಡರವರು, ಶಿಕ್ಷಕ ವೃಂದದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿರುತ್ತಾರೆ.
ಒಟ್ಟಾರೆ ಬೀನಾ ವೈದ್ಯ ಇಂಟರ್ ನ್ಯಾಷನಲ್ ಸ್ಕೂಲ್ ದಿನದಿಂದ ದಿನಕ್ಕೆ ಯಶಸ್ವಿ ಪಥದತ್ತ ಸಾಗುತ್ತಿದ್ದು ವಿಧ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಪ್ರಮುಖ ಪಾತ್ರವನ್ನು ವಹಿಸುತ್ತಿದೆ